ETV Bharat / sitara

ಪಾರ್ಟಿ ಗುಂಗಲ್ಲಿ ಬಾಲಿವುಡ್​ ನಿರ್ಮಾಪಕಿ ಜೊತೆ ಗಲಾಟೆ ಮಾಡಿಕೊಂಡ್ರಾ ಗಲ್ರಾನಿ..?

author img

By

Published : Dec 27, 2019, 2:30 PM IST

Updated : Dec 28, 2019, 10:49 AM IST

ಬೆಂಗಳೂರಿನ ಪಬ್​ವೊಂದರಲ್ಲಿ ಒಂದೇ ಟೇಬಲ್​​ನಲ್ಲಿ ಪಾರ್ಟಿ ಮಾಡುತ್ತಿದ್ದ ನಟಿ ಸಂಜನಾ ಹಾಗೂ ಬಾಲಿವುಡ್​ ನಿರ್ಮಾಪಕಿ ವಂದನಾ ಜೈನ್​ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಾತುಕತೆ ಅತಿರೇಕಕ್ಕೆ ಹೋಗಿ ಸಂಜನಾ ಅವರು ವಿಸ್ಕಿ ಬಾಟಲಿಯಿಂದ ನಿರ್ಮಾಪಕಿ ಮೂಗಿಗೆ ಹೊಡೆದಿದ್ದಾರೆ ಎನ್ನಲಾಗಿದೆ.

Sanjjanaa Galrani
ಸಂಜನಾ ಗಲ್ರಾನಿ

ಬೆಂಗಳೂರು: ಕನ್ನಡದ ಗ್ಲಾಮರಸ್​ ನಟಿ ಸಂಜನಾ ಗಲ್ರಾನಿ ವಿವಾದದಲ್ಲಿ ಸಿಲುಕಿಕೊಂಡಿದ್ದು, ಬಾಲಿವುಡ್​ ನಿರ್ಮಾಪಕಿಯೊಬ್ಬರ ಮೂಗಿಗೆ ವಿಸ್ಕಿ ಬಾಟಲಿಯಿಂದ ಹೊಡೆದ ಆರೋಪ ಎದುರಿಸುತ್ತಿದ್ದಾರೆ.

ವಂದನಾ ಜೈನ್

ಬೆಂಗಳೂರಿನ ಪಬ್​ವೊಂದರಲ್ಲಿ ಒಂದೇ ಟೇಬಲ್​​ನಲ್ಲಿ ಪಾರ್ಟಿ ಮಾಡುತ್ತಿದ್ದ ನಟಿ ಸಂಜನಾ ಹಾಗೂ ಬಾಲಿವುಡ್​ ನಿರ್ಮಾಪಕಿ ವಂದನಾ ಜೈನ್​ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಾತುಕತೆ ಅತಿರೇಕಕ್ಕೆ ಹೋಗಿ ಸಂಜನಾ ಅವರು ವಿಸ್ಕಿ ಬಾಟಲಿಯಿಂದ ನಿರ್ಮಾಪಕಿ ಮೂಗಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಕೂಡಲೇ ವಂದನಾ ಅವರು ಕಬ್ಬನ್​ಪಾರ್ಕ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಸಂಜನಾ ಅವರು ರಾಜಿ ಮೂಲಕ ಪ್ರಕರಣ ಇತ್ಯರ್ಥ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

'ಗಲಾಟೆ ವಿಡಿಯೋ ಇದೆಯಂತೆ'

ಸಂಜನಾ ಗಲ್ರಾನಿ
ಇನ್ನು ಪಬ್​​ನಲ್ಲಿ ನಡೆದ ಗಲಾಟೆ ವಿಡಿಯೋ ಸಂಜನಾ ಅವರ ಬಳಿ ಇದ್ದು, ಅದನ್ನು ಯಾವುದೇ ಕಾರಣಕ್ಕೂ ವೈರಲ್​ ಮಾಡಲ್ಲ. ನನಗೆ ಪಬ್ಲಿಸಿಟಿ ಬೇಡ ಎಂದು ಸಂಜನಾ ಹೇಳಿದ್ದಾರೆ. ಆದರೆ ಗಲಭೆ ನಂತರ ಕೆಲವು ವಿಡಿಯೋಗಳು ವೈರಲ್ ಆಗಿವೆ.

'ದೂರು ಬಂದಿರುವುದು ನಿಜ'

ಡಿಸಿಪಿ ಚೇತನ್ ಸಿಂಗ್ ರಾಥೋರ್

ಈ ಕುರಿತು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್‌ ಮಾತನಾಡಿ, ಪಬ್​ವೊಂದರಲ್ಲಿ ಸಂಜನಾ ಗಲಾಟೆ ಮಾಡಿದ್ದಾರೆಂದು ದೂರು ಬಂದಿದೆ. ವಂದನಾ ಜೈನ್ ಎಂಬುವವರು ದೂರು ನೀಡಿದ್ದಾರೆ. ದೂರು ಆಧರಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್​​​​ಸಿಆರ್ ದಾಖಲಿಸಲಾಗಿದೆ. ದೂರುದಾರರು ಹೆಚ್ಚಿನ ತನಿಖೆಗೆ ನ್ಯಾಯಾಲಯದಲ್ಲಿ ಅನುಮತಿ ಪಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತೇವೆ ಎಂದಿದ್ದಾರೆ.

ಘಟನೆ ಬಗ್ಗೆ ಸಂಜನಾ ಗಲ್ರಾನಿ ಸ್ಪಷ್ಟನೆ:

ಘಟನೆ ಬಗ್ಗೆ ಸಂಜನಾ ಗಲ್ರಾನಿ ಸ್ಪಷ್ಟನೆ

ಈ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಸಂಜನಾ ಗಲ್ರಾನಿ, ನನ್ನ ಸ್ನೇಹಿತೆ ಹಾಗೂ ನನ್ನ ನಡುವೆ ಬಾರ್​​​ನಲ್ಲಿ ವಾದ ನಡೆದದ್ದು ನಿಜ. ಆದರೆ ಆಕೆ ಕೋಪದಲ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಾರ್​​ನಲ್ಲಿ ನಡೆದ ಘಟನೆಯನ್ನು ನನ್ನ ಫ್ರೆಂಡ್ ವಿಡಿಯೋ ಮಾಡಿದ್ದಾರೆ. ಆದರೆ ನಾನು ಅದನ್ನು ರಿವೀಲ್ ಮಾಡುವುದಿಲ್ಲ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಬಂದರೆ ಅದನ್ನು ರಿವೀಲ್ ಮಾಡುತ್ತೇನೆ. ನನಗೆ ಬಿಟ್ಟಿ ಪ್ರಚಾರ ಬೇಡ. ನಾನು ಮನೆಯಲ್ಲಿ ಆರಾಮವಾಗಿದ್ದೇನೆ. ನನ್ನ ಸ್ನೇಹಿತೆ ಕೂಡಾ ಅವರ ಮನೆಯಲ್ಲಿ ಅವರ ಪಾಡಿಗೆ ಇದ್ದಾರೆ. ಈ ಪ್ರಕರಣ ಇಲ್ಲಿಗೆ ಮುಗಿದಿದೆ. ಇದು ನಮ್ಮ ವೈಯಕ್ತಿಕ ವಿಚಾರ. ಇದಕ್ಕೆ ಬಣ್ಣ ಕಟ್ಟುವುದು ಬೇಡ, ನನ್ನ ಪಾಡಿಗೆ ಇರಲು ಬಿಡಿ' ಎಂದು ಸ್ಪಷ್ಟನೆ ನೀಡಿದ್ದಾರೆ.

Intro:ಸ್ಯಾಂಡಲ್ ವುಡ್ ಸ್ಟಾರ್ ನಟಿ ಹಾಗೂ ಬಾಲಿವುಡ್ ನ ನಿರ್ಮಾಪಕಿ
ನಡುವೆ ಡಿಶುಂ ಡಿಶುಂ

Audio must ಬಳಸಿ
ಸರ್
ಸ್ಯಾಂಡಲ್ ವುಡ್ ಸ್ಟಾರ್ ನಟಿ ಹಾಗೂ ಬಾಲಿವುಡ್ ನ ನಿರ್ಮಾಪಕಿ ನಡುವೆ ಜಗಳ ಆಗಿರುವ ಆರೋಪ ಸಿಲಿಕಾನ್ ಸಿಟಿಯಲ್ಲಿ ಕೇಳಿ ಬಂದಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ವೊಂದರಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟಿ ಸಂಜಾನ ಹಾಗೂ ಬಾಲಿವುಡ್ ನ ನಿರ್ಮಾಪಕಿ ವಂದನಾ ಜೈನ್ ಒಂದೇ ಟೇಬಲ್ ಅಲ್ಲಿ ಕುಳಿತು ಪಾರ್ಟಿ ಮಾಡುತ್ತಿದ್ದ ವೇಳೆ ಅದ್ಯಾವುದೋ ವಿಚಾರಕ್ಕೆ ಗಲಾಟೆ ಯಾಗಿ‌ ಮಾತು ಅತಿರೇಕಕ್ಕೆ ಹೋಗಿ ನಟಿ ಮಣಿ ನಿರ್ಮಾಪಕಿಗೆ ವಿಸ್ಕಿ ಗ್ಲಾಸ್ ನಲ್ಲಿ ಮೂಗಿಗೆ ಹೊಡೆಯಲು ಮುಂದಾಗಿದ್ದರೆಂಬ ಆರೋಪ ಕೇಳಿ ಬಂದಿದೆ.

ತಕ್ಷಣ ನಿರ್ಮಾಪಕಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ಘಟನೆ ಕುರಿತು ವಿವರಣೆ ನೀಡಿ ಮೊದಲು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದಿದ್ದಾಳೆ. ಯಾವಾಗ ನಿರ್ಮಾಪಕಿ ಇಷ್ಟೇಲ್ಲಾ ಮಾಡಿದಾಗ ಪೊಲೀಸ್ ಠಾಣೆಗೆ ಸಂಜನಾ ಹೋಗಿ ರಾಜಿ ಪಂಚಾಯ್ತಿ ಮಾಡಿಸಿಕೊಂಡಿದ್ದಾರೆಂಬ ವಿಚಾರ ತಿಳಿದು ಬಂದಿದೆ.

ಇನ್ನು ಈ ಕುರಿತು ಸಂಜನಾ ಗರ್ಲಾನಿ ಮಾತಾಡಿ ನಮ್ಮಿಬ್ಬರ ನಡುವೆ ಯಾವುದೇ ಗಲಾಟೆಯಾಗಿಲ್ಲ.. ಯಾರೂ ಬೇಕಾಂತ ಈ ರೀತಿ ಮಾಡ್ತಿದ್ದಾರೆ. ನನಗೆ ಯಾವುದೇ ಪಬ್ಲಿಸಿಟಿ ಬೇಡ. ನಿರ್ಮಾಪಕಿ ಹಾಗೂ ನನ್ನ ನಡುವೆ ವಾದ ಆಗಿದ್ದು ನಿಜಾ ಅದರ ವಿಡಿಯೋನು ಇದೆ. ಅದನ್ನ ನಾನು ವೃರಲ್ ಮಾಡಲ್ಲಾ ಎಂದಿದ್ದಾರೆ.

ಇನ್ನು ಈ ಕುರಿತು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಮಾತಾಡಿ 24 ರ ಸಂಜೆ ಪಬ್ ವೊಂದರಲ್ಲಿ ಸಂಜನಾ ಗಲಾಟೆ ಮಾಡಿದ್ದಾರೆಂದು ದೂರು ಬಂದಿದೆ .ವಂದನಾ ಜೈನ್ ಎಂಬುವವರು ದೂರು ನೀಡಿದ್ದಾರೆ .ದೂರು ಆಧಾರಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಿಸಲಾಗಿದೆ.
ದೂರುದಾರರು ಹೆಚ್ಚಿನ ತನಿಖೆಗೆ ನ್ಯಾಯಾಲಯದಲ್ಲಿ ಅನುಮತಿ ಪಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತೇವೆ ಎಂದಿದ್ದಾರೆ

Body:KN_BNG_06_SNJANA_7204498Conclusion:KN_BNG_06_SNJANA_7204498
Last Updated : Dec 28, 2019, 10:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.