ಕರ್ನಾಟಕ ಸರ್ಕಾರದಿಂದ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ ಆಯ್ಕೆಯಾಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸೆಪ್ಟೆಂಬರ್ನಲ್ಲಿ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಆಯ್ಕೆಯಾದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಇಷ್ಟು ದಿನ ಭರಾಟೆ ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿ ಇದ್ರು.
ಸದ್ಯ ಭರಾಟೆ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸಕ್ಸಸ್ನಲ್ಲಿ ತೇಲುತ್ತಿರುವ ರೋರಿಂಗ್ ಸ್ಟಾರ್, ರಾಯಭಾರಿಯಾದ ಮೇಲೆ ಮೊದಲ ಬಾರಿ ಬಂಡಿಪುರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಭೇಟಿ ನೀಡುತಿದ್ದಾರೆ. ವಿಷಯ ಅಂದರೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಪ್ರವಾಸಕ್ಕಾಗಿ ಬಂಡೀಪುರಕ್ಕೆ ಹೋಗುತ್ತಿಲ್ಲ. ತಾವು ವಹಿಸಿಕೊಂಡಿರುವ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಬಂಡೀಪುರ ಅರಣ್ಯದತ್ತ ಅಗಸ್ತ್ಯ ಹೊರಟಿದ್ದಾರೆ.
ಸದ್ಯ ವನ್ಯಜೀವಿ ಸಂರಕ್ಷಣಾ ಅಭಿಯಾನ ಶುರುವಾಗಿದ್ದು, ಈ ಒಂದು ಕೆಲಸವನ್ನು ದೇವರ ಕೆಲಸವೆಂದು ನಂಬಿದ್ದು ನನ್ನ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ನಾನು ಬಂಡೀಪುರಕ್ಕೆ ಹೊರಟಿದ್ದೇನೆ. ಇಂದು ನಾವು ಕಾಡನ್ನು ಸಂರಕ್ಷಿಸಿದರೆ ನಮ್ಮ ನಾಡು ಚೆನ್ನಾಗಿರುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಈ ನಿಟ್ಟಿನಲ್ಲಿ ನಾನು ನನ್ನ ಜವಾಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಬಂಡೀಪುರಕ್ಕೆ ಹೊರಟಿದ್ದೇನೆ. ನೀವು ಎಲ್ಲಿದ್ದೀರೋ ಅಲ್ಲಿಂದಲೇ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಣೆ ಮಾಡಿ ಎಂದು ಶ್ರೀಮುರಳಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ