ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಸದ್ಯ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಈ ಹಿಂದೆ ಕರಾವಳಿ ಬೆಡಗಿ ಹೆಣ್ಣುಮಗುವನ್ನು ಸರೋಗಸಿ(ಬಾಡಿಗೆ ತಾಯ್ತನ) ಮೂಲಕ ಪಡೆದಿದ್ದು, ಸದ್ಯ ಆ ಮಗುವನ್ನು ಮನೆಗೆ ಸ್ವಾಗತಿಸಿದ್ದಾರೆ.
ಈ ಹಿಂದೆಯೇ ಆ ಹೆಣ್ಣು ಮಗು ತಮ್ಮ ಕೈ ಹಿಡಿದಿರುವ ಫೋಟೋವನ್ನು ಇನ್ಸ್ಟಾಗ್ರಾಂಗೆ ಹಾಕಿದ್ದ ಶಿಲ್ಪಾ ನಮ್ಮ ಮನೆಯ ವಂಶೋದ್ಧಾರಕಿ, ಲಿಟ್ಟಲ್ ಪ್ರಿನ್ಸ್ ಬರುತ್ತಿದ್ದಾಳೆ ಎಂದು ಬರೆದಿದ್ದರು.
- " class="align-text-top noRightClick twitterSection" data="
">
ಈಗಾಗಲೇ ಶಿಲ್ಪಾ ಮತ್ತು ರಾಜ್ ಕುಂದ್ರಾ ದಂಪತಿಗೆ ಏಳು ವರ್ಷದ ವಿಯಾನ್ ಎಂಬ ಮಗನಿದ್ದಾನೆ. ಸದ್ಯ ತಾವು ಪಡೆದಿರುವ ಹೆಣ್ಣು ಮಗುವನ್ನು ಮನೆಗೆ ಕರೆದುಕೊಂಡು ಬರುವ ವೇಳೆ ಶಿಲ್ಪಾ ಪತಿ ರಾಜ್ ಕುಂದ್ರಾ ಮತ್ತು ಮಗ ವಿಯಾನ್ ಜೊತೆಗಿದ್ದರು.