ETV Bharat / sitara

7ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ರಾಧಾ ಮಿಸ್​​​​​​​.. - ರೆಡಿಯೋ ಜಾಕಿ ಪ್ರದೀಪ್ 7ನೇ ವಿವಾಹ ವಾರ್ಷಿಕೋತ್ಸವ

ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಶ್ವೇತಾ ಪ್ರಸಾದ್ ಹಾಗೂ ಪ್ರದೀಪ್​​​ ಸ್ನೇಹಿತರಾಗಿದ್ದು ಕೆಲವು ದಿನಗಳ ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿದೆ. ತಡ ಮಾಡದೆ ಇಬ್ಬರೂ ಹಿರಿಯರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಇದೀಗ ಏಳನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ದಂಪತಿ ಆಚರಿಸಿಕೊಂಡಿದೆ.

ಶ್ವೇತಾ, ಪ್ರದೀಪ್
author img

By

Published : Oct 15, 2019, 5:07 PM IST

ಕೊನೆ ಘಳಿಗೆಯಲ್ಲಿ ಕೆಲವೊಂದು ವೈಯಕ್ತಿಕ ಕಾರಣಗಳಿಂದ ಬಿಗ್​​​ಬಾಸ್​​​ ಕಾರ್ಯಕ್ರಮದಿಂದ ದೂರ ಉಳಿದಿದ್ದ ನಟಿ ಶ್ವೇತಾಪ್ರಸಾದ್ ನಿನ್ನೆ ತಮ್ಮ 7ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಹೌದು, ಶ್ವೇತಾ ಪ್ರಸಾದ್ ಹಾಗೂ ರೆಡಿಯೋ ಜಾಕಿ ಪ್ರದೀಪ್​ ದಾಂಪತ್ಯಕ್ಕೆ 7 ವರ್ಷಗಳು ತುಂಬಿವೆ.

Shwetha, pradeep
ರೆಡಿಯೋ ಜಾಕಿ ಪ್ರದೀಪ್, ರಾಧಾರಮಣ ಖ್ಯಾತಿಯ ಶ್ವೇತಾ

ಈ ಜೋಡಿ 2012 ಅಕ್ಟೋಬರ್ 14 ರಂದು ಸತಿ-ಪತಿಗಳಾಗಿದ್ದರು. 'ರಾಧಾರಮಣ' ಧಾರಾವಾಹಿ ಮೂಲಕ ಶ್ವೇತಾ, ರಾಧಾ ಮಿಸ್ ಆಗಿ ರಾಜ್ಯಕ್ಕೆ ಪರಿಚಿತರಾಗಿದ್ದರೆ, ಪತಿ ಪ್ರದೀಪ್ ರೆಡಿಯೋ ಜಾಕಿ ಆಗಿ ಕನ್ನಡಿಗರಿಗೆ ಪರಿಚಿತ. ಇವರಿಬ್ಬರದ್ದು ಪ್ರೇಮ ವಿವಾಹ. ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಶ್ವೇತಾ ಹಾಗೂ ಪ್ರದೀಪ್​​​​ ಸ್ನೇಹ ಪ್ರೀತಿಗೆ ತಿರುಗಿದೆ. ಮುಂದೆ ತಡ ಮಾಡದೆ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

Shwetha with pradeep
ಪತಿ ಪ್ರದೀಪ್ ಜೊತೆ ಶ್ವೇತಾ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಜಾಹ್ನವಿ ಆಗಿ ಬಣ್ಣದ ಪಯಣ ಆರಂಭಿಸಿದ ಶ್ವೇತಾ, 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟರು. ಆದರೆ, ಇಂದಿಗೂ ಅವರು ರಾಧಾ ಮಿಸ್ ಎಂದೇ ಪರಿಚಿತ. ಇನ್ನು, ಆರ್​ಜೆ ಪ್ರದೀಪ್ ತಮ್ಮ ಸಖತ್ ಸ್ಟುಡಿಯೋ ಅಡಿಯಲ್ಲಿ ವೆಬ್​​ ಸೀರೀಸ್​​​ಗಳನ್ನು ತಯಾರಿಸುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಸದ್ಯಕ್ಕೆ ಪತಿ-ಪತ್ನಿ ಇಬ್ಬರೂ ಬಣ್ಣದ ಲೋಕದಲ್ಲಿ ಫುಲ್ ಬ್ಯುಸಿ. ಇಬ್ಬರ ವೈವಾಹಿಕ ಜೀವನ ಮತ್ತಷ್ಟು ಸಂತೋಷಮಯವಾಗಿರಲಿ ಎಂದು ಹಾರೈಸೋಣ.

Shwetha, pradeep
ಪ್ರದೀಪ್, ಶ್ವೇತಾ

Intro:Body:2012 ರಲ್ಲಿ ಹಸೆಮಣೆ ಏರಿರುವ ಶ್ವೇತಾ ಮತ್ತು ಪ್ರದೀಪ್ ದಾಂಪತ್ಯ ಜೀವನಕ್ಕೆ ಇದೀಗ ಎಂಟರ ಹರೆಯ. ಏಳು ವರುಷಗಳನ್ನು ಪೂರೈಸಿರುವ ಈ ಜೋಡಿ ನಿನ್ನೆ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿದೆ.

ರಾಧಾ ರಮಣ ಧಾರಾವಾಹಿಯ ಆರಾಧನಾ ಆಗಿ ಶ್ವೇತಾ ಪರಿಚಿತರಾಗಿದ್ದರೆ, ಇವರ ಪತಿ ಪ್ರದೀಪ್ ಆರ್ ಜೆ ಆಗಿ ಪರಿಚಿತ. ಬಿಗ್ ಎಫ್ ಎಂ 92.7 ಆರ್.ಜೆ ಆಗಿರುವ ಪ್ರದೀಪ್ ಮತ್ತು ಶ್ವೇತಾ ರದ್ದು ಲವ್ ಮ್ಯಾರೇಜ್ ಹೌದು!

ಪ್ರದೀಪ್ ಮತ್ತು ಶ್ವೇತಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು ಸ್ನೇಹಿತರಾಗಿದ್ದರು. ಮುಂದೆ ಪ್ರದೀಪ್ ಅವರಿಗೆ ಶ್ವೇತಾ ಮೇಲೆ ಪ್ಯಾರ್ ಶುರು ಆಯಿತು. ತಡಮಾಡದೇ ತಾವು ಲವ್ ಮಾಡುತ್ತಿರುವುದನ್ನು ಶ್ವೇತಾ ಗೆ ಹೇಳಿ ಪ್ರಪೋಸ್ ಕೂಡಾ ಮಾಡಿದರು.

ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಜಾಹ್ನವಿ ಆಗಿ ಬಣ್ಣದ ಪಯಣ ಆರಂಭಿಸಿದ ಶ್ವೇತಾ ಸದ್ಯ ಕಿರುತೆರೆ ಪ್ರಿಯರ ರಾಧಾ ಮಿಸ್! ಕಳ್ಬೆಟ್ಟದ ದರೋಡೆಕೋರರು ಸಿನಿಮಾದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟ ಚೆಲುವೆ ಇಂದಿಗೂ ರಾಧಾ ಮಿಸ್ ಎಂದೇ ಪರಿಚಿತ.

ಸಾಮಾಜಿಕ ಜಾಲತಾಣದಲ್ಲಿ ಸದಾ ಕಾಲ ಆ್ಯಕ್ಟೀವ್ ಆಗಿರುವ ಆರ್ ಜೆ ಪ್ರದೀಪ್ ಸಕತ್ ಸ್ಟುಡಿಯೋದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.

ಸಕತ್ ಸ್ಟುಡಿಯೋ ದ ಮೂಲಕ ಸೆಲೆಬ್ರಿಟಿಗಳ ಲೈವ್ ಇಂಟರ್ ವ್ಯೂ ಮಾಡಿರುವ ಪ್ರದೀಪ್ ಅವರು ಲೂಸ್ ಕಲೆಕ್ಷನ್ ಎನ್ನುವ ವೆಬ್ ಸಿರೀಸ್ ಮೂಲಕವೂ ಜನಪ್ರಿಯತೆಯನ್ನು ಪಡೆದಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.