ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ ಹೊಚ್ಚ ಹೊಸ ಸಿನಿಮಾದ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದೆ. ನಾಳೆ ಅಂದ್ರೆ ನವೆಂಬರ್ 19ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈ ಚಿತ್ರದ ವಿಶೇಷ ಏನಂದ್ರೆ ಮತ್ತೆ ಡಾಲಿ ಧನಂಜಯ್ ಮತ್ತು ಶಿವರಾಜ್ಕುಮಾರ್ ಒಂದೇ ಚಿದ್ರದಲ್ಲಿ ನಟಿಸುತ್ತಿದ್ದಾರೆ.
ಟಗರು ಚಿತ್ರದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ಡಾಲಿ ಮತ್ತು ಟಗರು ಶಿವ ಇದೀಗ ಮತ್ತೊಮ್ಮೆ ಸಿನಿ ಪ್ರಿಯರನ್ನು ರಂಜಿಸಲು ಮುಂದಾಗಿದ್ದಾರೆ. ಚಿತ್ರದಲ್ಲಿ ಮತ್ತೋರ್ವ ನಟ ಕಾಣಿಸಿಕೊಳ್ಳಲಿದ್ದು, ಶಿವಣ್ಣರ ಮುಂದಿನ ಚಿತ್ರದಲ್ಲಿ ನಟ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ.
ಈ ಮೂರು ನಟರ ಒಟ್ಟಿಗೆ ಒಂದೆ ಸಿನಿಮಾದಲ್ಲಿ ನಟಿಸಲಿದ್ದು, ಸಿನಿಮಾದ ಟೈಟಲ್ ಹೇಗಿರುತ್ತೆ ಮತ್ತು ಚಿತ್ರದ ಕಥೆ ಏನಾಗಿರುತ್ತೆ ಎಂಬುದು ಎಲ್ಲರ ಕಾತರಕ್ಕೆ ಕಾರಣವಾಗಿದೆ. ಈ ಹಿಂದೆಯೇ ಚಿತ್ರತಂಡ ಸಿನಿಮಾ ಕಾರ್ಯವನ್ನು ಶುರು ಮಾಡಿದ್ದು, ಅಧಿಕೃತವಾಗಿ ನಾಳೆ ಮುಹೂರ್ತ ಕಾರ್ಯಕ್ರಮವನ್ನು ಏರ್ಪಡಿಸಿದೆ.
ನಾಳೆ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಈ ಚಿತ್ರಕ್ಕೆ ಎಸ್ ಡಿ ವಿಜಯ್ ಮಿಲ್ಟನ್ ಆ್ಯಕ್ಷನ್- ಕಟ್ ಹೇಳುತ್ತಿದ್ದು, ಕೃಷ್ಣ ಸಾರ್ಥಕ್ ಬಂಡವಾಳ ಹಾಕುತ್ತಿದ್ದಾರೆ.