ETV Bharat / sitara

'ಗಂಟುಮೂಟೆ' ಚಿತ್ರ ನೋಡಿ ಮೆಚ್ಚಿಕೊಂಡ ಸಿಂಪಲ್​ ಸ್ಟಾರ್​​​ ರಕ್ಷಿತ್​​ ಶೆಟ್ಟಿ

author img

By

Published : Oct 28, 2019, 8:09 PM IST

1990ರ ದಶಕದ ಹೈಸ್ಕೂಲ್​​​​​ ಓದುವ ಹುಡುಗ, ಹುಡುಗಿ ಕಥೆಯನ್ನು 'ಗಂಟುಮೂಟೆ' ಚಿತ್ರದಲ್ಲಿ ತೋರಿಸಲಾಗಿದ್ದು, ನಟ ರಕ್ಷಿತ್ ಶೆಟ್ಟಿ ಕೂಡಾ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಗಂಟುಮೂಟೆ'

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ನಿರ್ದೇಶಕರ ಸಿನಿಮಾಗಳು ಗಮನ‌ ಸೆಳೆಯುತ್ತಿವೆ. ಇದೀಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಹೆಸರು ಮಾಡಿ, ಪ್ರಶಸ್ತಿಗಳನ್ನೂ ಪಡೆದುಕೊಂಡಿರುವ 'ಗಂಟುಮೂಟೆ' ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆದಿದ್ದು, ಇತ್ತೀಚೆಗೆ ನಟ ರಕ್ಷಿತ್ ಶೆಟ್ಟಿ ಕೂಡಾ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದೊಂದಿಗೆ ಸ್ವಲ್ಪ ಸಮಯ ಕಳೆದ ರಕ್ಷಿತ್ ಶೆಟ್ಟಿ, ಇಂತಹ ಸಿನಿಮಾ ಕನ್ನಡದ ಮಟ್ಟಿಗೆ ಬಹಳ ಅಪರೂಪ ಎಂದು ಹಾಡಿ ಹೊಗಳಿದ್ದಾರೆ. ಚಿತ್ರದ ನಿರ್ದೇಶಕಿ ರೂಪಾ ರಾವ್, ನಟಿ ತೇಜು ಬೆಳವಾಡಿ, ನಿಶ್ಚಿತ್ ಕೊರೋಡಿ ಹಾಗೂ ಇನ್ನಿತರರು ಈ ವೇಳೆ ಹಾಜರಿದ್ದರು. ಇದಕ್ಕೂ ಮುನ್ನ ನಿರ್ದೇಶಕ ಹೇಮಂತ್​​​​​ ರಾವ್ ಕೂಡಾ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. 1990ರ ದಶಕದ ಹೈಸ್ಕೂಲ್​​​​​ ಓದುವ ಹುಡುಗ, ಹುಡುಗಿ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಖ್ಯಾತ ನಟ ಪ್ರಕಾಶ್ ಬೆಳವಾಡಿ ಪುತ್ರಿ ತೇಜು ಬೆಳವಾಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪರಭಾಷೆ ಚಿತ್ರಗಳ ನಡುವೆ ಇಂತಹ ಒಂದು ಕನ್ನಡ ಸಿನಿಮಾ ಪೈಪೋಟಿ ನೀಡಿ ಪ್ರದರ್ಶನಗೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.

Intro:ಗಂಟುಮೂಟೆ ಸಿನಿಮಾ ನೋಡಿ ಹಾಡಿ ಹೊಗಳಿದ
ರಕ್ಷಿತ್ ಶೆಟ್ಟಿ!!

ಕನ್ನಡ ಚಿತ್ರರಂಗದಲ್ಲಿ ಹೊಸ ನಿರ್ದೇಶಕರ ಸಿನಿಮಾಗಳು ಗಮನ‌ ಸೆಳೆಯುತ್ತಿವೆ..ಇದೀಗಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಹೆಸರು ಮಾಡಿ, ಪ್ರಶಸ್ತಿಗಳ ಪಡೆದುಕೊಂಡಿರುವ ಗಂಟುಮೂಟೆ ಸಿನಿಮಾ ರಿಲೀಸ್ ಆಗಿ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ...ಈಗ ಚಿತ್ರಮಂದಿರಗಳಲ್ಲಿ ಎರಡನೇ ವಾರಕ್ಕೆ ಮುನ್ನುಗ್ಗಿರುವ ಗಂಟುಮೂಟೆ ಯನ್ನು ಇತ್ತೀಚಿಗೆ ಪ್ರಸಿದ್ಧ ನಟ ರಕ್ಷಿತ್ ಶೆಟ್ಟಿ ಯವರು ನೋಡಿ, ತುಂಬಾ ಮೆಚ್ಚಿ ತಂಡದೊಂದಿಗೆ ಕೆಲವು ಅಮೂಲ್ಯ ಕ್ಷಣಗಳನ್ನು ಕಳೆದರು. ಇಂಥ ಸಿನಿಮಾ ಕನ್ನಡದ ಮಟ್ಟಿಗೆ ಅಪರೂಪ ಎಂದು ಹಾಡಿ ಹೊಗಳಿದರು. ಈ ಮುನ್ನ ಜನಪ್ರಿಯ ನಿರ್ದೇಶಕ ಹೇಮಂತ್ ರಾವ್ ರವರು ಸಹ ನಂಬಲಸಾಧ್ಯವಾದಂತ ಚಿತ್ರಕಥೆ ಮತ್ತು ಪ್ರತಿಭಾ ಪ್ರದರ್ಶನ ಎಂದು ನಿರ್ದೇಶಕ ಹೇಮಂತ್ ರಾವ್ ಹೇಳಿದ್ದಾರೆ...
ಗಂಟುಮೂಟೆ ಚಿತ್ರದ ನಿರ್ದೇಶಕಿ ರೂಪ ರಾವ್, ಮುಖ್ಯ  ತಾರಾಗಣದಲ್ಲಿ ತೇಜು ಬೆಳವಾಡಿ, ನಿಶ್ಚಿತ್ ಕೊರೋಡಿ ರಕ್ಷಿತ್ ಶೆಟ್ಟಿಗೆ ಸಾಥ್ ನೀಡಿದ್ದಾರೆ...Body:೯೦ ರ ದಶಕದಲ್ಲಿನ ಹೈಸ್ಕೂಲ್ ನಲ್ಲಿ ನಡೆಯುವ ಕಥೆ ಮೀರಾ ಎಂಬ ಹುಡುಗಿಯ ದೃಷ್ಟಿ
ಷ ಕೋನದಲ್ಲಿ ತೆರೆದುಕೊಳ್ಳುತ್ತದೆ. ನವಿರಾದ ಭಾವನೆಗಳ ಸಮ್ಮಿಲನ ಹಾಗು ಮೊದಲ ಪ್ರೇಮದ ತೊಳಲಾಟಗಳ ಮಧ್ಯೆ ವಿದ್ಯಾಭ್ಯಾಸದ ಒತ್ತಡ, ಪುಂಡರ ಹಾವಳಿ ಅವುಗಳನ್ನ ಹೊತ್ತು ನಡೆಯುವ ಪ್ರಯಾಣವೇ ಗಂಟುಮೂಟೆ. ಪರಭಾಷೆಯ ಚಿತ್ರಗಳ ಮಧ್ಯೆ ಇಂಥ ಒಂದು ಕನ್ನಡ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಅಂತಾ ನಿರ್ದೇಶಕ ಹೇಮಂತ್ ರಾವ್ ಹೇಳಿದ್ದಾರೆ..

Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.