ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ಸಂಜನಾ ಗಲ್ರಾನಿ ನ್ಯಾಯಾಂಗ ಬಂಧನ ಇಂದಿಗೆ ಮುಗಿಯಲಿದೆ. ವಿಶೇಷ ಎನ್ಡಿಪಿಎಸ್ ಕೋರ್ಟ್ ನ್ಯಾಯಾಧೀಶರ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಹಾಜರುಪಡಿಸಲಾಗುವುದು.
ಸಂಜನಾ ಪರ ವಕೀಲರು ಜಾಮಿನು ಅರ್ಜಿ ಸಲ್ಲಿಸಿದ್ದು ಇಂದು ಈ ಅರ್ಜಿ ವಿಚಾರಣೆ ನಡೆಯಲಿದೆ. ಆದರೆ ಸಂಜನಾ ನ್ಯಾಯಾಂಗ ಬಂಧನ ಮತ್ತೆ ಮುಂದುವರೆಯಬಹುದು ಎನ್ನಲಾಗುತ್ತಿದೆ. ಸಿಸಿಬಿ ಪೊಲೀಸರು ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ತಯಾರಿಯಲ್ಲಿದ್ದಾರೆ. ಆದ್ದರಿಂದ ಸಂಜನಾ ಟೆನ್ಷನ್ನಲ್ಲಿದ್ದಾರೆ. ಮತ್ತೊಂದೆಡೆ ರಾಗಿಣಿ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ರಾಗಿಣಿ ಅರ್ಜಿ ವಿಚಾರಣೆ ನಾಳೆ ನಡೆಯಲಿದ್ದು ಸದ್ಯಕ್ಕೆ ಜೈಲು ಹಕ್ಕಿಗಳಿಬ್ಬರೂ ಒಂದೇ ಕೊಠಡಿಯಲ್ಲಿದ್ದು ಕಷ್ಟ-ಸುಖ ಮಾತನಾಡಿಕೊಂಡು ಕಾಲ ಕಳೆಯುತ್ತಿದ್ದಾರೆ.