ಸ್ಟಾರ್ಗಿರಿ ಬಂದ ಮೇಲೆ ನಟ-ನಟಿಯರು ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವುದು ಮಾಮೂಲಿ. ಆದರೆ, ದುನಿಯಾ ವಿಜಯ್ ಮಾತ್ರ ಸೆಲೆಬ್ರಿಟಿ ಎನ್ನುವ ಅಹಂ ಇಲ್ಲದೆ ಸಣ್ಣ ಗುಡಿಸಲಿನ ಹೋಟೆಲ್ನಲ್ಲಿ ಉಪಹಾರ ಸೇವಿಸಿ ಸರಳತೆ ಮೆರೆದಿದ್ದಾರೆ. ಹೀಗಂತಾ ಹಿನ್ನೆಲೆ ಗಾಯಕ ನವೀನ್ ಸಜ್ಜು ಹೇಳಿದ್ದಾರೆ.
![simplicity duniya vijay : naveen sajju](https://etvbharatimages.akamaized.net/etvbharat/prod-images/6339593_thumb2.png)
ಸದ್ಯ ದುನಿಯಾ ವಿಜಿ ತಮ್ಮ ಸಲಗ ಚಿತ್ರವನ್ನು ತೆರೆಗೆ ತರುವ ಬ್ಯುಸಿಯಲ್ಲಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿದ್ದು, ಇದೇ ತಿಂಗಳಿನಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ಸಲಗ ಚಿತ್ರಕ್ಕೆ ಯಶಸ್ಸು ಸಿಗಲೆಂದು ಪ್ರಾರ್ಥಿಸಿದ್ದಾರೆ.
![simplicity duniya vijay : naveen sajju](https://etvbharatimages.akamaized.net/etvbharat/prod-images/6339593_thumb.png)
ದೇವಸ್ಥಾನನಕ್ಕೆ ಹೋಗುವಾಗ ದುನಿಯಾ ವಿಜಯ್ ಮತ್ತು ಚಿತ್ರತಂಡಕ್ಕೆ ಸಿಂಗರ್ ನವೀನ್ ಸಜ್ಜು ಕೂಡ ಸಾಥ್ ನೀಡಿದ್ದಾರೆ. ದುನಿಯಾ ವಿಜಯ್ ಜೊತೆಗೆ ಕಳೆದ ಕ್ಷಣಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಬರೆದಿರುವ ನವೀನ್ ಸಜ್ಜು, ಸರಳತೆಯ ಸಲಗ. ನಿನ್ನೆ ವಿಜಯಣ್ಣನೊಂದಿಗೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದೆ. ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯೆ ಸಿಕ್ಕ ಈ ಪುಟ್ಟ ಗುಡಿಸಲು ಹೋಟೆಲ್ಗೆ ಕರೆದೊಯ್ದ ವಿಜಿಯಣ್ಣ ಉಪಾಹಾರ ಕೊಡಿಸಿದ್ದರು. ಸ್ಟಾರ್, ಸಲೆಬ್ರಿಟಿ ಎಂಬ ಯಾವ ಅಹಂ ಇಲ್ಲದ ವಿಜಿಯಣ್ಣ ಇರುವುದೇ ಹೀಗೆ, ಬದುಕುತ್ತಿರುವುದು ಹೀಗೆ. ಹಿ ಈಸ್ ಸೋ ಸಿಂಪಲ್. ನಿನ್ನೆಯ ಜರ್ನಿ ಅದ್ಭುತವಾಗಿತ್ತು. ಮುಂದಿನ ಸಲಗ ಜರ್ನಿ ಕೂಡ ಯಶಸ್ವಿಯಾಗಿ ಇರಲೆಂದು ಮಾದೇಶ್ವರನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಸಲಗ ಚಿತ್ರವನ್ನು ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿದ್ದಾರೆ. ದೇವಸ್ಥಾನಕ್ಕೆ ಹೋಗುವಾಗ ವಿಜಯ್ ಜೊತೆ ಪತ್ನಿ ಕೀರ್ತಿ ಕೂಡ ಜೊತೆಯಲ್ಲಿದ್ದರು.