ETV Bharat / sitara

ದ್ವಾರಕೀಶ್ ಚಿತ್ರಾಲಯದ 'ಆಯುಷ್ಮಾನ್​​​​ಭವ' ರಾಜ್ಯೋತ್ಸವದಂದು ಬಿಡುಗಡೆ - ಸುಹಾಸಿನಿ

ಶಿವರಾಜ್​​ಕುಮಾರ್ ಅಭಿನಯದ 'ಆಯುಷ್ಮಾನ್ ಭವ' ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗುತ್ತಿದೆ. ದ್ವಾರಕೀಶ್ ಚಿತ್ರಾಲಯ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸಿದ್ದು ಪಿ. ವಾಸು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಆಯುಷ್ಮಾನ್​​​​ಭವ
author img

By

Published : Sep 28, 2019, 2:50 PM IST

ಹ್ಯಾಟ್ರಿಕ್ ಹೀರೋ ಶಿವರಾಜ್​​​ಕುಮಾರ್​​ ಹಾಗೂ ನಿರ್ದೇಶಕ ಪಿ. ವಾಸು 'ಶಿವಲಿಂಗ' ಚಿತ್ರದ ನಂತರ 'ಆಯುಷ್ಮಾನ್​​​​ಭವ' ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ. ಈ ಸಿನಿಮಾ ಮೇಲೆ ಟಗರು ಶಿವನ ಅಭಿಮಾನಿಗಳಗೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಚಿತ್ರಕ್ಕೆ ಮೊದಲು 'ಆನಂದ್' ಎಂಬ ಟೈಟಲ್ ಇಟ್ಟು ಆರಂಭಿಸಿದ್ದರೂ ಕೊನೆಗೆ ಸಿನಿಮಾಗೆ 'ಆಯುಷ್ಮಾನ್​​​​ಭವ' ಎಂಬ ಹೆಸರು ಫೈನಲ್ ಮಾಡಲಾಗಿದೆ.

'ಆಯುಷ್ಮಾನ್​​​​ಭವ' ಪ್ರೆಸ್​​​ಮೀಟ್

ಇದೀಗ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಇದೇ ಮೊದಲ ಬಾರಿಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಪಿ. ವಾಸು ಅವರ ಈ ಹಿಂದಿನ ಚಿತ್ರಗಳಂತೆ ಈ ಚಿತ್ರದಲ್ಲಿ ಕೂಡಾ ಸೈಕಾಲಾಜಿಕಲ್ ಎಳೆ ಇದ್ದು, ಚಿತ್ರದಲ್ಲಿನ‌ ನನ್ನ ಪಾತ್ರ ನನ್ನ ಅಭಿಮಾನಿಗಳಿಗೆ ಅಲ್ಲದೆ ಫ್ಯಾಮಿಲಿ ಆಡಿಯನ್​​​​ಗಳಿಗೂ ಬಹಳ ಇಷ್ಟವಾಗುತ್ತದೆ ಎಂದು ಶಿವಣ್ಣ ಅವರ ಪಾತ್ರದ ಬಗ್ಗೆ ಹೇಳಿಕೊಂಡರು. ಅಲ್ಲದೆ ಚಿತ್ರದ ಕಥೆಗೂ 'ಆನಂದ್' ಟೈಟಲ್​​ಗೂ ಮ್ಯಾಚ್ ಆಗದ ಕಾರಣ ಟೈಟಲ್ ಬದಲಿಸಿದ್ದಾಗಿ ಶಿವಣ್ಣ ಹೇಳಿದರು. ಇನ್ನು ದ್ವಾರಕೀಶ್ ಚಿತ್ರಾಲಯ ಸಂಸ್ಥೆಗೆ ಸಿನಿಮಾ ನಿರ್ಮಾಣದಲ್ಲಿ 50 ವರ್ಷಗಳು ಮುಗಿದಿದ್ದು ಮೊದಲ ಸಿನಿಮಾದಲ್ಲಿ ಅಪ್ಪಾಜಿ ಹಾಗೂ 52ನೇ ಸಿನಿಮಾದಲ್ಲಿ ನಾನು ನಟಿಸುತ್ತಿರುವುದು ಖುಷಿಯ ವಿಚಾರ ಎಂದು ಶಿವರಾಜ್​​​​ಕುಮಾರ್ ಸಂತೋಷ ವ್ಯಕ್ತಪಡಿಸಿದರು.

Ayushman Bhava
'ಆಯುಷ್ಮಾನ್​​​​ಭವ' ಚಿತ್ರತಂಡ

ಯಾವುದೇ ಒಂದು ಸಂಸ್ಥೆ 50 ವರ್ಷಗಳಿಂದ ಸಿನಿಮಾ ನಿರ್ಮಾಣ ಮಾಡಿಕೊಂಡು ಬರುವುದು ಸುಲಭದ ಮಾತಲ್ಲ. ಅದರೆ ನನ್ನ ಸಂಸ್ಥೆ 1969 ರಲ್ಲಿ ರಾಜಣ್ಣನ ಜೊತೆ ಮೇಯರ್ ಮುತ್ತಣ್ಣ ಸಿನಿಮಾ ಮಾಡಿದ್ದು 2019 ರಲ್ಲಿ ಶಿವಣ್ಣನ ಜೊತೆ ಆಯುಷ್ಮಾನ್ ಭವ ಸಿನಿಮಾ ಮಾಡಿದ್ದೀನಿ. ನವೆಂಬರ್​ 1 ಕನ್ನಡ ರಾಜ್ಯೋತ್ಸವದಂದು ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡಿಗನಾಗಿ ರಾಜ್ಯೋತ್ಸವದಂದು ಸಿನಿಮಾ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಕರ್ನಾಟಕದ ಕುಳ್ಳ ಎಂದೇ ಖ್ಯಾತರಾದ ದ್ವಾರಕೀಶ್ ಹೇಳಿದರು. ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಶಿವಣ್ಣನ ಜೊತೆ ನಟಿಸಿದ್ದು ಪಿ. ವಾಸು ನಿರ್ದೇಶನದ ಸಿನಿಮಾಗಳಲ್ಲಿ ನಟಿಸುವುದು ದೊಡ್ಡ ಟಾಸ್ಕ್​. ಅನಂತ್​​​ನಾಗ್ ಹಾಗೂ ಸುಹಾಸಿನಿ ಜೊತೆ ನಟಿಸುವುದು ನನ್ನ ಪುಣ್ಯ ಎಂದು ರಚಿತಾ ರಾಮ್ ಹೇಳಿದರು. ಇನ್ನು ಈ ಚಿತ್ರದ ವಿಶೇಷ ಅಂದ್ರೆ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಬಹಳ ವರ್ಷಗಳ ಗ್ಯಾಪ್ ನಂತರ ಮತ್ತೆ ಈ ಚಿತ್ರದ ಮೂಲಕ ಸ್ಯಾಂಡಲ್​​ವುಡ್​​​​​​​ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಶಿವಣ್ಣನ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

Intro:ಹ್ಯಾಟ್ರಿಕ್ ಹೀರೋ ಶಿವರಾಜ್ ಹಾಗೂ ನಿರ್ದೇಶಕ ಪಿ.ವಾಸು "ಶಿವಲಿಂಗ " ಚಿತ್ರದ ನಂತರ " ಆಯುಷ್ಮಾನ್ ಭವ" ಚಿತ್ರದಲ್ಲಿ ಮತ್ತೆ ಒಂದಾಗಿದ್ದು, ಚಿತ್ರದ ಮೇಲೆ ಟಗರು ಶಿವನ ಆಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.ಅಲ್ಲದೆ ಈ ಚಿತ್ರಕ್ಕೆ ಮೊದಲು "ಆನಂದ್" ಎಂಬ ಟೈಟಲ್ ಇಟ್ಟು ಶೂಟಿಂಗ್ ಶುರು ಮಾಡಿದ್ದ ಚಿತ್ರತಂಡ ಶೂಟಿಂಗ್ ಕಂಪ್ಲೀಟ್ ಮಾಡುವ ವೇಳೆಗೆ ಚಿತ್ರಕ್ಕೆ " ಆಯುಷ್ಮಾನ್ ಭವ" ಎಂದು ಟೈಟಲ್ ಚೇಂಜ್ ಮಾಡಿದ್ದು,ಈಗ " ಆಯುಷ್ಮಾನ್ ಭವ" ಚಿತ್ರ ರಿಲೀಸ್ ಗೆ ರೆಡಿಯಾಗಿದ್ದು ,ಇದೇ ಮೊದಲ ಬಾರಿಗೆ ಚಿತ್ರತಂಡ ಸುದ್ದಿಗೋಷ್ಠಿ ಮಾಡಿ ಚಿತ್ರದ ಒಂದಷ್ಟು ಮಾಹಿತಿ ಹಂಚಿಕೊಂಡರು.

Body:ಇನ್ನೂ" ಆಯುಷ್ಮಾನ್ ಭವ" ನಿರ್ದೇಶಕ ಪಿ ವಾಸು ಅವರ ಈ ಹಿಂದಿನ ಚಿತ್ರಗಳಂತೆ ಇದು ಸಹ ಸೈಕಾಲಾಜಿಕಲ್ ಎಳೆ ಇದ್ದು, ಚಿತ್ರದಲ್ಲಿನ‌ ನನ್ನ ಪಾತ್ರ ನನ್ನ ಅಭಿಮಾನಿಗಳಿಗೆ ಅಲ್ಲದೆ ಫ್ಯಾಮಿಲಿ ಆಡಿಯನ್ಸ್ ಗೂ ಇಷ್ಟವಾಗುವಂತ ಪಾತ್ರ ಮಾಡಿದ್ದೇನೆ ಎಂದು ಶಿವಣ ಅವರ ಪಾತ್ರದ ಬಗ್ಗೆ ಹೇಳಿದ್ರು.
.ಅಲ್ಲದೆ ಚಿತ್ರದ ಕಥೆಗೂ ಆನಂದ್ ಟೈಟಲ್ ಗೆ ಮ್ಯಾಚ್ ಆಗ್ತಿರಲಿಲ್ಲ ಆಗಾಗಿ ಚಿತ್ರದ ಟೈಟಲ್ ಚೇಂಜ್ ಮಾಡಿದ್ದಾಗಿ ಶಿವಣ್ಣ, ಹೇಳಿದರು.ಅಲ್ಲದೆ ದ್ವಾರಕೀಶ್ ಚಿತ್ರಲಯಾ ನಿರ್ಮಾಣದಲ್ಲಿ ೫೦ ವರ್ಷ. ಕಂಪ್ಲೀಟ್ ಮಾಡಿದ್ದು.ಮೊದಲ ಚಿತ್ರ ಅಪ್ಪಾಜಿ ಜೊತೆವಮಾಡಿದ್ರು ಈಗ ಐವತ್ತನೆ ವರ್ಷದಲ್ಲಿ ೫೨ ನೇ ಚಿತ್ರವನ್ನು ನನ್ನ ಜೋತೆ ದ್ವಾರಕೀಶ್ ಆಂಕಲ್ ಚಿತ್ರ ಮಾಡಿರೋದು ಖುಷಿಯ ವಿಷ್ಯ ಎಂದ್ರು.

Conclusion:ಯಾವುದೇ ಒಂದು ಸಂಸ್ಥೆ ಐವತ್ತು ವರ್ಷಗಳಿಂದ ಸಿನಿಮಾ ನಿರ್ಮಾಣ ಮಾಡಿಕೊಂಡು ಬರುವುದು ಸುಲಭದ ಮಾತಲ್ಲ.ಅದ್ರೆ ನನ್ನ ಸಂಸ್ಥೆ ೧೯೬೯ ರಲ್ಲಿ ರಾಜಣ್ಣನ ಜೊತೆ ಮೇಯರ್ ಮುತ್ತಣ್ಣ ಸಿನಿಮಾ ಮಾಡಿದೆ.೨೦೧೦ರಲ್ಲಿ ಶಿವಣ್ಣನ
ಜೊತೆ ಆಯುಷ್ಮಾನ್ ಭವ ಸಿನಿಮಾ ಮಾಡಿದ್ದೀನಿ ,ನಂವಂಬರ್ ೧ ಕನ್ನಡ ರಾಜ್ಯೋತ್ಸವದಂದು ನಮ್ಮ ಸಿನಿಮಾ ರಿಲೀಸ್ ಆಗ್ತಿದೆ.ಕನ್ನಡಿಗನಾಗಿ ರಾಜ್ಯೋತ್ಸವವದಂದು ಸಿನಿಮಾ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಷ್ಯ ಎಂದು ಕರ್ನಾಟಕದ ಕುಳ್ಳ ದ್ವಾರಕೀಶ್ ಹೇಳಿದರು. ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಫುಲ್ ಫಿಲಂಸ್ ನಾಯಕಿಯಾಗಿ ಶಿವಣ್ಣನ ಜೊತೆ ಮಾಡಿದ್ದಾರೆ. ಅಲ್ಲದೆ ನಿರ್ದೇಶಕ ಪಿ ವಾಸು ಅಂದ್ರೆ ನಾಯಕರನ್ನು ತುಂಬಾ ಡಿಫರೆಂಟಾಗಿ ಡಿಸೈನ್ ಮಾಡಿರುತ್ತಾರೆ .ಅಲ್ಲದೆ ಪಿ ವಾಸು ಅವರ ಚಿತ್ರದಲ್ಲಿ ನಾಯಕಿ ಪತ್ರ ಮಾಡುವುದು ತುಂಬಾ ದೊಡ್ಡ ಟಾಸ್ಕ್. ಇದು ಸಿಕ್ಕ ಪಿವಾಸು ಅವರು ನಟನೆಗೆ ಹೊತ್ತು ನೀಡಿರುವಂತಹ ಒಂದು ಪಾತ್ರವನ್ನು ನನಗೆ ಈ ಚಿತ್ರದಲ್ಲಿ ಕೊಟ್ಟಿದ್ದಾರೆ .ಚಿತ್ರದಲ್ಲಿ ಶಿವರಾಜಕುಮಾರ್ ಅನಂತನಾಗ್ ಸರ್ ಸುವಾಸಿನಿ ಅವರಂತಹ ದಿಗ್ಗಜರ ಜೊತೆ ನಟನೆ ಮಾಡಿರುವುದು ತುಂಬಾ ಹೆಮ್ಮೆಯ ಸಂಗತಿ ಎಂದು ರಚಿತರಾಮ್ ಹೇಳಿದರು. ಇನ್ನು ಆಯುಷ್ಮಾನ್ಭವ ಚಿತ್ರದ ವಿಶೇಷ ಅಂದ್ರೆ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ತುಂಬ ವರ್ಷಗಳ ಗ್ಯಾಪ್ ನಂತರ ಮತ್ತೆ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದು ಇದು ನನ್ನ ಕಂಬ್ಯಾಕ್ ಸಿನಿಮಾವಲ್ಲ ಸ್ಟೇ ಬ್ಯಾಕ್ ಸಿನಿಮಾ. ನನ್ನ ಸ್ಯಾಂಡಲ್ವುಡ್ನಲ್ಲಿ ಮತ್ತೆ ಸಿನಿಮಾ ಮಾಡುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ. ಅಲ್ಲದೆ ಶಿವಣ್ಣನ ಜೊತೆ ಹಿಂದೆ ಮನಮೋಹಕ ಎಂಬ ಚಿತ್ರದಲ್ಲಿ ನಟಿಸಬೇಕಿತ್ತು ಆದರೆ ಕಾರಣಾಂತರದಿಂದ ಆ ಚಿತ್ರ ಅರ್ಧಕ್ಕೆ ನಿಂತಿತು ಈಗ ಈ ಚಿತ್ರದಲ್ಲಿ ಮಾಡಿರೋದು ತುಂಬಾ ಖುಷಿಯ ವಿಚಾರ ನಾವೊಂದು ನಮ್ಮ ಕನ್ನಡ ರಾಜ್ಯೋತ್ಸವದ ದಿನ ಸಿನಿಮಾ ರಿಲೀಸ್ ಆಗಿದ್ದು ದಯವಿಟ್ಟು ಬಂದು ಸಿನಿಮಾ ನೋಡಿ ಹರಸಿ ಎಂದು ಅಭಿಮಾನಿಗಳಲ್ಲಿ ನಿಧಿಸುಬ್ಬಯ್ಯ ಮನವಿ ಮಾಡಿದರು. ರುಸ್ತುಮ್ ಚಿತ್ರದ ನಂತರ ಆಯುಷ್ಮಾನ್ ಭವ ರಿಲೀಸ್ ಆಗುತ್ತಿದ್ದು. ಅದರಲ್ಲೂ ಕನ್ನಡ ರಾಜ್ಯೋತ್ಸವದ ಅಂದೇ ಈ ಸಿನಿಮಾ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ..

ಸತೀಶ ಎಂಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.