ಮುಂಬೈ: ಬುಡಾಪೆಸ್ಟ್ ಪ್ರವಾಸದಿಂದ ಭಾರತಕ್ಕೆ ಮರಳಿರುವ ಬಾಲಿವುಡ್ ಹಿರಿಯ ನಟಿ ಶಬಾನಾ ಅಜ್ಮಿ ಕೊರೊನಾ ಭೀತಿಯಿಂದಾಗಿ ಸೆಲ್ಫ್ ಕ್ವಾರಂಟೈನ್ ವಿಧಿಸಿಕೊಂಡಿದ್ದಾರೆ.
ಮಾರ್ಚ್ 15 ರಂದು ಬುಡಾಪೆಸ್ಟ್ ಪ್ರವಾಸದಿಂದ ನಾನು ಹಿಂತಿರುಗಿದ್ದು, ಮಾರ್ಚ್ 31ರ ವರೆಗೆ ಪ್ರತ್ಯೇಕವಾಗಿ ಒಬ್ಬಳೇ ಇರಲು ನಿರ್ಧರಿಸಿದ್ದೇನೆಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
- View this post on Instagram
Both of us got back from Budapest on 15th March and have self quarantined till 30th March
">
ಇಡೀ ವಿಶ್ವವನ್ನೇ ಅಲುಗಾಡಿಸಿರುವ ಕೊರೊನಾ ವೈರಸ್ ಜಾಗತಿಕವಾಗಿ 10,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಮತ್ತು 2.5 ಲಕ್ಷಕ್ಕೂ ಹೆಚ್ಚು ಜನರು ಈ ಮಹಾಮಾರಿಯಿಂದ ಬಳಲುತ್ತಿದ್ದಾರೆ.
ಕೊರೊನಾ ಭೀತಿ ಹೆಚ್ಚಾದಂತೆ ರೋಗದ ಅಪಾಯ ಮಟ್ಟವನ್ನು ಕಡಿಮೆ ಮಾಡಲು ಬಾಲಿವುಡ್ನ ಪ್ರಸಿದ್ಧ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್ ಖಾನ್ ಸೇರಿದಂತೆ ಇನ್ನೂ ಹಲವವರು ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿದ್ದಾರೆ. ಇದರಿಂದಾಗಿ ಅವರು ತಮ್ಮ ಬಿಡುವಿನ ವೇಳೆಯನ್ನು ಮನೆಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.