ಹೈದರಾಬಾದ್: ತಮಿಳು ಚಿತ್ರರಂಗದ ಖ್ಯಾತ ನಟ ಶಿಂಬು ಅವರ ಕಾರು ಅಪಘಾತದಲ್ಲಿ ವೃದ್ಧ ವಿಕಲಚೇತನ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಬುಧವಾರ ನಡೆದ ಈ ಅಪಘಾತದಲ್ಲಿ ವಿಶೇಷ ಚೇತನ ವೃದ್ಧ ಮುನುಸ್ವಾಮಿ (70) ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಿಂಬು ಅವರ ಕಾರು ಚಾಲಕ ಸೆಲ್ವಂ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ವೇಳೆ ಕಾರಿನಲ್ಲಿ ಶಿಂಬು ಅಥವಾ ಅವರ ಕುಟುಂಬದವರು ಇದ್ದರಾ? ಅಥವಾ ಇಲ್ಲವಾ ಎಂಬುದರ ಬಗ್ಗೆ ಮಾಹಿತಿ ತಿಳಿಯಬೇಕಿದೆ.
-
Cctv footage of a differently abled man being run over by a car that belonged to actor Simbu’s father and director T Rajendran at T Nagar @TOIChennai pic.twitter.com/WBvveHkk54
— SINDHU KANNAN (@SindhukTOI) March 23, 2022 " class="align-text-top noRightClick twitterSection" data="
">Cctv footage of a differently abled man being run over by a car that belonged to actor Simbu’s father and director T Rajendran at T Nagar @TOIChennai pic.twitter.com/WBvveHkk54
— SINDHU KANNAN (@SindhukTOI) March 23, 2022Cctv footage of a differently abled man being run over by a car that belonged to actor Simbu’s father and director T Rajendran at T Nagar @TOIChennai pic.twitter.com/WBvveHkk54
— SINDHU KANNAN (@SindhukTOI) March 23, 2022
ಈ ಬಗ್ಗೆ ನಟರಾಗಲಿ ಅಥವಾ ಅವರ ಕುಟುಂಬದವರಾಗಲಿ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಚೆನ್ನೈನಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಅಫಘಾತದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಪಾದಚಾರಿ ಮಾರ್ಗದಲ್ಲಿ ಮುನುಸ್ವಾಮಿ ನಿಧಾನವಾಗಿ ರಸ್ತೆ ದಾಟುತ್ತಿದ್ದ ವೇಳೆ ತಿರುವು ಪಡೆಯುತ್ತಿದ್ದ ಶಿಂಬು ಅವರ ಕಾರು ಡಿಕ್ಕಿ ಹೊಡೆದಿದೆ. ಘಟನೆಯ ದೃಶ್ಯ ರಸ್ತೆಯಲ್ಲಿ ಹಾಕಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಾರು ಚಾಲಕನು ವೃದ್ಧ ಮುನುಸ್ವಾಮಿ ಬರುತ್ತಿರುವುದನ್ನು ಗಮನಿಸದೇ ಆತನ ಮೇಲೆಯೇ ಹರಿಸಿಕೊಂಡು ಹೋಗಿದ್ದಾನೆ.
ಕಾರಿನ ಚಕ್ರದ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಮುನುಸ್ವಾಮಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಸ್ಥಳೀಯ ಪೊಲೀಸರು ನಟ ಸಿಂಬು ಅವರಿಗೆ ಸೇರಿದ ಕಾರು ಚಾಲಕನನ್ನು ಬಂಧಿಸಿದ್ದಾರೆ.