ಯಾರೀ ಈ ಶಿವಾರ್ಜುನ ಅಂತಿರಾ..? ಅವರೇ ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ, ನಿರ್ಮಾಪಕ ರಾಮು ಹಾಗೂ ಅರ್ಜುನ್ ಸರ್ಜಾ ಅವರ ಕ್ಯಾಂಪಿನಲ್ಲಿ ಕಾಣಿಸಿಕೊಂಡವರು. ಈಗ ಶಿವಾರ್ಜುನ್ ತಮ್ಮ ಹೆಸರಿನ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಲೆಕ್ಕದ ಪ್ರಕಾರ ನಿಶ್ಚಿತ ಕಂಬೈನ್ಸ್ ಅಡಿಯಲ್ಲಿ ಅವರ ಪತ್ನಿ ಎಂ ಬಿ ಮಂಜುಳ ಅವರೇ ನಿರ್ಮಾಪಕಿ. ಈ ಶಿವಾರ್ಜುನ್ ಅವರ ‘ಶಿವಾರ್ಜುನ’ ಸಿನಿಮಾಕ್ಕೆ ಅವರ ನಿಕಟ ವ್ಯಕ್ತಿ ಚಿರಂಜೀವಿ ಸರ್ಜಾ ನಾಯಕ ಮತ್ತು ಈ ಚಿತ್ರದಲ್ಲಿ ಅಮೃತ ಹಾಗೂ ಅಕ್ಷತ ಇಬ್ಬರು ನಾಯಕಿಯರಿದ್ದಾರೆ. ಈ ಹಿಂದೆ ನಿರ್ದೇಶಕ ಹಾಗೂ ನಿರ್ಮಾಪಕರಾದ ಆರ್ ಚಂದ್ರು ಅವರ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಮೈಸೂರಿನಲ್ಲಿ ನಡೆಸಿದ್ದಾರೆ.
ಈ ಚಿತ್ರದಲ್ಲಿ ಹೆಚ್ ಸಿ ವೇಣು ಛಾಯಾಗ್ರಹಣ ಮಾಡುತ್ತಿದ್ದು, ಸುರಾಗ್ (ಸಾಧು ಕೋಕಿಲ ಪುತ್ರ) ಸಂಗೀತ ನೀಡುತ್ತಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ರವಿ ವರ್ಮಾ, ವಿನೋದ್, ಥ್ರಿಲ್ಲರ್ ಮಂಜು ಸಾಹಸ, ಮುರಳಿ ನೃತ್ಯ, ಯೋಗರಾಜ್ ಭಟ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಹಾಡುಗಳನ್ನು ರಚಿಸುತ್ತಿದ್ದಾರೆ.
ಹಿರಿಯ ಪೋಷಕ ನಟರುಗಳಾದ ತಾರಾ, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧು ಕೋಕಿಲ, ರವಿ, ತಾರಾಗ ವಿಶ್ವ, ಶಿವರಾಜ್ ಕೆ ಆರ್ ಪೇಟೆ, ನಯನ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಚಿತ್ರದ ಮುಹೂರ್ತಕ್ಕೋಸ್ಕರ ಮತ್ತು ಪ್ರಚಾರಕ್ಕಾಗಿ ಶಿವಾರ್ಜುನ್ ಕೆಲವು ಸ್ಟಿಲ್ಸ್ ಬಿಡುಗಡೆ ಮಾಡಿದ್ದಾರೆ.