ETV Bharat / sitara

ಮತ್ತೆ ಕಿರುತೆರೆಯಲ್ಲಿ‌ ಮಿಂಚಲು ಬಂದ್ರು ಬಿಗ್‌ಬಾಸ್ ಮಾಜಿ ಸ್ಪರ್ಧಿ ಸಂಜನಾ - ಕುಲವಧು ಧಾರಾವಾಹಿಯಲ್ಲಿ ನಟಿಸಿದ್ದ ಸಂಜನಾ ಚಿದಾನಂದ್​​​

ಬಿಗ್​ ಬಾಸ್​​ ಮೂಲಕ ಕಿರುತೆರೆ ಪ್ರಿಯರನ್ನು ರಂಜಿಸಿದ್ದ ಸಂಜನಾ ಚಿದಾನಂದ್​​​ 'ಕುಲವಧು' ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ಹಲವು ದಿನಗಳ ನಂತರ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸುವ ಮೂಲಕ ಸೆಕೆಂಡ್​​ ಇನ್ನಿಂಗ್ಸ್​​ ಶುರು ಮಾಡಿದ್ದಾರೆ.

sanjana come back to serial
ಸಂಜನಾ ಚಿದಾನಂದ್
author img

By

Published : Oct 15, 2020, 3:48 PM IST

'ಕುಲವಧು' ಧಾರಾವಾಹಿಯ ವಚನಾಳಾಗಿ ಕಿರುತೆರೆಯಲ್ಲಿ ಅಭಿನಯಿಸಿದ್ದ ಸಂಜನಾ ಚಿದಾನಂದ್ ಜನಪ್ರಿಯರಾಗಿದ್ದು ಬಿಗ್‌ಬಾಸ್ ಮೂಲಕ. ಬಿಗ್‌ಬಾಸ್ ಸ್ಪರ್ಧಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದ ಇವರು ಬಳಿಕ 'ಸಂಜು ಮತ್ತು ನಾನು' ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ಲಾಂಗ್ ಗ್ಯಾಪ್ ನಂತರ ಮತ್ತೆ ಕಿರುತೆರೆಗೆ ಕಾಲಿಡುತ್ತಿದ್ದಾರೆ.

sanjana come back to serial
ಸಂಜನಾ ಚಿದಾನಂದ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಸಂಜನಾ ಅಭಿನಯಿಸುತ್ತಿದ್ದಾರೆ. ಶೃತಿ ನಾಯ್ಡು ನಿರ್ದೇಶನದ ಬ್ರಹ್ಮಗಂಟು ಧಾರಾವಾಹಿಯಲ್ಲಿ ಭರತ್ ಬೋಪಣ್ಣ ನಾಯಕರಾಗಿ ಹಾಗೂ ಗೀತಾ ಭಾರತಿ ಭಟ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೀಗ ಅವರಿಗೆ ಸಂಜನಾ ಜೊತೆಯಾಗಲಿದ್ದಾರೆ.

sanjana come back to serial
ಸಂಜನಾ ಚಿದಾನಂದ್

ಈ ಧಾರಾವಾಹಿಯಲ್ಲಿ ಸಂಜನಾ, ಸೋನಾಲಿ ಎಂಬ ನಟಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಯಲ್ಲಿ ಲಕ್ಕಿ ಹಾಗೂ ಸೋನಾಲಿ ಇಬ್ಬರಿಗೂ ಮೋಸ್ಟ್ ಡಿಸೈರೇಬಲ್ ಪ್ರಶಸ್ತಿ ಸಿಗಲಿದೆ. ಅವರಿಬ್ಬರೂ ಒಟ್ಟಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಧಾರಾವಾಹಿಯಲ್ಲಿ ಸಂಜನಾ ಕೇವಲ ಅತಿಥಿಯಾಗಿ ಮಾತ್ರ ಕಾಣಿಸಿಕೊಂಡಿದ್ದಾರಾ ಅಥವಾ ಮುಂದುವರಿಯಲಿದ್ದಾರಾ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಾಗಿದೆ.

sanjana come back to serial
ಸಂಜನಾ ಚಿದಾನಂದ್

ಕುಲವಧು ಧಾರಾವಾಹಿಯ ನಂತರ ಲಹರಿ, ಜೀವನಚೈತ್ರ ಧಾರಾವಾಹಿಗಳಲ್ಲಿ ನಟಿಸಿದರು. ಇದರ ಜೊತೆಗೆ ಉಡುಂಬ ಹಾಗೂ ಮೋಬತಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸಂಜು ಮತ್ತು ನಾನು ಧಾರಾವಾಹಿ ನಂತರ ನಟನೆಯಿಂದ ಕೊಂಚ ದೂರವಿದ್ದ ಸಂಜನಾ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದರು. ಇದೀಗ ಬ್ರಹ್ಮಗಂಟು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.