'ಗಂಡ ಹೆಂಡತಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಬೋಲ್ಡ್ ನಟಿ ಸಂಜನಾ ಗಲ್ರಾನಿ, ತಮ್ಮ ಗ್ಲಾಮರ್ನಿಂದಲೇ ಚಿತ್ರರಂಗದಲ್ಲಿ ಸದ್ದು ಮಾಡಿದ ನಟಿ. ಸ್ಯಾಂಡಲ್ವುಡ್ ಮಾತ್ರವಲ್ಲದೆ ಸಂಜನಾ ಟಾಲಿವುಡ್ನಲ್ಲಿ ಕೂಡಾ ಬ್ಯುಸಿಯಾಗಿದ್ದಾರೆ.
ಕಿರುತೆರೆ, ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಸಂಜನಾ ಬೆಂಗಳೂರಿನಲ್ಲಿ ಯೋಗ ಕ್ಲಾಸ್ಗಳನ್ನು ಕೂಡಾ ನಡೆಸುತ್ತಿದ್ದಾರೆ. ತಮ್ಮ ಫಿಟ್ನೆಸ್, ಗ್ಲಾಮರ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಂಜನಾ ಇದೀಗ ಕಾಲಿವುಡ್ಗೆ ಹಾರಿದ್ದಾರೆ.
ತಮಿಳಿನ 'ಪೋಡ ಮುಂಡಂ' ಚಿತ್ರದಲ್ಲಿ ಸಂಜನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ತಮಿಳು ಭಾಷೆಯಲ್ಲೇ 'ಐವರ್' ಎಂಬ ವೆಬ್ ಸೀರೀಸ್ನಲ್ಲಿ ಕೂಡಾ ಅವರು ನಟಿಸಿದ್ದಾರೆ. ಟಾಲಿವುಡ್ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ನಿರ್ಮಾಣದ ವೆಬ್ ಸೀರೀಸ್ ಮೂಲಕ ಸಂಜನಾ ತೆಲುಗು ಭಾಷೆಯ ವೆಬ್ ಸೀರೀಸ್ಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಈಗಾಗಲೇ ಆ ಸೀರೀಸ್ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ. ಇವರು ನಟಿಸಿರುವ ಕನ್ನಡದ 'ಮುತ್ತು ಕುಮಾರ', ಮಲಯಾಳಂನ 'ಜನ್ನತ್' ಬಿಡುಗಡೆಗೆ ರೆಡಿ ಇವೆ.