ಮುಂಬೈ: ತನ್ನ ಕಾರು ಚಾಲಕನಿಗೆ ಕೊರೊನಾ ಇರುವುದು ದೃಢವಾಗಿದೆ ಎಂದು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಸಾರಾ ಹಾಗೂ ಆತನ ಕುಟುಂಬದ ಸದಸ್ಯರ ವರದಿ ನೆಗೆಟಿವ್ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ನಟಿ, "ನನ್ನ ಕಾರು ಚಾಲಕನಿಗೆ ಕೋವಿಡ್ ದೃಢವಾಗಿದೆ. ಈ ಕುರಿತು ತಕ್ಷಣ ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದ್ದು, ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಸದ್ಯ ಡ್ರೈವರ್ ಕ್ವಾರಂಟೈನ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾನು, ನನ್ನ ಕುಟುಂಬ ಹಾಗೂ ಮನೆಯಲ್ಲಿರುವ ಇತರ ಸಿಬ್ಬಂದಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ನಮ್ಮ ವರದಿ ನೆಗೆಟಿವ್ ಬಂದಿದೆ" ಎಂದು ಹೇಳಿದ್ದಾರೆ.
- " class="align-text-top noRightClick twitterSection" data="
">
" ಸೂಕ್ತ ಸಹಾಯ ಹಾಗೂ ಉತ್ತಮ ಸಲಹೆ ನೀಡಿದಕ್ಕಾಗಿ ಬಿಎಂಸಿಗೆ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಕಡೆಯಿಂದ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆ. ಎಲ್ಲರೂ ಸುರಕ್ಷಿತವಾಗಿರಿ" ಎಂದು ಇನ್ಸ್ಟಾಗ್ರಾಂ ಪೋಸ್ ಮೂಲಕ ಮನವಿ ಮಾಡಿದ್ದಾರೆ.