ETV Bharat / sitara

ಸಿನಿಮಾ ಬಿಡುಗಡೆಯ ಮೊದಲ ದಿನದ 100 ಟಿಕೆಟ್​ ಕೊಡಿ ಎಂದ ಮೇಯರ್​! - ಚಿತ್ರಮಂದಿರಗಳಿಗೆ ಮೇಯರ್​ ಪತ್ರ

ಮೇಯರ್​ ಭಾಗ್ಯಲಕ್ಷ್ಮಿ ಕಚೇರಿಯಿಂದಲೇ ಇಂತಹ ಪತ್ರ ಬಂದಿದ್ದರಿಂದ ಚಿತ್ರಮಂದಿರದ ಮಾಲೀಕರು ಬೆಚ್ಚಿ ಬೀಳುವುದರೊಂದಿಗೆ ಅಚ್ಚರಿಗೂ ಒಳಗಾಗಿದ್ದಾರೆ.

Mayor
Mayor
author img

By

Published : Mar 11, 2022, 11:57 AM IST

Updated : Mar 11, 2022, 2:25 PM IST

ವಿಜಯವಾಡ(ಆಂಧ್ರಪ್ರದೇಶ) : ನಿಮ್ಮ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಸಿನಿಮಾದ ಮೊದಲ ದಿನದ ಪ್ರತಿ ಶೋನ ತಲಾ 100 ಟಿಕೆಟ್​ಗಳನ್ನು ಮೇಯರ್​ ಕಚೇರಿಗೆ ಕಳುಹಿಸಿಕೊಡಿ. ಹೀಗೆಂದು ವಿಜಯವಾಡ ಮೇಯರ್​ ಚಿತ್ರಮಂದಿರಗಳಿಗೆ ಕಟ್ಟಾಜ್ಞೆ ಹೊರಡಿಸಿದ್ದಾರೆ.

ಪಾಲಿಕೆ ಸದಸ್ಯರು ಮತ್ತು ಮುಖಂಡರು ಸಿನಿಮಾ ಟಿಕೆಟ್​​ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಕಾರಣಕ್ಕೆ ಮೇಯರ್​​ ರಾಯನ ಭಾಗ್ಯಲಕ್ಷ್ಮಿ ವಿಜಯವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಚಿತ್ರಮಂದಿರಗಳಿಗೆ ಇಂತಹದೊಂದು ಪತ್ರ ಬರೆದು ಸೂಚಿಸಿದ್ದಾರೆ.

ಮಲ್ಟಿಪ್ಲೆಕ್ಸ್​​ನಲ್ಲಿ ತೆರೆ ಕಾಣುವ ಪ್ರತಿ ಸಿನಿಮಾದ ಮೊದಲ ಶೋನ 100 ಟಿಕೆಟ್​ಗಳನ್ನು ಮೇಯರ್​ ಕಚೇರಿಗೆ ಕಳುಹಿಸಿಕೊಡಬೇಕು. ಅದಕ್ಕೆ ತಗಲುವ ವೆಚ್ಚವನ್ನು ಪಾವತಿಸಲಾಗುತ್ತದೆ ಎಂದೂ ಚಿತ್ರಮಂದಿರಗಳಿಗೆ ಅವರು ಪತ್ರ ಬರೆದಿದ್ದಾರೆ.

ಮೇಯರ್​ ಭಾಗ್ಯಲಕ್ಷ್ಮಿ ಕಚೇರಿಯಿಂದಲೇ ಇಂತಹ ಪತ್ರ ಬಂದಿದ್ದರಿಂದ ಚಿತ್ರಮಂದಿರದ ಮಾಲೀಕರು ಬೆಚ್ಚಿ ಬೀಳುವುದರೊಂದಿಗೆ ಅಚ್ಚರಿಗೂ ಒಳಗಾಗಿದ್ದಾರೆ.

ಇದನ್ನೂ ಓದಿ: ಗಾಜನೂರಲ್ಲಿ ಅಣ್ಣಾವ್ರ ತಂಗಿಯಿಂದ ಪೂಜೆ: ಸೆಟ್ಟೇರಿದ ರಾಘಣ್ಣ ಅಭಿನಯದ ಹೊಸ ಚಿತ್ರ

Last Updated : Mar 11, 2022, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.