ETV Bharat / sitara

ಸಿಲ್ವರ್ ಸ್ಕ್ರೀನ್ ಮೇಲೆ ಸರೋಜಿನಿ ನಾಯ್ಡು ಜೀವನ ಚರಿತ್ರೆ : ವಿನಯ್ ಚಂದ್ರ ಆ್ಯಕ್ಷನ್ ಕಟ್

author img

By

Published : Mar 29, 2022, 8:20 PM IST

ದಕ್ಷಿಣ ಭಾರತದ ಖ್ಯಾತ ನಟಿ ಶಾಂತಿಪ್ರಿಯಾ ಅವರು ಸರೋಜಿನಿ ನಾಯ್ಡು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಒಂದು ಕಾಲದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದ ನಟ ಈ ಬಯೋಪಿಕ್ ಮೂಲಕ ಪುನರಾಗಮನ ಮಾಡುತ್ತಿದ್ದಾರೆ.

ಸಿಲ್ವರ್ ಸ್ಕ್ರೀನ್ ಮೇಲೆ ಸರೋಜಿನಿ ನಾಯ್ಡು ಜೀವನ ಚರಿತ್ರೆ

ಕನ್ನಡ ಚಿತ್ರರಂಗದಲ್ಲಿ ಬಯೋಫಿಕ್ ಸಿನಿಮಾಗಳ ಟ್ರೆಂಡ್ ಹೆಚ್ಚಾಗುತ್ತಿದೆ. ಈ ಸಾಲಿಗೆ ಭಾರತದ ಗಾನ ಕೋಗಿಲೆ ಹಾಗು ರಾಜಕಾರಣಿ ಸರೋಜಿನಿ ನಾಯ್ಡು ಅವರ ಜೀವನ ಚರಿತ್ರೆ ಈಗ ಸಿನಿಮಾ ಆಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ, ಗುರು, ಬಾಡಿಗಾರ್ಡ್‌ನಂತಹ ಸಿನಿಮಾಗಳಿಗೆ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ವಿನಯ್ ಚಂದ್ರ, ಸರೋಜಿನಿ ನಾಯ್ಡು ಅವರ ಜೀವನಚರಿತ್ರೆ ಆಧಾರಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ‌.

ಸದ್ಯ ಸರೋಜಿನಿ ನಾಯ್ಡು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಈ ವಿಚಾರವನ್ನ ಹಂಚಿಕೊಳ್ಳಲು ನಿರ್ದೇಶಕ ವಿನಯ್ ಚಂದ್ರ, ಸರೋಜಿನಿ ನಾಯ್ಡು ಪಾತ್ರ ಮಾಡುತ್ತಿರುವ ಸೌತ್ ನ ಖ್ಯಾತಿ ನಟಿ ಶಾಂತಿಪ್ರಿಯಾ, ಸರೋಜಿನಿ ನಾಯ್ಡು ಬಾಲ್ಯದ ಪಾತ್ರ ಮಾಡುತ್ತಿರುವ ಸೋನಾಲ್ ಮಾಂತೆರೋ, ಕಥೆಗಾರ ಧೀರಜ್ ಮಿಶ್ರಾ, ನಿರ್ಮಾಪಕರಾದ ಹನಿ ಚೌಧರಿ ಮತ್ತು ಚರಣ್ ಸುವರ್ಣ, ಹೇಮಂತ್ ಗೌಡ ಈ ವೇಳೆ ಉಪಸ್ಥಿತರಿದ್ದರು‌.

ಸರೋಜಿನಿ ನಾಯ್ಡು ಬಾಲ್ಯದ ಪಾತ್ರ ಮಾಡುತ್ತಿರುವ ಸೋನಾಲ್ ಮಾಂತೆರೋ ಮಾತನಾಡಿ, ನನಗೆ ಬಯೋಫಿಕ್ ಸಿನಿಮಾ ಮಾಡುವ ಕನಸು ಇತ್ತು, ಈಗ ಈ ಸಿನಿಮಾ ಮೂಲಕ ಈಡೇರುತ್ತಿದೆ ಅಂದರು. ನಿರ್ದೇಶಕ ವಿನಯ್ ಚಂದ್ರ ಮಾತನಾಡಿ, ಇಂಡಿಯಾದ ಬಗ್ಗೆ ಗೊತ್ತಿರದ ಕಥೆಯನ್ನು ಹೇಳುತ್ತದೆ ಮತ್ತು ಚಿತ್ರ ಸರೋಜಿನಿ ನಾಯ್ಡು ಅವರ ಹಲವು ವೈಯಕ್ತಿಕ ವಿಚಾರಗಳನ್ನು ಹೇಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ದಕ್ಷಿಣ ಭಾರತದ ಖ್ಯಾತ ನಟಿ ಶಾಂತಿಪ್ರಿಯಾ ಅವರು ಸರೋಜಿನಿ ನಾಯ್ಡು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಒಂದು ಕಾಲದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದ ನಟ ಈ ಬಯೋಪಿಕ್ ಮೂಲಕ ಪುನರಾಗಮನ ಮಾಡುತ್ತಿದ್ದಾರೆ. ಇದರ ಜೊತೆಗೆ ಹಿತನ್ ತೇಜವಾಣಿ ಅವರು ಸರೋಜಿನಿ ನಾಯ್ಡು ಅವರ ಪತಿ, ಮುತ್ಯಾಲ ಗೋವಿಂದರಾಜುಲು ನಾಯ್ಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ರಂಗಾಯಣ ರಘು ಹಾಗು ಜರೀನಾ ವಹಾಬ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಬರಹಗಾರ ಧೀರಜ್ ಮಿಶ್ರ, ಸರೋಜಿನಿ ನಾಯ್ಡು ಅವರ ಬಗ್ಗೆ ವ್ಯಾಪಕವಾದ ಸಂಶೋಧನೆ ಮಾಡಿದ್ದಾರೆ. ಅನಿಲ್ ಕುಮಾರ್ ಕೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ, ವಿನಯ್ ಚಂದ್ರ ಅವರೇ ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರು. ಹನಿ ಚೌಧರಿ ಮತ್ತು ಚರಣ್ ಸುವರ್ಣ ಅವರ ಬೆಂಬಲದೊಂದಿಗೆ ಹೇಮಂತ್ ಗೌಡ ವಿಸಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಲಾಗುತ್ತಿದೆ.

ಈ ಚಿತ್ರವನ್ನ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಿಸಿ ಬಳಿಕ‌ ತೆಲುಗು ಹಾಗೂ ತಮಿಳಿಗೆ ಡಬ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಜೂನ್ ಮೊದಲ ವಾರದಲ್ಲಿ ಉತ್ತರ ಪ್ರದೇಶ ಮತ್ತು ಮುಂಬೈ, ಕೊಡಗು ಹಾಗು ಬೆಂಗಳೂರಿನ ಕೆಲವು ಭಾಗಗಳಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.