ETV Bharat / sitara

ಸತ್ಯವನ್ನೇ ಹೇಳುತ್ತೇನೆ: ಸಿದ್ದವಾಗಿದೆ ನೂತನ ಕಿರು ಚಿತ್ರ - new short film by sathya prakash

ನಿರ್ದೇಶಕ ರಾಮ ರಾಮ ರೇ ಸತ್ಯ ಪ್ರಕಾಶ್​ ಹಾಗೂ ಹೆಸರಾಂತ ಹಾಸ್ಯ ನಟ ಧರ್ಮಣ್ಣ ಜೊತೆಯಾಗಿ ಸತ್ಯವನ್ನೇ ಹೇಳುತ್ತೇನೆ ಎಂಬ ಕಿರು ಚಿತ್ರ ತಯಾರಿಸಿದ್ದಾರೆ.

short film
ರ್ದೇಶಕ ರಾಮ ರಾಮ ರೇ ಸತ್ಯ ಪ್ರಕಾಶ್​
author img

By

Published : Apr 29, 2020, 2:23 PM IST

ಸತ್ಯ ಹಾಗೂ ಧರ್ಮ ಯಾವಾಗಲೂ ಇದ್ದರೇನೆ ಸಮಾಜಕ್ಕೆ ಶ್ರೇಯಸ್ಸು. ಆದರೆ, ನಾವು ಹೇಳುತ್ತಾ ಇರುವ ಸತ್ಯ ಹಾಗೂ ಧರ್ಮ ಬೇರೆಯದೇ ವಿಚಾರ. 'ಸತ್ಯವನ್ನೇ ಹೇಳುತ್ತೇನೆ' ಎಂಬುದು ಕಿರು ಚಿತ್ರವಾಗಿದೆ. ಇದರ ನಿರ್ದೇಶಕ ರಾಮ ರಾಮ ರೇ ಸತ್ಯ ಪ್ರಕಾಶ್​ ಹಾಗೂ ಹೆಸರಾಂತ ಹಾಸ್ಯ ನಟ ಧರ್ಮಣ್ಣ ಜೊತೆಯಾಗಿ ಈ ಕಿರು ಚಿತ್ರವನ್ನು ತಯಾರಿಸಿದ್ದಾರೆ.

short film
ಹಾಸ್ಯ ನಟ ಧರ್ಮಣ್ಣ

ಈ ಕಿರು ಚಿತ್ರದ ಶೀರ್ಷಿಕೆ ಸಹ ಸೊಗಸಾಗಿರುವುದರಿಂದ ಇದರ ಅನೇಕ ಕಂತುಗಳ ಕಿರು ಚಿತ್ರ ಮಾಡುವುದಾಗಿ ಸಹ ತೀರ್ಮಾನಿಸಿದ್ದಾರೆ. ಸದ್ಯಕ್ಕೆ ಲಾಕ್​​ಡೌನ್ ಸಮಯದಲ್ಲಿ ಸತ್ಯ - ಧರ್ಮ ಚಿಕ್ಕಮಗಳೂರಿನ ಕಡೂರಿನಲ್ಲಿ ಇದ್ದಾರೆ. ಈ ಸಮಯದಲ್ಲೇ ಅವರಿಗೆ ಈ ಐಡಿಯಾ ಸಹ ಹೊಳದದ್ದು. ಕಿರು ಚಿತ್ರದ ಪರಿಕಲ್ಪನೆ ಸತ್ಯಪ್ರಕಾಶ್, ಸಂಗೀತವನ್ನು ವಾಸುಕಿ ವೈಭವ್ ಹಾಗೂ ಸಂಕಲನವನ್ನು ಬಿ.ಎಸ್ ಕೆಂಪರಾಜ್ ನಿರ್ವಹಿಸಿದ್ದಾರೆ.

ಇನ್ನು ಸತ್ಯವನ್ನೇ ಹೇಳುತ್ತೇನೆ ಶೀರ್ಷಿಕೆಯ ಮೊದಲ ಕಿರು ಚಿತ್ರ 3 ನಿಮಿಷ 30 ಸೆಕಂಡ್ ಇದೆ. ಈಗಾಗಲೇ ಯು ಟ್ಯೂಬ್​ನಲ್ಲಿ ಇದು ಲಭ್ಯವಾಗಿದೆ. ಮೊದಲ ಕಥೆ ವಸ್ತುಗಳಿಗೆ ಕೆಮ್ಮು ಬಂದರೆ ಏನಾಗುತ್ತೆ ಎಂಬುದನ್ನು ಹಾಸ್ಯಮಯವಾಗಿ ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.