ಕನ್ನಡದ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾ ಸೂರರೈ ಪೋಟ್ರು ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗಿರುವ ಸೂರರೈ ಪೋಟ್ರು ಚಿತ್ರ ನೋಡಿ ಈಗಾಗಲೇ ಸಿನಿಮಾ ತಾರೆಯರು, ಗಣ್ಯ ವ್ಯಕ್ತಿಗಳು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.

ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ತಮಿಳು ನಟ ಸೂರ್ಯ ಅಭಿನಯ ಅದ್ಭುತವಾಗಿದೆ. ಈಗ ಈ ಸಿನಿಮಾವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮ ಹೊಸ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಶಿವರಾಜ್ಕುಮಾರ್ ಮಾತನಾಡಿ, ಸೂರರೈಪೋಟ್ರು ಸಿನಿಮಾ ನೋಡಿದೆ. ಇಂತಹ ಸಿನಿಮಾಗಳನ್ನು ಮತ್ತೆ ಯಾರೂ ರಿಮೇಕ್ ಮಾಡಬಾರದು ಎಂದರು.
ಯಾಕೆಂದರೆ ಇಂತಹ ಸಿನಿಮಾಗಳು ಒರಿಜಿನಲ್ ಆಗಿ ಇದ್ದಾಗ ಚೆನ್ನಾಗಿರುತ್ತದೆ ಎಂದು ಸೆಂಚುರಿ ಸ್ಟಾರ್ ತಮಿಳು ನಟ ಸೂರ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
