ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ಗೆ ಏನೋ ಒಂದು ಜೋಶ್ ಇದೆ. ವಯಸ್ಸು ಐವತ್ತು ದಾಟಿದರೂ ಪಾದರಸದಂತೆ ಲವಲವಿಕೆಯಿಂದ ಇರುವ ಶಿವಣ್ಣ ಅಂದ್ರೆ ಕನ್ನಡ ಚಿತ್ರರಂಗದ ನಿರ್ಮಾಪಕರು ಅಷ್ಟೇ ಅಲ್ಲ ಬೇರೆ ಭಾಷೆಯ ನಿರ್ಮಾಪಕರಿಗೂ ಅಚ್ಚುಮೆಚ್ಚು. ಶಿವಣ್ಣನ ಚಿತ್ರಗಳ ನಿರ್ಮಾಣ ಮಾಡೋದಕ್ಕೆ ಸದಾ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಶಿವಣ್ಣ 110ಕ್ಕೂ ಚಿತ್ರಗಳು ಕಂಪ್ಲೀಟ್ ಆಗಿದ್ದರು, ಸೆಂಚುರಿ ಸ್ಟಾರ್ ಮಾರ್ಕೆಟ್ ಮಾತ್ರ ಡೌನ್ ಆಗಿಲ್ಲ. ಶಿವಣ್ಣನ ಸಮಕಾಲೀನ ನಟರ ಎಲ್ಲರೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಶಿವಣ್ಣ ಮಾತ್ರ ಇಂದಿಗೂ ನಾಯಕನಾಗಿ ಮಿಂಚುತ್ತಾನೆ ಇದ್ದಾರೆ. ಸಿನಿಮಾದಲ್ಲಿ ಲಾಂಗ್ ಹಿಡಿದ್ರೆ ಇಂಡಸ್ಟ್ರಿಯಲ್ಲಿ ಲಾಂಗ್ ಲೈಫ್ ಅಂತ ಹೇಳುವ ಶಿವಣ್ಣ , ಇನ್ನು ಇಪ್ಪತ್ತು ವರ್ಷ ನಾನು ಚಿತ್ರರಂಗದಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.
ಹೌದು ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿ ನಟಿಸಿರುವ ಸಲಗ ಚಿತ್ರದ ಸೂರಿ ಅಣ್ಣಾ ಸಾಂಗ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವಣ್ಣ, ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿ, ವಿಜಿ ನಿರ್ದೇಶನಕ್ಕೆ ಬಂದಿದ್ದಾರೆ. ಆದರೆ ನಾನು ನಿರ್ದೇಶನಕ್ಕೆ ಬರುವುದಿಲ್ಲ, ಯಾಕಂದ್ರೆ ಚಿತ್ರರಂಗದ ನಿರ್ಮಾಪಕರು ನನ್ನನ್ನು ನಿರ್ದೇಶನಕ್ಕೆ ಕೈ ಹಾಕಲು ಬಿಡುವುದಿಲ್ಲ. ನಾನು ಸಾಕು ಸಾಕು ಎಂದರೂ ಇಲ್ಲ ನೀವು ಬೇಕು ಬೇಕು ಎಂದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅದು ಯಾತಕ್ಕೆ ಇಷ್ಟು ಸಿನಿಮಾ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ. ನೋಡೋಣ ದೇವರು ನನಗೆ ಇನ್ನು ಎಷ್ಟು ವರ್ಷ ಸ್ಟ್ರೆಂತ್ ಕೊಡುತ್ತಾನೆ ಅಷ್ಟು ವರ್ಷ ಸಿನಿಮಾ ಮಾಡ್ತೀನಿ. ಆದರೆ ಡೋಂಟ್ ವರಿ ನಾನು ಇನ್ನು ಇಪ್ಪತ್ತುವರ್ಷ ಹೀಗೆ ಇರ್ತೀನಿ ಎಂದು ಸಖತ್ ಜೋಶ್ನಲ್ಲೇ ಹೇಳಿದ್ರು.
ಇನ್ನು ಶಿವಣ್ಣ ಈಗಾಗಲೇ ಇಂಡಸ್ಟ್ರಿಗೆ ಎಂಟ್ರಿಕೊಟ್ಟು 30 ವರ್ಷ ಪೂರೈಸಿದ್ದು, ಅದೇ ವರ್ಚಸ್ ಮಾಡಿಕೊಂಡೆ ಶಿವಣ್ಣ ಇನ್ನು ಇಂಡಸ್ಟ್ರಿಯಲ್ಲಿ ಹೀರೋ ಆಗಿ ಇರೋದು ಶಿವಣ್ಣನ ಅಭಿಮಾನಿ ಬಳಗ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.