ETV Bharat / sitara

ನಿರ್ಮಾಪಕ ಟೇಶಿ ವೆಂಕಟೇಶ್ ಆರೋಪಕ್ಕೆ ಗೋವಿಂದ್​ ಪ್ರತ್ಯುತ್ತರ - undefined

ನಾನು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ವೇಳೆ ಏನೇನು ಕೆಲಸ ಮಾಡಿದ್ದೇನೆ ಎಂಬುದರ ಲಿಸ್ಟ್ ಕೊಡುತ್ತೇನೆ. ಬೇಕಾದರೆ ವೆಂಕಟೇಶ ಅದನ್ನು ಚೆಕ್​ ಮಾಡಿಕೊಳ್ಳಲಿ- ಸಾ.ರಾ ಗೋವಿಂದ್.

ಗೋವಿಂದ್​ ಪ್ರತ್ಯುತ್ತರ
author img

By

Published : Jun 28, 2019, 10:57 AM IST

Updated : Jun 28, 2019, 11:13 AM IST

ಬೆಂಗಳೂರು: ನಿರ್ಮಾಪಕ ಟೇಶಿ ವೆಂಕಟೇಶ್ ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್​ ಪ್ರತಿಕ್ರಿಯಿಸಿದ್ದಾರೆ.

ಮೊನ್ನೆ ಮಾಧ್ಯಮಗೋಷ್ಠಿಯಲ್ಲಿ ಗೋವಿಂದು ಮೇಲೆ ಹರಿಹಾಯ್ದಿದ್ದ ವೆಂಕಟೇಶ್​, ಸಾ.ರಾ ಗೋವಿಂದು ಹಿಟ್ಲರ್​​​ನಂತೆ ವರ್ತಿಸುತ್ತಾರೆ. ಅವರು ಕುಟುಂಬ ರಾಜಕಾರಣ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಅವರ ಈ ಆರೋಪಗಳಿಗೆ ನಗರದಲ್ಲಿಂದು ಈಟಿವಿ ಭಾರತ್​​ಗೆ ಪ್ರತಿಕ್ರಿಯಿಸಿದ ಗೋವಿಂದ್​​, ಟೇಶಿ ವೆಂಕಟೇಶ್ ಅವರು ಒಂದು ಬಾರಿ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನನ್ನ ಬಣದಿಂದ ಸ್ಪರ್ಧಿಸಿದ್ದನ್ನು ಮರೆತಿದ್ದಾರೆ. ಚುನಾವಣಾ ಸಮಯದಲ್ಲಿ ಈ ರೀತಿ ಮಾತಾಡುವುದು ಸಾಮಾನ್ಯ. ಅವರೂ ನನ್ನ ಸ್ನೇಹಿತರೆ. ಮುಂದಿನ ದಿನಗಳಲ್ಲಿ ಅವರು ಕೂಡ ಅಧ್ಯಕ್ಷರಾಗಬಹುದು. ಆದರೆ, ಈ ಬಾರಿ ನಿರ್ಮಾಪಕರ ವಲಯದಿಂದ ಕಾರ್ಯದರ್ಶಿ ಸ್ಥಾನಕ್ಕೆ ನಾನು ಸುರೇಶ್ ಅವರನ್ನು ಬೆಂಬಲಿಸಿದ್ದೇನೆ ಎಂದರು.

ವೆಂಕಟೇಶ್ ಆರೋಪಕ್ಕೆ ಗೋವಿಂದ್​ ಪ್ರತ್ಯುತ್ತರ

ಅಲ್ಲದೆ ಗೋವಿಂದ್ ಅವರ ಬಣ ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸಿಲ್ಲ,ಕೇವಲ ಅಧಿಕಾರ ಅನುಭವಿಸಲು ಚುನಾವಣೆಗೆ ಸ್ಪರ್ಧಿಸಿದ್ದಾರೆ ಎನ್ನುವ ವೆಂಕಟೇಶ್ ಅರೋಪಕ್ಕೆ ತಿರುಗೇಟು ನೀಡಿದ ಗೋವಿಂದ್​​, ಗಾಂಧಿನಗರದಲ್ಲಿ ನನ್ನದೇ ಆಫೀಸ್ ಇದೆ. ಅಲ್ಲದೆ ನಾನು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ವೇಳೆ ಏನೇನು ಕೆಲಸ ಮಾಡಿದ್ದೇನೆ ಎಂಬುದರ ಲಿಸ್ಟ್ ಕೊಡುತ್ತೇನೆ. ಬೇಕಾದರೆ ವೆಂಕಟೇಶ ಅದನ್ನು ಚೆಕ್​ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.

Intro:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಹಿಟ್ಲರ್ ನಂತೆ ವರ್ತಿಸುತ್ತಾರೆ. ಅಲ್ಲದೆ ಫಿಲಂ ಚೇಂಬರ್ ನಲ್ಲಿ ಸಾರಾ ಗೋವಿಂದು ಕುಟುಂಬ ರಾಜಕಾರಣ ಮಾಡುತ್ತಾರೆ ಎಂಬ ಗಂಭೀರ ಆರೋಪ ಮಾಡಿದ್ದ ನಿರ್ಮಾಪಕ ಟೇಶಿ ವೆಂಕಟೇಶ್ ಗೆ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕರಾದ ಟೇಶಿ ವೆಂಕಟೇಶ್ ಅವರು ಒಂದು ಬಾರಿ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿದ್ದು ನನ್ನ ಬಣ್ಣದಿಂದ ಸ್ಪರ್ಧಿಸಿದ್ದು ಎಂಬುದನ್ನು ಮರೆತಿದ್ದಾರೆ. ಚುನಾವಣಾ ಸಮಯದಲ್ಲಿ ಈ ರೀತಿ ಮಾತನಾಡುವುದು ಸರ್ವೇಸಾಮಾನ್ಯ ವೆಂಕಟೇಶ್ ಅವರು ನನ್ನ ಸ್ನೇಹಿತರೆ ಅವರು ಕೂಡ ಮುಂದಿನ ದಿನಗಳಲ್ಲಿ ಅಧ್ಯಕ್ಷರಾಗಬಹುದು. ಆದರೆ ಈ ಬಾರಿ ನಿರ್ಮಾಪಕರ ವಲಯದಿಂದ ಕಾರ್ಯದರ್ಶಿ ಸ್ಥಾನಕ್ಕೆ ನಾನು ಸುರೇಶ್ ಅವರಿಗೆ ಬೆಂಬಲ ನೀಡುತ್ತಿದ್ದೇನೆ. ಯಾಕಪ್ಪ ಅಂದ್ರೆ ಎನ್ಎಮ್ ಸುರೇಶ್ ಅವರು ಹಲವಾರು ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವಿದೆ. ಹೀಗಾಗಿ ನಾನು ಈ ಬಾರಿ ಎನ್ಎಮ್ ಸುರೇಶ್ ಅವರಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ಹೇಳಿದರು.

Body:ಅಲ್ಲದೆ ಸಾರಾ ಗೋವಿಂದ್ ಅವರ ಬಣ್ಣ ಚಿತ್ರರಂಗದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡುವ ಸಲುವಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಬದಲಾಗಿ ಒಂದು ಎರಡು ವರ್ಷ ಕುಳಿತುಕೊಳ್ಳಲು ಜಾಗಕ್ಕಾಗಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದ ವೆಂಕಟೇಶ್ ಅವರಿಗೆ ಕೊಟ್ಟ ಸಾರಾ ಗೋವಿಂದ್ ಗಾಂಧಿನಗರದಲ್ಲಿ ನನ್ನದೇ ಆದ ಆಫೀಸ್ ಇದೆ. ಅಲ್ಲದೆ ನಾನು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ವೇಳೆ ಏನೇನು ಕೆಲಸ ಮಾಡಿದ್ದೇನೆ ಎಂಬುದನ್ನು ಲಿಸ್ಟ್ ಕೊಡುತ್ತೇನೆ. ಬೇಕಾದರೆ ವೆಂಕಟೇಶ ಅದನ್ನು ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು. ಏನೋ ವೆಂಕಟೇಶ್ ಅವರ ಆರೋಪಕ್ಕೆ ಚುನಾವಣೆಯಲ್ಲಿ ಉತ್ತರ ಕೊಡುತ್ತೇನೆ ಎಂದು ಸಾರಾ ಗೋವಿಂದ್ ಈಟಿವಿ ಭಾರತ ತಿಳಿಸಿದರು.

ಸತೀಶ್.ಎಂಬಿ

Conclusion:
Last Updated : Jun 28, 2019, 11:13 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.