ETV Bharat / sitara

ಕವಿದ ಕಾರ್ಮೋಡ ಸರಿದು ಕಾಮನಬಿಲ್ಲು ಮೂಡಲಿದೆ: ಪತಿಗೆ ಶಿಲ್ಪಾ ಶೆಟ್ಟಿ ಹೃದಯಸ್ಪರ್ಶಿ ಮಾತು - ಶಿಲ್ಪಾ ಶೆಟ್ಟಿ ವಿವಾಹ ವಾರ್ಷಿಕೋತ್ಸವ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ(Shilpa Shetty and Raj Kundra wedding anniversary) ಇಂದು ತಮ್ಮ 12ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ಕುರಿತು ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಮದುವೆಯ ಚಿತ್ರಗಳ ಕೊಲಾಜ್ ಜೊತೆಗೆ ತನ್ನ ಪತಿಗೆ ಹೃದಯಸ್ಪರ್ಶಿ ಬರಹಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.

shilpa-shetty
ಶಿಲ್ಪಾ ಶೆಟ್ಟಿ
author img

By

Published : Nov 22, 2021, 12:56 PM IST

ಮುಂಬೈ: 12ನೇ ವರ್ಷದ ವಿವಾಹ ವಾರ್ಷಿಕೋತ್ಸವ ಹಿನ್ನೆಲೆ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಮದುವೆಯ ಫೋಟೋಗಳನ್ನು ಶೇರ್​ ಮಾಡುವ ಮೂಲಕ ಪತಿ ರಾಜ್​ ಕುಂದ್ರಾ(Shilpa Shetty and Raj Kundra wedding anniversary) ಬಗ್ಗೆ ಸೊಗಸಾದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿವಾಹ ದಿನದ ಫೋಟೋಗಳನ್ನು ಹಂಚಿಕೊಂಡಿರುವ ನಟಿ, ಅಂದಿನ ದಿನ ಇಬ್ಬರು ಮಾಡಿದ್ದ ಪ್ರಮಾಣಗಳನ್ನು ತಲುಪುವ ಮುಂದೆ ಸಾಗುವ. ಏಳು ಬಿಳುಗಳ ನಡುವೆ ದೇವರನ್ನು ನಂಬಿ ಸಾಗುವ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ, ಅಶ್ಲೀಲ ಚಿತ್ರ ನಿರ್ಮಾಣ ಆರೋಪ ಪ್ರಕರಣ(alleged pornographic films case)ದಲ್ಲಿ ರಾಜ್‌ ಕುಂದ್ರಾ(Raj Kundra) ಜೈಲಿಗೆ ಹೋದ ಸಂದರ್ಭದಲ್ಲಿ ನಮ್ಮ ಇಡೀ ಕುಟುಂಬವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. ನಮ್ಮ ಮಕ್ಕಳೊಂದಿಗೆ ಭರವಸೆಯ ದಿನಗಳನ್ನು ನಾವು ಕಳೆಯುತ್ತೇವೆ. ಕವಿದ ಕಾರ್ಮೋಡ ಸರಿದು ಕಾಮನಬಿಲ್ಲು ಮೂಡಲಿದೆ ಎಂದು ಶಿಲ್ಪಾ ಶೆಟ್ಟಿ ಭರವಸೆಯ ಮಾತುಗಳನ್ನು ಆಡಿದ್ದಾರೆ.

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಜುಲೈ 19ರ ರಾತ್ರಿ ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕುಂದ್ರಾ ವಿರುದ್ಧ ಮುಂಬೈ ಪೊಲೀಸರು 1,500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ರಾಜ್‌ ಕುಂದ್ರಾ ಅವರಿಗೆ ಮುಂಬೈ ನ್ಯಾಯಾಲಯ ₹ 50 ಸಾವಿರ ಜೊತೆಗೆ ಜಾಮೀನು ಮಂಜೂರು ಮಾಡಿದೆ. ಸದ್ಯ ಅವರು ಕುಟುಂಬದ ಜೊತೆ ವಾಸವಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.