ETV Bharat / sitara

ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ : ರೈತ ಹೋರಾಟದ ಬಗ್ಗೆ ಶಿವಣ್ಣನ ಮಾತು - shivarajk kumarf news

ಸಮಸ್ಯೆ ಬಗೆಹರಿಯೋದಾದ್ರೆ ನಾವೆಲ್ಲ ತಾರೆಯರು ಬೀದಿಗಿಳಿಯಲು ರೆಡಿ. ಆದರೆ, ಇದು ಸರ್ಕಾರದಿಂದ ಮಾಡೋಕಷ್ಟೇ ಸಾಧ್ಯ. ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡಿದ್ರೆ ಪಾಪ ಅನ್ಸುತ್ತೆ..

ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ : ರೈತ ಹೋರಾಟದ ಬಗ್ಗೆ ಶಿವಣ್ಣನ ಮಾತು

author img

By

Published : Feb 10, 2021, 6:59 PM IST

Updated : Feb 10, 2021, 7:43 PM IST

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನ ವಿರೋಧಿಸಿ ರೈತ ಸಂಘಟನೆಗಳು ಕಳೆದ ಮೂರು ತಿಂಗಳಿನಿಂದ ದೆಹಲಿಯ ಹೊರ ವಲಯದಲ್ಲಿ ಪ್ರತಿಭಟನೆ ಮಾಡುತ್ತಿವೆ.

ಈ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಇದೇ ರೈತರ ಹೋರಾಟದ ಬಗ್ಗೆ ಸ್ಯಾಂಡಲ್​​ವುಡ್ ನಟ ಶಿವರಾಜ್ ಕುಮಾರ್ ಮೌನ ಮುರಿದಿದ್ದಾರೆ.

ನಮ್ಮ ಸಿನಿಮಾ ಇಂಡಸ್ಟ್ರಿ ಸಮಸ್ಯೆಯನ್ನೇ ನಮಗೆ ಬಗೆ ಹರಿಸೋಕೆ ಆಗ್ತಿಲ್ಲ. ಇನ್ನು ಬೇರೆಯವರ ಸಮಸ್ಯೆ ಹೇಗೆ ಪರಿಹರಿಸೋದು ಅಂತಾ ಶಿವರಾಜ್ ಕುಮಾರ್ ಹೇಳಿದ್ದಾರೆ. ಆದರೆ, ಸಪೋರ್ಟ್ ಮಾತ್ರ ಖಂಡಿತವಾಗಿಯೂ ಇರುತ್ತೆ‌. ಮನುಷ್ಯ ಪರಸ್ಪರ ಒಬ್ಬರಿಗೆ ಒಬ್ಬರು ಸಪೋರ್ಟ್ ಮಾಡಬೇಕು, ಯಾರು ಹೋರಾಟದ ಬಗ್ಗೆ ಕಾಮೆಂಟ್ ಮಾಡ್ತಿಲ್ಲ ಅಂತಾರೆ. ಆದರೆ, ನಮ್ಮಿಂದ ಹಾಗೂ ಇಡೀ ಭಾರತೀಯ ಸಿನಿಮಾರಂಗ ಬೀದಿಗೆ ಇಳಿಯೋದ್ರಿಂದ ಏನೂ ಸಾಧ್ಯವಾಗಲ್ಲ.

ಸಮಸ್ಯೆ ಬಗೆಹರಿಯೋದಾದ್ರೆ ನಾವೆಲ್ಲ ತಾರೆಯರು ಬೀದಿಗಿಳಿಯಲು ರೆಡಿ. ಆದರೆ, ಇದು ಸರ್ಕಾರದಿಂದ ಮಾಡೋಕಷ್ಟೇ ಸಾಧ್ಯ. ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡಿದ್ರೆ ಪಾಪ ಅನ್ಸುತ್ತೆ. ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ. ಆದ್ರೆ, ಅಧಿಕಾರ ನನ್ನ ಕೈಯಲ್ಲಿ ಇಲ್ವಲ್ಲಾ ಅಂತಾ ಶಿವರಾಜ್ ಕುಮಾರ್ ಹೇಳಿದ್ದಾರೆ.

Last Updated : Feb 10, 2021, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.