ETV Bharat / sitara

ರಾಘು ಆರೋಗ್ಯವಾಗಿದ್ದಾರೆ, ಯಾವ ಸಮಸ್ಯೆಯೂ ಇಲ್ಲ: ಶಿವರಾಜ್​​ಕುಮಾರ್​​ - Raghavendra rajkumar health update

ರಾಘವೇಂದ್ರ ರಾಜ್​ಕುಮಾರ್ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಆತ ಇನ್ನೂ ಹೆಚ್ಚು ಸಿನಿಮಾಗಳನ್ನು ಮಾಡುತ್ತಾರೆ ಎಂದು ಶಿವರಾಜ್​​​ಕುಮಾರ್ ಹೇಳಿದ್ದಾರೆ.

Shivarajkumar
ಶಿವರಾಜ್​​ಕುಮಾರ್​​
author img

By

Published : Feb 17, 2021, 2:12 PM IST

ಚಿತ್ರೀಕರಣ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾದ ಕಾರಣ ರಾಘವೇಂದ್ರ ರಾಜ್​ಕುಮಾರ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಘಣ್ಣ ಅವನ್ನು ನೋಡಲು ಸಹೋದರರಾದ ಪುನೀತ್ ರಾಜ್​ಕುಮಾರ್ ಹಾಗೂ ಶಿವರಾಜ್​ಕುಮಾರ್​​ ಇಂದು ಆಸ್ಪತ್ರೆಗೆ ತೆರಳಿದ್ದರು.

ರಾಘಣ್ಣ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಶಿವರಾಜ್​​ಕುಮಾರ್​​

ಇದನ್ನೂ ಓದಿ: ರಾಘವೇಂದ್ರ ರಾಜ್​​ಕುಮಾರ್​ ಆರೋಗ್ಯ ವಿಚಾರಿಸಿದ ಶಿವಣ್ಣ, ಪುನೀತ್​​​​

ರಾಘಣ್ಣ ಅವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್​​ಕುಮಾರ್, "ರಾಘು ಆರೋಗ್ಯವಾಗಿದ್ದಾರೆ. ಯಾವ ಸಮಸ್ಯೆ ಕೂಡಾ ಇಲ್ಲ, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ನನ್ನೊಂದಿಗೆ ರಾಘು ನಗುತ್ತಾ ಮಾತನಾಡಿದರು. ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದ್ದರಿಂದ ಈ ರೀತಿ ಆಗಿದೆ ಅಷ್ಟೇ. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ. ಕೆಲವು ದಿನಗಳ ವಿಶ್ರಾಂತಿ ಪಡೆದ ನಂತರ ಮತ್ತೆ ಚಿತ್ರೀಕರಣಕ್ಕೆ ಹಾಜರಾಗುತ್ತಾರೆ. ರಾಘು ಇನ್ನೂ ಹೆಚ್ಚಿನ ಸಿನಿಮಾಗಳನ್ನು ಮಾಡುತ್ತಾರೆ ಎಂದು ಶಿವರಾಜ್​ಕುಮಾರ್ ರಾಘಣ್ಣ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.