ETV Bharat / sitara

ಭಾರವಾದ ಹೃದಯದಿಂದ ರಾಮುಗೆ ಭಾವಪೂರ್ಣ ಶ್ರದ್ಧಾಂಜಲಿ : ಆತ್ಮೀಯ ಸ್ನೇಹಿತೆಗೆ ಶೃತಿ ಭಾವನಾತ್ಮಕ ಪತ್ರ - Shruti wrote letter to malashree

ತಮ್ಮ ಪ್ರೀತಿಯ ಪತಿಯ ಅಗಲಿಕೆಯಿಂದ ನಟಿ ಮಾಲಾಶ್ರೀ ಅವರೀಗ ದುಃಖದಲ್ಲಿದ್ದಾರೆ. ಈ ಸಂದರ್ಭದಲ್ಲಿ ಮಾಲಾಶ್ರೀ ಅವರಿಗೆ ಸಾಂತ್ವನ ಹೇಳುವ ಕೆಲಸವನ್ನು ನಟಿ ಶೃತಿ ಮಾಡಿದ್ದಾರೆ.

shruti-wrote-emotional-letter-to-malashree-for-ramu-death
ನಟಿ ಶೃತಿ ಹಾಗೂ ರಾಮು ಜೊತೆ ಮಾಲಾಶ್ರೀ
author img

By

Published : Apr 28, 2021, 9:45 PM IST

ಕನ್ನಡ ಚಿತ್ರರಂಗದ 'ಕೋಟಿ ನಿರ್ಮಾಪಕ' ರಾಮು ಅವರ ನಿಧನಕ್ಕೆ ಇಡೀ ಸ್ಯಾಂಡಲ್​ವುಡ್​ ಕಂಬನಿ ಮಿಡಿದಿದೆ. ಈ ನಡುವೆ ತಮ್ಮ ಪ್ರೀತಿಯ ಪತಿಯ ಅಕಾಲಿಕ ನಿಧನದಿಂದ ನಟಿ ಮಾಲಾಶ್ರೀ ದುಃಖದಲ್ಲಿದ್ದಾರೆ. ಕೊರೊನಾದಿಂದಾಗಿ ಪರಿಸ್ಥಿತಿ ಬಿಗಡಾಯಿಸಿರುವಾಗ ಮಾಲಾಶ್ರೀ ಆಪ್ತ ಸ್ನೇಹಿತೆಯಾಗಿರೋ ನಟಿ ಶೃತಿ, ತನ್ನ ಆತ್ಮೀಯ ಗೆಳತಿಗೆ ಭಾವನಾತ್ಮಕ ಪತ್ರವನ್ನ ಬರೆದು ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.

'ಪ್ರೀತಿಯ ಗೆಳತಿ ಮಾಲಾಶ್ರೀ, ಮೊದಲಿಗೆ ಭಾರವಾದ ಹೃದಯದಿಂದ ರಾಮು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ನಿಮ್ಮ ಅಭಿಮಾನಿಯಾಗಿ, ನಿಮ್ಮ ಸಹೋದ್ಯೋಗಿಯಾಗಿ, ಒಬ್ಬ ಗೆಳತಿಯಾಗಿ ಇಂಥ ದುಃಖದ ಪರಿಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಾಗದೇ ಕನಿಷ್ಠ ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದ ಈ ಕ್ರೂರ ಪರಿಸ್ಥಿತಿಗೆ ನನ್ನದೊಂದು ಧಿಕ್ಕಾರ' ಎಂದು ಬರೆದಿರುವ ಶೃತಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

Shruti wrote Emotional Letter to Malashree for ramu death
ಆತ್ಮೀಯ ಸ್ನೇಹಿತೆಗೆ ನಟಿ ಶೃತಿ ಪತ್ರ

ಮಾಲಾ ನಿಮಗಾದ ನಷ್ಟವನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ಎದುರಿಸಬೇಕಾಗಿರುವ ಅನಿವಾರ್ಯತೆ ಇದೆ. ನಿಮಗಾಗಿ, ನಿಮ್ಮ ಕೋಟ್ಯಾನುಕೋಟಿ ಅಭಿಮಾನಿಗಳಿಗಾಗಿ, ಬಹುಮುಖ್ಯವಾಗಿ ನಿಮ್ಮ ಮುದ್ದು ಮಕ್ಕಳ ಭವಿಷ್ಯಕ್ಕಾಗಿ. ನೀವು ಹುಟ್ಟು ಹೋರಾಟಗಾರ್ತಿ. ಅದನ್ನು ನನ್ನ ಕಣ್ಣಾರೆ ನೋಡಿದ್ದೇನೆ ಎಂದು ಶೃತಿ ಬರೆದಿದ್ದಾರೆ.

shruti-wrote-emotional-letter-to-malashree-for-ramu-death
ನಟಿ ಮಾಲಾಶ್ರೀ ಜೊತೆ ನಟಿ ಶೃತಿ

'ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದು ಕೇವಲ ಅದೃಷ್ಟದಿಂದ ಅಲ್ಲ, ನಿಮ್ಮ ಪರಿಶ್ರಮದಿಂದ. ನಂತರ ಒಬ್ಬ ಉತ್ತಮ ಗೃಹಿಣಿ ಆಗಿದ್ದು, ಕೇವಲ ದೇವರ ವರದಿಂದ ಅಲ್ಲ, ತ್ಯಾಗ, ಸಹನೆ, ಪ್ರೀತಿಯಿಂದ. ಒಳ್ಳೆಯ ತಾಯಿ ಆಗಲೂ ಅಷ್ಟೇ ಶ್ರಮ, ಪ್ರಯತ್ನ ಇದ್ದೇ ಇರುತ್ತೆ. ಹೀಗೆ ಜೀವನದ ಎಲ್ಲ ಏರಿಳಿತದ ಸಂದರ್ಭವನ್ನು ಧೈರ್ಯವಾಗಿ ನಿಭಾಯಿಸಿಕೊಂಡು ಬಂದಿದ್ದೀರಿ. ರಾಮು ಅವರಿಲ್ಲದ ಮುಂದಿನ ದಿನಗಳು ನಿಮಗೆ ಕಷ್ಟಕರವಾಗಿದ್ದರೂ, ಅದನ್ನು ನಿಭಾಯಿಸುತ್ತೀರಿ ಹಾಗೂ ನಿಭಾಯಿಸುವ ಶಕ್ತಿ ಆ ದೇವರು ನಿಮಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಆ ಕಷ್ಟದ ಹಾದಿಯಲ್ಲಿ ಎಂದಾದರೂ ಈ ಗೆಳತಿಯ ಸಹಾಯ ಬೇಕಾದಲ್ಲಿ I'm just one phone call away' ಎಂದು ಬರೆಯುವ ಮೂಲಕ ಸ್ನೇಹಿತೆಯನ್ನು ಸಂತೈಸುವ ಪ್ರಯತ್ನ ಮಾಡಿದ್ದಾರೆ.

ಓದಿ: ಕೊರೊನಾಗೆ ಬಲಿಯಾದ 'ಕೋಟಿ' ನಿರ್ಮಾಪಕ, ಮಾಲಾಶ್ರೀ ಪತಿ ರಾಮು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.