ETV Bharat / sitara

ಟಾಲಿವುಡ್ ಬಾಲಕೃಷ್ಣ ಬರ್ತ್​ಡೇ ಶುಭ ಕೋರಿದ ಶಿವಣ್ಣ...ಬಾಲಣ್ಣ ಜೊತೆ ನಟಿಸ್ತಾರಾ ಸೆಂಚುರಿ ಸ್ಟಾರ್..?

author img

By

Published : Jun 10, 2020, 5:02 PM IST

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ತೆಲುಗು ನಟ ಬಾಲಕೃಷ್ಣ ಅವರಿಗೆ ಬರ್ತ್​ಡೇ ಶುಭ ಕೋರಿದ್ದಾರೆ. ಅಲ್ಲದೆ ಪರೋಕ್ಷವಾಗಿ ಮತ್ತೆ ಅವರೊಂದಿಗೆ ನಟಿಸುವ ಮುನ್ಸೂಚನೆ ನೀಡಿದ್ದಾರೆ.

Shivarajkumar wised Balakrsihan Birthday
ಬಾಲಕೃಷ್ಣ ಬರ್ತ್​ಡೇ ಶುಭ ಕೋರಿದ ಶಿವಣ್ಣ

ಟಾಲಿವುಡ್ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 60 ನೇ ವಸಂತಕ್ಕೆ ಕಾಲಿಟ್ಟಿರುವ ಬಾಲಣ್ಣನಿಗೆ ಟಾಲಿವುಡ್​​​​​ ಸ್ಟಾರ್ ನಟರೆಲ್ಲಾ ಹುಟ್ಟುಹಬ್ಬದ ಶುಭ ಕೋರಿದ್ಧಾರೆ.

ಬಾಲಕೃಷ್ಣ ಬರ್ತ್​ಡೇ ಶುಭ ಕೋರಿದ ಶಿವಣ್ಣ

ಬಾಲಕೃಷ್ಣ ಕನ್ನಡ ಚಿತ್ರರಂಗದ ನಟರಿಗೂ ಹತ್ತಿರವಿದ್ದಾರೆ. ಡಾ. ರಾಜ್​​​​ಕುಮಾರ್ ಕುಟುಂಬಕ್ಕೆ ಬಾಲಕೃಷ್ಣ ಬಹಳ ಆತ್ಮೀಯರು. ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್ ಕೂಡಾ ಬಾಲಕೃಷ್ಣ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. 'ನೀವು ನನ್ನನ್ನು ತಮ್ಮ ಎಂದು ಕರೆದಾಗ ಸ್ವಂತ ಅಣ್ಣನೇ ತಮ್ಮ ಎಂದು ಕರೆದಂತಾಗುತ್ತದೆ. ಅಲ್ಲದೆ ನಿಮ್ಮ 100ನೇ ಚಿತ್ರದಲ್ಲಿ ನಾನೂ ಕೂಡಾ ಅತಿಥಿ ಪಾತ್ರದಲ್ಲಿ ನಟಿಸಿದ್ದೆ. ಅದೇ ರೀತಿ 200 ನೇ ಚಿತ್ರದಲ್ಲಿ ಮತ್ತೆ ಅತಿಥಿ ಪಾತ್ರದಲ್ಲಿ ಅಥವಾ ಪ್ರಮುಖ ಪಾತ್ರದಲ್ಲಿ ನಟಿಸುತ್ತೇನೆ' ಎಂದು ಶಿವರಾಜ್​​ಕುಮಾರ್​​​ ಬಾಲಕೃಷ್ಣ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಈ ಮೂಲಕ ಮತ್ತೆ ಬಾಲಕೃಷ್ಣ ಜೊತೆ ತೆರೆ ಹಂಚಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ ಶಿವಣ್ಣ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.