ETV Bharat / sitara

ನೈಜ ಘಟನೆ ಆಧಾರಿತ 'ಕಟ್ಟ ಕಡೆಯ ನಿಮಿಷ' ಮತ್ತೆ ಚಿತ್ರೀಕರಣ ಆರಂಭ - Katta kadeya Nimisha Kannada movie

ಆರ್ಯನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಯತೀಶ್ ನಿರ್ಮಾಣದಲ್ಲಿ ತಯಾರಾಗುತ್ತಿರುವ 'ಕಟ್ಟ ಕಡೆಯ ನಿಮಿಷ' ಚಿತ್ರ ಹಾರರ್ ಹಾಗೂ ಥ್ರಿಲ್ಲರ್ ಅಂಶವನ್ನು ಹೊಂದಿದೆ. ಸಿನಿಮಾವನ್ನು ಜಗನ್ ಅಲೋಶಿಯಸ್ ಎಂಬುವವರು ನಿರ್ದೇಶಿಸಿದ್ದಾರೆ.

Katta kadeya Nimisha is Horror movie
'ಕಟ್ಟ ಕಡೆಯ ನಿಮಿಷ'
author img

By

Published : Jun 16, 2020, 11:06 AM IST

ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತನ್ನು ಆಗ್ಗಾಗ್ಗೆ ನಾವು ಕೇಳುತ್ತಿರುತ್ತೇವೆ. ಇದೀಗ ಸ್ಯಾಂಡಲ್​​ವುಡ್​​ನಲ್ಲಿ ತಂಡವೊಂದು 'ಕಟ್ಟ ಕಡೆಯ ನಿಮಿಷ' ಎಂಬ ಟೈಟಲ್ ಇಟ್ಟುಕೊಂಡು ನೈಜ ಕಥೆ ಆಧರಿತ ಸಿನಿಮಾವೊಂದನ್ನು ತಯಾರಿಸಿದೆ.

Katta kadeya Nimisha is Horror movie
'ಕಟ್ಟ ಕಡೆಯ ನಿಮಿಷ'

'ಕಟ್ಟ ಕಡೆಯ ನಿಮಿಷ' ಚಿತ್ರಕ್ಕೆ ಇದಕ್ಕೂ ಮುನ್ನ ಭೂತ್ ಎಂದು ಹೆಸರಿಡಲಾಗಿತ್ತು. ಆದರೆ ನಂತರ ಹೆಸರು ಬದಲಿಸಲಾಗಿದೆ. ಚಿತ್ರ ಹಾರರ್, ಥ್ರಿಲ್ಲರ್ ಅಂಶವನ್ನೊಂದಿದೆ ಎನ್ನುತ್ತಾರೆ ನಿರ್ದೇಶಕ ಜಗನ್ ಅಲೋಶಿಯಸ್. ಕನ್ನಡದ 6-5=2 ಚಿತ್ರವನ್ನು ತಮಿಳಿನಲ್ಲಿ 'ಕಾದಲ್​​​​ ಕನ್ ಕಟ್ಟದೆ' ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು. ಈ ಚಿತ್ರದಲ್ಲಿ ಜಗನ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕನ್ನಡದ ಮೊಟ್ಟ ಮೊದಲ ಕ್ರೌಡ್ ಫಂಡಿಂಗ್ ಸಿನಿಮಾ 'ಲೂಸಿಯಾ' ಪ್ರೇರಣಿಯಿಂದ 'ಕಡೆ ಕಡೆಯ ನಿಮಿಷ' ಚಿತ್ರವನ್ನು ಮಾಡಲಾಗುತ್ತಿದೆ. ಈ ಬಗ್ಗೆ ಜಗನ್ ಈಗಾಗಲೇ ವಿವರಣೆ ಕೂಡಾ ನೀಡಿದ್ದಾರೆ.

Katta kadeya Nimisha is Horror movie
ಗಣೇಶ್ ರಾವ್

1960 ರಲ್ಲಿ ಒಂದು ಚರ್ಚ್​ನಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ತಯಾರಿಸುತ್ತಿರುವ ಈ ಚಿತ್ರದಲ್ಲಿ 'ಮೊಗ್ಗಿನ ಮನಸು' ನಾಯಕರಲ್ಲಿ ಒಬ್ಬರಾದ ಆಕಾಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಕಾಶ್ ಜೊತೆ ಜೀವ, ಲೋವಿಕ, ನಿತ್ಯಾರಾಜ್, ಗಣೇಶ್ ರಾವ್ ಪಾತ್ರವರ್ಗದಲ್ಲಿದ್ದಾರೆ. ಬೆಂಗಳೂರು, ಹಾಸನದ ಶೆಟ್ಟಿಹಳ್ಳಿ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

Katta kadeya Nimisha is Horror movie
ನಾಯಕ ಆಕಾಶ್

ಲಾಕ್​ಡೌನ್​​​ಗೂ ಮುನ್ನವೇ ಬಹುತೇಕ ಚಿತ್ರೀಕರಣ ಮುಗಿದಿದೆ. ಒಂದು ಹಾಡು ಹಾಗೂ ಎರಡು ಸಾಹಸ ಸನ್ನಿವೇಶಗಳು ಮಾತ್ರ ಬಾಕಿ ಇದೆ. ಇಂದಿನಿಂದ ಬಾಕಿ ಉಳಿದ ಚಿತ್ರೀಕರಣಕ್ಕೆ ಸರ್ಕಾರ ಅಸ್ತು ಎಂದಿರುವುದರಿಂದ ಉಳಿದ ಭಾಗವನ್ನು ತಕ್ಷಣ ಚಿತ್ರೀಕರಣ ಮಾಡಿಕೊಳ್ಳುವುದು ನಿರ್ದೇಶಕರ ಉದ್ದೇಶ. ಆರ್ಯನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಯತೀಶ್ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.