ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ "ಶಿವಾರ್ಜುನ" ಚಿತ್ರ ಮಾರ್ಚ್ 12 ಗುರುವಾರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಅಲ್ಲದೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಆದ್ರೆ ಕೊರೊನ ವೈರಸ್ ರಾಜ್ಯದಲ್ಲಿ ಹರಡುವ ಭೀತಿಯಿಂದ ಮುನ್ನೆಚ್ಚರಿಕೆಯಾಗಿ ಸರ್ಕಾರ ಮಾರ್ಚ್ 13 ಶುಕ್ರವಾರದಿಂದ ಒಂದು ವಾರಗಳ ಕಾಲ ಮಾಲ್, ಚಿತ್ರಮಂದಿರಗಳು ಹಾಗೂ ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಅದೇಶ ಹೊರಡಿಸಿತ್ತು.
ಇದರಿಂದ ಉತ್ತಮವಾಗಿ ಪ್ರದರ್ಶನವಾಗ್ತಿದ್ದ " ಶಿವಾರ್ಜುನ" ಚಿತ್ರದ ಪ್ರದರ್ಶನ ಕೂಡ ಒಂದು ವಾರಗಳ ಕಾಲ ಬಂದ್ ಆಗಿತ್ತು. ಈಗ ವಾರದ ಬಳಿಕ ಚಿತ್ರಮಂದಿರಗಳಲ್ಲಿ ಸಿನಿಮಾ ರಿರಿಲೀಸ್ ಆಗ್ತಿದೆ. ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ ಎಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಹಿರಿಯ ನಟಿ ತಾರ ಕೂಡ ಅಭಿಮಾನಿಗಳಲ್ಲಿ ಮನವಿ ಮಾಡಿದ್ದು. ಶಿವಾರ್ಜುನ ಚಿತ್ರ ಮತ್ತೆ ಮುಂದಿನ ಶುಕ್ರವಾರ ಬಿಡುಗಡೆ ಆಗ್ತಿದೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇನ್ನೂ ಈ ಕೊರೊನ ವೈರಸ್ ಭೀತಿಯಿಂದ ಒಂದು ವಾರದ ಕಾಲ ಚಿತ್ರಮಂದಿರಗಳನ್ನು ಬಂದ್ ಮಾಡಿರುವ ಹಿನ್ನೆಲೆ ಚಿತ್ರರಂಗಕ್ಕೆ ಸುಮಾರು 60 ರಿಂದ 70 ಕೋಟಿ ರೂ. ನಷ್ಟವಾಗಲಿದೆ ಎಂದು ತಿಳಿದು ಬಂದಿದೆ.