ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಇತ್ತೀಚೆಗೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದರು. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕೂಡಾ ವಿದೇಶಿ ಕನ್ನಡಿಗರೊಂದಿಗೆ ಮಾತುಕತೆಗೆ ರೆಡಿಯಾಗಿದ್ದಾರೆ.

ಜುಲೈ 12 ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹುಟ್ಟುಹಬ್ಬ. ಹಿಂದಿನ ದಿನ ಅಂದರೆ, ಜುಲೈ 11 ರಂದು ಶಿವಣ್ಣ ಜೂಮ್ ಮೂಲಕ ವಿದೇಶದ ಅಭಿಮಾನಿಗಳೊಂದಿಗೆ ಮಾತನಾಡಲಿದ್ಧಾರೆ. ಜುಲೈ 11 ರಂದು ಬೆಳಗ್ಗೆ 5.30ಕ್ಕೆ ಯುಕೆ, 6.30 ಕ್ಕೆ ಆಫ್ರಿಕಾ, 10 ಕ್ಕೆ ಭಾರತದ ಇತರ ರಾಜ್ಯಗಳಲ್ಲಿ ನೆಲೆಸಿರುವ ಅಭಿಮಾನಿಗಳು ಮಧ್ಯಾಹ್ನ 2.30ಕ್ಕೆ ಆಸ್ಟ್ರೇಲಿಯಾ, 12.30 ಮಲೇಷ್ಯಾ ಹಾಗೂ ಸಿಂಗಾಪೂರ್ ಹಾಗೂ ಇನ್ನಿತರ ದೇಶಗಳ ಅಭಿಮಾನಿಗಳೊಂದಿಗೆ ಶಿವಣ್ಣ ಮಾತನಾಡಲಿದ್ದಾರೆ.

ಖ್ಯಾತ ನಿರೂಪಕಿ ಅನುಷ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಕರುನಾಡ ಚಕ್ರವರ್ತಿಯೊಂದಿಗೆ ಮಾತನಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.