ಕಿರುತೆರೆಯ ಖ್ಯಾತ ನಟಿ ಶ್ವೇತಾ ಚಂಗಪ್ಪ ಮನೆಯಲ್ಲಿ ಇಂದು ಸಂತಸದ ವಾತಾವರಣ. ಕೊಡಗಿನ ಕುವರಿ ಶ್ವೇತಾ ಚಂಗಪ್ಪ ತಮ್ಮ ಮಗನ ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಮೊದಲ ವರುಷಕ್ಕೆ ಕಾಲಿಡುತ್ತಿರುವ ಮಗ ಜಿಯಾನ್ ಅಯ್ಯಪ್ಪನ ಬರ್ತ್‌ಡೇ ಸಲುವಾಗಿ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಫ್ಯಾಮ್ಲಿ ಫೋಟೋವೊಂದನ್ನು ಶ್ವೇತಾ ಹಂಚಿಕೊಂಡಿದ್ದಾರೆ.
ತಮ್ಮ ಗಂಡ ಹಾಗೂ ಮಗನೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿರುವ ಶ್ವೇತಾ ಕೊಡವರ ಸಾಂಪ್ರದಾಯಿಕ ಧಿರಿಸು ಧರಿಸಿದ್ದಾರೆ. ಮಾತ್ರವಲ್ಲ ಪತಿ ಕಿರಣ್ ಹಾಗೂ ಮಗ ಜಿಯಾನ್ ಕೂಡ ಕೊಡವ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. "ಇಂದು ನನಗೆ ಬಹಳ ವಿಶೇಷವಾದ ದಿನ. ನಾನು ತಾಯಿಯಾದ ಶುಭ ದಿನ. ಈ ನನ್ನ ಬದುಕಿಗೆ ಬಂದಿದ್ದಕ್ಕೆ ನಿನಗೆ ತುಂಬಾ ಧನ್ಯವಾದಗಳು. ಹ್ಯಾಪಿ ಬರ್ತ್ ಡೇ ನನ್ನ ಪ್ರಿನ್ಸ್ ಜಿಯಾನ್ ಅಯ್ಯಪ್ಪ. ನಿನ್ನ ಬದುಕಿನ ಪ್ರತಿದಿನವೂ ನಿನಗೆ ನಗಲು ಕಾರಣ ತರಲಿ " ಎಂದು ಶ್ವೇತಾ ಬರೆದುಕೊಂಡಿದ್ದಾರೆ.
ಕಳೆದ ಒಂದು ವರುಷದಿಂದ ಬದುಕು ಹೇಗೆ ಬದಲಾಗಿದೆ ಎಂದು ಹೇಳಿಕೊಂಡಿರುವ ಶ್ವೇತಾ "ನಿನ್ನ ಜೊತೆಗಿನ ನಮ್ಮ ಮೊದಲ 365 ದಿನಗಳು ನಮ್ಮ ಬದುಕಿನ ಸುಂದರ ಸಮಯ. ನಮ್ಮ ಬದುಕನ್ನು ನೀನು ಬದಲಾಯಿಸಿದೆ. ನಾವೀಗ ಸಂತೋಷವಾಗಿದ್ದೇವೆ. ನಿನ್ನನ್ನು ತುಂಬಾ ಪ್ರೀತಿಸುತ್ತೇವೆ, ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿನಗೆ ಜಗದ ಸಂತಸವನ್ನೆಲ್ಲಾ ಕರುಣಿಸಲಿ. ಅಪ್ಪ ಅಮ್ಮಾ ನಿನ್ನನ್ನು ಪ್ರೀತಿಸುತ್ತೇವೆ" ಎಂದು ಹೇಳಿದ್ದಾರೆ.
ಮುದ್ದು ಮುದ್ದಾಗಿ ಕಾಣುವ ಜಿಯಾನ್ ಅಯ್ಯಪ್ಪ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲೂ ಫೇಮಸ್ ಆಗಿದ್ದಾನೆ. ಈಗಾಗಲೇ ಅವನ ಹೆಸರನಲ್ಲಿ ಇನ್ ಸ್ಟಾಗ್ರಾಂ ಖಾತೆಯೂ ಇದೆ. ಸದ್ಯ ನಟನೆಯಿಂದ ದೂರವಿರುವ ಶ್ವೇತಾ ಚಂಗಪ್ಪ ತಾಯ್ತನದ ಸವಿ ಅನುಭವಿಸುತ್ತಿದ್ದಾರೆ.