'ಕೆಜಿಎಫ್' ಸಿನಿಮಾ ನಂತರ ಯಶ್ ಇಮೇಜ್ ಸಂಪೂರ್ಣ ಬದಲಾಗಿದೆ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಮಾತ್ರ ಅಭಿಮಾನಿ ಬಳಗವನ್ನು ಹೊಂದಿದ್ದ ಯಶ್ಗೆ ಈಗ ತಮಿಳುನಾಡು, ಆಂಧ್ರ , ತೆಲಂಗಾಣ, ಕೇರಳ ಹಾಗೂ ಉತ್ತರ ಭಾರತದಲ್ಲಿ ಕೂಡಾ ಅಭಿಮಾನಿಗಳಿದ್ದಾರೆ. ಈಗೇಕೆ ಈ ವಿಚಾರ ಅಂತೀರಾ...?
![Santu straight forward](https://etvbharatimages.akamaized.net/etvbharat/prod-images/santhu-straight-forward---malayalam1612496154066-90_0502email_1612496165_346.jpg)
ಇದನ್ನೂ ಓದಿ: ಮಕ್ಕಳು ಮತ್ತು ವೃದ್ಧರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಂಗೀಲಾ ಬೆಡಗಿ ಉರ್ಮಿಳಾ ಮಾತೋಡ್ಕರ್
ಮೊದಲು ಯಶ್ ಅಭಿನಯದ ಚಿತ್ರಗಳು ರಾಜ್ಯದಿಂದ ಹೊರ ಹೋಗುತ್ತಿದ್ದದ್ದು ಕಡಿಮೆ ಇತ್ತು. ಆದರೆ 'ಕೆಜಿಎಫ್' ಬೇರೆ ಭಾಷೆಗಳಲ್ಲಿ ಕೂಡಾ ಬಿಡುಗಡೆಯಾಗುತ್ತಿರುವುದರಿಂದ ಯಶ್ ಹಳೆಯ ಸಿನಿಮಾಗಳಿಗೆ ಕೂಡಾ ಡಿಮ್ಯಾಂಡ್ ಬಂದಿದೆ. ಯಶ್ ಅಭಿನಯದ ಹಿಟ್ ಸಿನಿಮಾಗಳ ಪೈಕಿ 'ಸಂತು ಸ್ಟ್ರೇಟ್ ಫಾರ್ವರ್ಡ್' ಕೂಡಾ ಒಂದು. ಕೆ. ಮಂಜು ನಿರ್ಮಾಣದದಲ್ಲಿ ಮಹೇಶ್ ರಾವ್ ನಿರ್ದೇಶನವಿದ್ದ ಈ ಸಿನಿಮಾ 2016ರಲ್ಲಿ ಬಿಡುಗಡೆಯಾಗಿ ಯಶಸ್ವಿ ಕಂಡಿತ್ತು. ಆದರೆ ಬೇರೆ ಯಾವುದೇ ಭಾಷೆಗೂ ಡಬ್ ಆಗಿರಲಿಲ್ಲ. ಇದೀಗ 'ಕೆಜಿಎಫ್' ಸಿನಿಮಾ ಯಶಸ್ವಿಯಾಗಿರುವುದರಿಂದ ಈ ಸಿನಿಮಾಗೂ ಬೇಡಿಕೆ ಕುದುರಿದ್ದು, 'ಸಂತು ಸ್ಟ್ರೇಟ್ ಫಾರ್ವರ್ಡ್' ತಮಿಳು ಮತ್ತು ಮಲಯಾಳಂಗೆ ಡಬ್ ಆಗಿದೆ. ಅಷ್ಟೇ ಅಲ್ಲ, ಈ ಸಿನಿಮಾ ಇಂದು ತಮಿಳುನಾಡು ಹಾಗೂ ಕೇರಳಗಳಲ್ಲಿ ಕೂಡಾ ಬಿಡುಗಡೆಯಾಗುತ್ತಿವೆ. ಒಂದು ವೇಳೆ ಈ ಸಿನಿಮಾ ತಮಿಳು ಮತ್ತು ಮಲಯಾಳಂನಲ್ಲಿ ಯಶಸ್ವಿಯಾದರೆ, ಯಶ್ ಅಭಿನಯದ ಇನ್ನಷ್ಟು ಚಿತ್ರಗಳಿಗೆ ಡಬ್ಬಿಂಗ್ ಬೇಡಿಕೆ ಬಂದರೂ ಆಶ್ಚರ್ಯವಿಲ್ಲ.
![Santu straight forward](https://etvbharatimages.akamaized.net/etvbharat/prod-images/santhu-straight-forward---tamil-11612496154067-5_0502email_1612496165_30.jpg)