ವಾಷಿಂಗ್ಟನ್: 'ಸ್ಕಾರ್ ಫೇಸ್' ಚಿತ್ರದ ಅದ್ಭುತ ನಟನೆಯಿಂದಾಗಿ ಖ್ಯಾತಿ ಗಳಿಸಿದ್ದ ಹಾಲಿವುಡ್ ನಟ 72 ವರ್ಷದ ಜಿನೊ ಸಿಲ್ವಾ ನಿಧನರಾಗಿದ್ದಾರೆ.
ಸಿಲ್ವಾ ಅವರು ಮೇ 9 ರಂದು ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ. ಅವರು ಬುದ್ಧಿಮಾಂದ್ಯತೆ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ನಾಲ್ಕು ದಶಕಗ ವೃತ್ತಿಜೀವನದಲ್ಲಿ ಸಿಲ್ವಾ, ಸ್ಕಲ್ ಎನ್ನುವ ಪಾತ್ರವನ್ನು ನಿರ್ವಹಿಸಿದ್ದರು, ಹಿರಿಯ ಹಾಲಿವುಡ್ ನಟ ಅಲ್ ಪಸಿನೊ ನಿರ್ದೇಶನದ ಸ್ಕಾರ್ಫೇಸ್ ಚಿತ್ರದಲ್ಲಿ ಸಿಲ್ವಾ ನಟಿಸಿದ್ದ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
1981 ರಲ್ಲಿ ಬಿಡುಗಡೆಯಾದ ಜೂಟ್ ಸೂಟ್, ಸ್ಪಿಲ್‌ಬರ್ಗ್ ಅವರ ಅಮಿಸ್ಟಾಡ್, ದಿ ಲಾಸ್ಟ್ ವರ್ಲ್ಡ್: ಜುರಾಸಿಕ್ ಪಾರ್ಕ್ ಸೇರಿದಂತೆ ಅನೇಕ ಚಿತ್ರದಲ್ಲಿ ನಟಿಸಿದ್ದಾರೆ. ಟೆಲಿವಿಷನ್ನಲ್ಲೂ ಜನಪ್ರಿರಾಗಿದ್ದರು.