ವಿನೋದ್ ಪ್ರಭಾಕರ್ ಅಭಿನಯದ 'ಶ್ಯಾಡೋ' ಸಿನಿಮಾ ಕಿರುತೆರೆಯಲ್ಲಿ ಪ್ರದರ್ಶನ ಕಾಣ್ತಿದೆ. ಫೆಬ್ರವರಿ 5ರಂದು ತೆರೆ ಕಂಡಿದ್ದ ಶ್ಯಾಡೋ ಸಿನಿಮಾ, ಮೇ 2ರಂದು ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಶ್ಯಾಡೋ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಪವರ್ಫುಲ್ ಪರ್ಫಾರ್ಮೆನ್ಸ್ ಪ್ರೇಕ್ಷಕರನ್ನು ಸೆಳೆದಿತ್ತು. ಥಿಯೇಟರ್ಗಳಲ್ಲಿ ಸಿನಿಮಾ ಬಿಡುಗಡೆಯಾದ ಕೂಡಲೇ ಕನ್ನಡ ಸಿನಿ ಪ್ರೇಕ್ಷಕರು ಅಭೂತಪೂರ್ವವಾಗಿ ಈ ಚಿತ್ರವನ್ನು ಸ್ವಾಗತಿಸಿ ಬೆಂಬಲಿಸಿದರು.
ಇದರಲ್ಲಿ ಶ್ರೀಸಾಮಾನ್ಯನೊಬ್ಬ ತನ್ನ ನೆರಳು ತಪ್ಪಿ ಹೋಗಿದೆ ಎಂದು ಪೊಲೀಸರಿಗೆ ದೂರು ನೀಡುತ್ತಾನೆ. ಎಲ್ಲರನ್ನೂ ಈ ದೂರು ಗೊಂದಲದಲ್ಲಿ ಮುಳುಗಿಸುತ್ತದೆ. ಆದರೂ ಪೊಲೀಸರು ಈ ಕುರಿತು ತನಿಖೆ ನಡೆಸಲು ಪ್ರಾರಂಭಿಸುತ್ತಾರೆ. ಅದು ಸಂಭವನೀಯ ಹತ್ಯಾ ಪ್ರಯತ್ನವಾಗಿರುತ್ತದೆ. ಇದೊಂದು ರಿವೇಂಜ್ ಆ್ಯಕ್ಷನ್ ಚಿತ್ರವಾಗಿದ್ದು, ಪ್ರೀತಿ, ಕೌಟುಂಬಿಕ ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಹೊಂದಿದೆ.
ಈ ಚಿತ್ರದಲ್ಲಿ ಆ್ಯಕ್ಷನ್ ಹೀರೋ ವಿನೋದ್ ಪ್ರಭಾಕರ್, ಹಿಂದಿ ಹಾಗೂ ಪಂಜಾಬಿ ಚಿತ್ರಗಳ ಖ್ಯಾತ ನಟಿ ಶೋಭಿತಾ ರಾಣಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಗೌಡ ನಿರ್ದೇಶನದ ಈ ಚಿತ್ರವನ್ನು ಚಕ್ರವರ್ತಿ ಸಿ.ಹೆಚ್. ನಿರ್ಮಿಸಿದ್ದಾರೆ.