ETV Bharat / sitara

ಸಿನಿಮಾ ವಿತರಕ ಪಾಲ್ ಚಂದಾನಿ ಮನೆಯಲ್ಲಿ ಆವರಿಸಿದೆ ನೀರವ ಮೌನ

author img

By

Published : Jul 17, 2019, 2:45 PM IST

ಕನ್ನಡದ ಬಹಳಷ್ಟು ಸಿನಿಮಾಗಳನ್ನು ನಿರ್ಮಿಸಿ, ಹಂಚಿಕೆ ಮಾಡುತ್ತಿದ್ದ ಅಜಯ್ ಚಂದಾನಿ ಸೋಮವಾರ ಅಪಘಾತದಲ್ಲಿ ಮೃತಪಟ್ಟಿದ್ದು ಇದೀಗ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಅಜಯ್​​​​ ತಂದೆ ಪಾಲ್ ಚಂದಾನಿ ಕೂಡಾ ಹಂಚಿಕೆದಾರರಾಗಿದ್ದರು.

ಅಜಯ್​​​​ ಪಾಲ್ ಚಂದಾನಿ, ಪಾಲ್ ಚಂದಾನಿ

ಕರ್ನಾಟಕದಲ್ಲಿ ಪರಭಾಷೆ, ಅದರಲ್ಲೂ ಹಿಂದಿ ಹಾಗೂ ಇಂಗ್ಲಿಷ್ ಸಿನಿಮಾಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿದ್ದವರು ಮಾಂಡ್ರೆ ಪಿಕ್ಚರ್ಸ್ ಹಾಗೂ ಪಾಲ್ ಎಂಟರ್​​​ಪ್ರೈಸಸ್​​​​​. ಇವರಿಬ್ಬರ ಜೊತೆ ಬಾಷಾ ಬಾಹರ್ ಫಿಲಮ್ಸ್​​​​ ಸಂಸ್ಥೆ ಕೂಡಾ ಪೈಪೋಟಿ ನಡೆಸುತ್ತಾ ಇತ್ತು.

ಆದರೀಗ ಮಾಂಡ್ರೆ ಪಿಕ್ಚರ್ಸ್ ಕಾಣಿಸುತ್ತಿಲ್ಲ. ಇವರ ಜೊತೆಗೆ ವ್ಯಾಪಾರ ವಿತರಣೆ, ಫೈನಾನ್ಸ್ ನೀಡುವುದರ ಬಗ್ಗೆ ಅತಿ ಶಿಸ್ತಿನಿಂದ ವ್ಯಾಪಾರ ನಡೆಸುತ್ತಾ ಇದ್ದದ್ದು ಪಾಲ್ ಎಸ್ ಚಂದಾನಿ. ಕಳೆದ ವರ್ಷ ಪಾಲ್ ಚಂದಾನಿ ಕಾಲವಾದರು. 1965 ರಿಂದ ‘ಡೀಲ್ ವಿತ್ ರೈಟ್ ಪೀಪಲ್’ ಎಂದು ಪಾಲ್ ಚಂದಾನಿ ಫೇಮಸ್ ಆದವರು. ಇವರು ಸಾಕಷ್ಟು ಕನ್ನಡ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ’ಪ್ರವಾಸಿ ಮಂದಿರ’ ’ಅಪತ್ಪಾಂಧವ’, ’ಅನಂತನ ಅವಾಂತರ’, ’ಅಜಗಜಾಂತರ’ ಹಾಗೂ ಇನ್ನಿತರ ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಹಿಂದಿಯಲ್ಲಿ ಗೋವಿಂದ ಅಭಿನಯದ ‘ಪ್ಯಾರ್ ಕರ್ ಕೆ ದೇಕೋ’ ಸೇರಿ ಸಾವಿರಕ್ಕೂ ಹೆಚ್ಚು ಹಿಂದಿ ಹಾಗೂ ಇಂಗ್ಲಿಷ್‌ ಸಿನಿಮಾಗಳ ವಿತರಣೆ ಇವರ ಪ್ರಮುಖ ವ್ಯಾಪಾರ ಆಗಿತ್ತು.

ajay
ಪತ್ನಿ, ಪುತ್ರಿ ಜೊತೆ ಅಜಯ್ ಚಂದಾನಿ

ಪಾಲ್ ಚಂದಾನಿ ಕಾಲವಾದ ನಂತರ ಅವರ ಮಗ ಅಜಯ್ ಚಂದಾನಿ ಈ ಉಸ್ತುವಾರಿ ವಹಿಸಿಕೊಂಡರು. ಆದರೆ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಅಜಯ್ ಪಾಲ್ ಚಂದಾನಿ ಕೂಡಾ ಮರಣ ಹೊಂದಿದರು. 48 ವರ್ಷದ ಅಜಯ್ ಚಂದಾನಿ ಭಾನುವಾರ ಸಂಜೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದೀಗ ವಿಂಡ್ಸರ್ ಮ್ಯಾನರ್ ಬಳಿಯ ಅಜಯ್ ಚಂದಾನಿ ನಿವಾಸದಲ್ಲಿ ಮೌನ ಆವರಿಸಿದೆ. ಗಾಂಧಿನಗರದಲ್ಲಿ ರಹೆಜಾ ಟವರ್ ಆಫೀಸಿನಲ್ಲೂ ಇದೇ ಪರಿಸ್ಥಿತಿ. ಕಿಚ್ಚ ಸುದೀಪ್ ಹಾಗೂ ಇನ್ನಿತರರು ಅಜಯ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಚಂದಾನಿ ನೆಚ್ಚಿನ ಸ್ನೇಹಿತ ಲಹರಿ ವೇಲು ಮಾತನಾಡುತ್ತಾ 'ಅಜಯ್ ಮುದ್ದಾದ ಹುಡುಗ. ಸಾಯುವ ವಯಸ್ಸು ಅಲ್ಲವೇ ಅಲ್ಲ. ಅವನಿಗೆ ಮೊದಲಿನಿಂದಲೂ ಬೈಕ್ ಅಂದರೆ ಹುಚ್ಚು. ಯಾವುದೇ ಹೊಸ ವಾಹನ ನೋಡಿದರೆ ಏರಿ ಬಿಡುತ್ತಿದ್ದ. ಆದರೆ ಈ ಬಾರಿ ವಾಪಸ್​​ ಬರದ ಹಾಗೆ ಹೋಗಿದ್ದಾನೆ. ಅವನ ಮನೆಯಲ್ಲಿ ಅಮ್ಮನಿಗೆ ಮರೆವಿನ ಕಾಯಿಲೆ ಇದೆ. ಮಗನಿಗೆ ಏನಾಗಿದೆ ಎಂಬುದೇ ಅವರಿಗೆ ಗೊತ್ತಿಲ್ಲ. ಅಜಯ್​​ಗೆ ಪತ್ನಿ ಹಾಗೂ ಪಿಯುಸಿ ಓದುತ್ತಿರುವ ಮಗಳಿದ್ದಾಳೆ. ಮುಂದೆ ಹೇಗೆ ಎಂಬ ಪರಿಸ್ಥಿತಿ ಅವರ ಮನೆಯಲ್ಲಿ ಎದುರಾಗಿದೆ.

  • Very very sad to hear tat a prominent personality of KFI n a close buddy to many, Ajay pal is no more. He will truly be missed by all. My deepest condolences to all his near n dear ones.#AjaypalRIP

    — Kichcha Sudeepa (@KicchaSudeep) July 14, 2019 " class="align-text-top noRightClick twitterSection" data=" ">

ಕಳೆದ ಗುರುವಾರ ‘ಯಾನ’ ಸಿನಿಮಾವನ್ನು ನೋಡಲು ಅಜಯ್ ಚಂದಾನಿ ಬಂದಿದ್ದರು. ನಂತರ ಅವರ ಸಾವಿನ ಸುದ್ದಿ ಕೇಳಿ ಏನು ಹೇಳಬೇಕು ತಿಳಿಯುತ್ತಿಲ್ಲ. ನನ್ನ ಕೈಯ್ಯಲ್ಲಿ ಆದಷ್ಟು ನನ್ನ ಸ್ನೇಹಿತನ ಕುಟುಂಬಕ್ಕೆ ಬೇಕಾದ ನೆರವು ನೀಡಬೇಕು ಅಷ್ಟೇ ಎಂದು ಲಹರಿ ವೇಲು ಸ್ನೇಹಿತನನ್ನು ನೆನಪಿಸಿಕೊಂಡು ಭಾವುಕರಾದರು. ಹಿರಿಯ ನಿರ್ದೇಶಕ ಎಸ್​.ವಿ. ರಾಜೇಂದ್ರ ಸಿಂಗ್ ಬಾಬು ಕುಟುಂಬಕ್ಕೂ ಅಜಯ್ ಚಂದಾನಿ ಬಹಳ ಆತ್ಮೀಯರಾಗಿದ್ದರು.

ಅಜಯ್ ಚಂದಾನಿ ಮನೆಯಲ್ಲಿ ಮೌನ ಆವರಿಸಿದೆ

ಕರ್ನಾಟದಲ್ಲಿ ಪರಭಾಷಾ ಅದರಲ್ಲೂ ಹಿಂದಿ ಹಾಗೂ ಇಂಗ್ಲೀಷ್ ಸಿನಿಮಾಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿದ್ದವರು ಮಾಂಡ್ರೆ ಪಿಕ್ಚರ್ಸ್ ಹಾಗೂ ಪಾಲ್ ಎಂಟೆರ್ಪ್ರೈಸಸ್. ಇವರಿಬ್ಬರ ಜೊತೆ ಬಾಶ ಬಾಹರ್ ಫಿಲ್ಮ್ಸ್ ಸಹ ಪೈಪೋಟಿ ನಡೆಸುತ್ತಾ ಇದ್ದರು.

ಈಗ ಮಾಂಡ್ರೆ ಪಿಕ್ಚರ್ಸ್ ಕಾಣಿಸುತ್ತಿಲ್ಲ. ಇವರ ಜೊತೆಗೆ ವ್ಯಾಪಾರ ವಿತರಣೆ, ಫೈನಾನ್ಸ್ ನೀಡುವುದರ ಬಗ್ಗೆ ಅತಿ ಶಿಸ್ತಿನಿಂದ ವ್ಯಾಪಾರ ನಡೆಸುತ್ತಾ ಇದ್ದದ್ದು ಪಾಲ್ ಎಸ್ ಚಂದಾನಿ. ಕಳೆದ ವರ್ಷ ಪಾಲ್ ಚಂದಾನಿ ಕಾಲವಾದರು. 1965 ರಿಂದ ಡಿಲ್ ವಿತ್ ರೈಟ್ ಪಿಪಲ್ ಎಂದು ಪಾಲ್ ಚಂದಾನಿ ಫೇಮಸ್ ಆದವರು. ಕನ್ನಡ ಸಿನಿಮಾ ನಿರ್ಮಾಣ ಸಹ ಮಾಡಿದ್ದಾರೆ. ಪ್ರವಾಸಿ ಮಂದಿರ ಇಂದ ಶುರು ಆದ ಸಿನಿಮಾ ವ್ಯಾಪಾರ ಪಾಲ್ ಚಂದಾನಿ ಅವರನ್ನು ಅಪಾಧ್ಭಂದವ, ಆಂತನ ಅವಾಂತರ, ಅಜಗಜಾಂತರ ಕನ್ನಡದಲ್ಲಿ ಹಾಗೂ ಹಿಂದಿಯಲ್ಲಿ ಗೋವಿಂದ ಅಭಿನಯದ ಪ್ಯಾರ್ ಕಾರ್ ಕೆ ದೇಕೋ ಸಿನಿಮಾ ಸಹ ನಿರ್ಮಾಣ ಮಾಡಿದವರು.

1000 ಕ್ಕೂ ಹೆಚ್ಚು ಹಿಂದಿ ಹಾಗೂ ಇಂಗ್ಲೀಷ್ ಸಿನಿಮಾಗಳ ವಿತರಣೆ ಇವರ ಪ್ರಮುಖ ವ್ಯಾಪಾರ ಆಗಿತ್ತು.

ಪಾಲ್ ಚಂದಾನಿ ಕಾಲವಾದ ನಂತರ ಅವರ ಮಗ ಅಜಯ್ ಚಂದಾನಿ ಉಸ್ತುವಾರಿ ವಹಿಸಿಕೊಂಡರು. ಮೊನ್ನೆ ದಿನ ಭೀಕರ ರಸ್ತೆ ಅಪಘಾತದಲ್ಲಿ ಅಜಯ್ ಪಾಲ್ ಚಂದಾನಿ ಸಹ ಮರಣ ಹೊಂದಿದರು.

48 ವರ್ಷದ ಅಜಯ್ ಚಂದಾನಿ 650 ಸಿ ಸಿ ಬೈಕ್ (7.5 ಲಕ್ಷ ರೂಪಾಯಿ) ಏರಿ ಹೆಲ್ಮಟ್ ಹಾಕಿಕೊಂಡು ಸೋಮವಾರ ಸಂಜೆ ಮೌಂಟ್ ಕರ್ಮೆಲ್ ಕಾಲೇಜು ನಂತರ ಎಡ ತಿರುವು ತೆಗೆದುಕೊಂಡಾಗ ಅಪಘಾತ ಆಗಿ ಹೆಲ್ಮಟ್ ಸಹ ಸೀಳಿ ಹೋಗಿದೆ. ಅವರನ್ನು ಹತ್ತಿರದ ಜೈನ್ ಆಸ್ಪತೆಯಲ್ಲಿ ತಪಾಸಣೆ ಮಾಡುವುದರಲ್ಲಿ ತೀರಿಹೋಗಿದ್ದರು. ಆ ಆಸ್ಪತ್ರೆಯ ವೈಧ್ಯ ಅಂದು ಸ್ನೇಹಿತನನ್ನು ಆ ರೀತಿ ನೋಡಿ ದಂಗಾಗಿ ಹೋಗಿದ್ದರು.

ಈಗ ವಿಂಡ್ಸರ್ ಮಾನರ್ ಬಳಿಯ ಅಜಯ್ ಚಂದಾನಿ ನಿವಾಸ ಮೌನದಿಂದ ಕೂಡಿದೆ. ಗಾಂಧಿನಗರದಲ್ಲಿ ರಹೆಜ ಟವರ್ ಆಫೀಸಿನಲ್ಲೂ ಸಹ ಅಂತಹುದೇ ಮೌನ ಆವರಿಸಿದೆ.

ಅವರ ನೆಚ್ಚಿನ ಸ್ನೇಹಿತ ಲಹರಿ ವೇಲು ನೆನೆಯುತ್ತಾ ಅಜಯ್ ಮುದ್ದಾದ ಹುಡುಗ. ಸಾಯುವ ವಯಸ್ಸು ಅಲ್ಲವೇ ಅಲ್ಲ. ಅವನಿಗೆ ಮೊದಲಿನಿಂದಲೂ ಬೈಕ್ ಅಂದರೆ ಹುಚ್ಚು. ಯಾವುದೇ ಹೊಸ ವಾಹನ ನೋಡಿದರೆ ಏರಿ ಬಿಡುತ್ತಾ ಇದ್ದ. ಈ ಬಾರಿ ವಾಪಸ್ಸು ಬಾರದ ಹಾಗೆ ಹೋಗಿದ್ದಾನೆ. ಅವನ ಮನೆಯಲ್ಲಿ ಅಮ್ಮನಿಗೆ ಮರೆವಿನ ಖಾಯಿಲೆ ಇದೆ. ಅಜಯ್ ಚಾಂದನಿಗೆ ಏನಾಗಿದೆ ಎಂಬುದು ಅವರಿಗೆ ಗೊತ್ತಿಲ್ಲ. ಹೆಂಡತಿ ಹಾಗೂ ಎರಡನೇ ಪಿ ಯು ಸಿ ಓದಿ ವಿದೇಶದಲ್ಲಿ ವ್ಯಾಸಂಗ ಮಾಡಲು ಮಗಳು ಸಜ್ಜಾಗಿದ್ದಳು. ಅಜಯ್ ಅವರಿಗೆ ನಾಲ್ಕು ಸಹೋದರಿಯರು.

ಈಗ ಯಾರಿಗೂ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಕಳೆದ ಗುರುವಾರ ಯಾನ ಸಿನಿಮಾ ನೋಡಲು ಅಜಯ್ ಚಂದಾನಿ ಬಂದಿದ್ದರು. ಆಮೇಲೆ ಅವರ ಸಾವಿನ ಸುದ್ದಿ ಕೇಳಿ ಏನು ಹೇಳಬೇಕು ತಿಳಿಯುತ್ತಿಲ್ಲ. ನನ್ನ ಕೈಯಲ್ಲಿ ಆದಷ್ಟು ನನ್ನ ಸ್ನೇಹಿತನ ಕುಟುಂಬಕ್ಕೆ ಬೇಕಾದ ನೆರವು ನೀಡುವುದು ನನ್ನ ಕೆಲಸ ಆಗಿದೆ ಎಂದು ಕಣ್ಣೀರು ಒರಸಿಕೊಳ್ಳುತ್ತ ಲಹರಿ ವೇಲು ಹೇಳಿಕೊಳ್ಳುತ್ತಾರೆ.

ಅಜಯ್ ಹಾಗೂ ಅವರ ತಂದೆ ಪಾಲ್ ಚಂದಾನಿ ಅನೇಕ ಕನ್ನಡ ಸಿನಿಮಾಗಳಿಗೆ ಫೈನಾನ್ಸ್ ಮಾಡಿದ್ದಾರೆ. ಇವರ ಕುಟುಂಬ ಹೆಚ್ಚು ಪರಿಚಯ ಇದ್ದದ್ದು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಫ್ಯಾಮಿಲಿ ಜೊತೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.