ETV Bharat / sitara

ಕೇವಲ 36 ದಿನಗಳಲ್ಲಿ 'ಪೆಟ್ರೋಮ್ಯಾಕ್ಸ್' ಮುಗಿಸಿದ ವಿಜಯಪ್ರಸಾದ್

ಯಾವಾಗ ತೋತಾಪುರಿ 2 ಚಿತ್ರಕ್ಕೂ ಮುನ್ನ ಒಂದು ಸಣ್ಣ ಚಿತ್ರ ಮಾಡಬೇಕು ಎಂದು ತೀರ್ಮಾನವಾಯಿತೋ, ಆಗ ವಿಜಯಪ್ರಸಾದ್ ಈ ಚಿತ್ರ ಕೈಗೆತ್ತಿಕೊಂಡು ಕೇವಲ ಎಂಟು ದಿನಗಳಲ್ಲಿ ಚಿತ್ರಕಥೆ ಬರೆದರಂತೆ. ಅದೀಗ ಚಿತ್ರೀಕರಣ ಸಹ ಮುಗಿದಿದೆ. ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ, ಮಾರ್ಚ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವುದು ಅವರ ಯೋಚನೆ..

Petromax
ಪೆಟ್ರೋಮ್ಯಾಕ್ಸ್
author img

By

Published : Jan 5, 2021, 10:23 AM IST

ನಿರ್ದೇಶಕ ವಿಜಯಪ್ರಸಾದ್ ತಮ್ಮ ಚಿತ್ರಗಳನ್ನು ಸಿಕ್ಕಾಪಟ್ಟೆ ಎಳೆದಾಡುತ್ತಾರೆ. ಅನಾವಶ್ಯಕ ಚಿತ್ರವನ್ನು ತಡ ಮಾಡುತ್ತಾರೆ ಎಂಬ ಆರೋಪವಿದೆ. ಇದು ನಿಜವೂ ಹೌದು. ಯಾಕೆಂದರೆ, ಕಳೆದ 10 ವರ್ಷಗಳಲ್ಲಿ ವಿಜಯಪ್ರಸಾದ್ ನಿರ್ದೇಶನದ ಚಿತ್ರಗಳು ಬಿಡುಗಡೆ ಅಂತಾಗಿರುವುದು ಬರೀ ಎರಡೇ..

ಒಂದು ಸಿದ್ಲಿಂಗು, ಇನ್ನೊಂದು ನೀರ್​ದೋಸೆ. ಎರಡೂವರೆ ವರ್ಷಗಳ ಹಿಂದೆ ಅವರು ತೋತಾಪುರಿ ಚಿತ್ರ ಪ್ರಾರಂಭಿಸಿದ್ದರಾದ್ರೂ, ಆ ಚಿತ್ರವನ್ನು ಅವರು ಇನ್ನೂ ಮುಗಿಸಿಲ್ಲ. ಹೀಗಿರುವಾಗಲೇ ವಿಜಯಪ್ರಸಾದ್, ತಮ್ಮ ಹೊಸ ಚಿತ್ರವನ್ನು ಕೇವಲ 36 ದಿನಗಳಲ್ಲಿ ಮುಗಿಸಿದ್ದಾರೆ. ದಸರಾ ಸಮಯದಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರವನ್ನು ಶುರು ಮಾಡಿದ್ದರು ವಿಜಯಪ್ರಸಾದ್.

ಸತೀಶ್ ನೀನಾಸಂ, ಹರಿಪ್ರಿಯಾ, ಕಾರುಣ್ಯ ರಾಮ್, ಅರುಣ್, ವಿಜಯಲಕ್ಷ್ಮಿ ಸಿಂಗ್ ಸೇರಿ ಮುಂತಾದವರು ನಟಿಸಿರುವ ಈ ಚಿತ್ರದ ಚಿತ್ರೀಕರಣವನ್ನು ಅವರು ಸಂಪೂರ್ಣ ಮೈಸೂರಿನಲ್ಲೇ ಮಾಡಿ ಮುಗಿಸಿದ್ದಾರೆ. ಎರಡು ಹಂತಗಳಲ್ಲಿ ಕೇವಲ 36 ದಿನಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಪೆಟ್ರೋಮ್ಯಾಕ್ಸ್ ಚಿತ್ರದ ಚಿತ್ರಕಥೆಯನ್ನು ಅವರು ಕೇವಲ ಎಂಟು ದಿನಗಳಲ್ಲಿ ಮುಗಿಸಿದರಂತೆ. ಚಿತ್ರದ ಕಥೆಯನ್ನು ಸುಮಾರು ಎರಡು ವರ್ಷಗಳ ಹಿಂದೆಯೇ ಮಾಡಿಟ್ಟುಕೊಂಡಿದ್ದರಂತೆ. ಆದರೆ, ಚಿತ್ರಕಥೆ ಮಾತ್ರ ಆಗಿರಲಿಲ್ಲ.

ಯಾವಾಗ ತೋತಾಪುರಿ 2 ಚಿತ್ರಕ್ಕೂ ಮುನ್ನ ಒಂದು ಸಣ್ಣ ಚಿತ್ರ ಮಾಡಬೇಕು ಎಂದು ತೀರ್ಮಾನವಾಯಿತೋ, ಆಗ ವಿಜಯಪ್ರಸಾದ್ ಈ ಚಿತ್ರ ಕೈಗೆತ್ತಿಕೊಂಡು ಕೇವಲ ಎಂಟು ದಿನಗಳಲ್ಲಿ ಚಿತ್ರಕಥೆ ಬರೆದರಂತೆ. ಅದೀಗ ಚಿತ್ರೀಕರಣ ಸಹ ಮುಗಿದಿದೆ. ಇನ್ನು, ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ, ಮಾರ್ಚ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವುದು ಅವರ ಯೋಚನೆ.

ಪೆಟ್ರೋಮ್ಯಾಕ್ಸ್ ಚಿತ್ರವನ್ನು ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಂಸ್ಥೆಗಳು ಜೊತೆಯಾಗಿ ನಿರ್ಮಿಸಿವೆ. ವಿಜಯಪ್ರಸಾದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ನಿರಂಜನ್ ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.