ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿ ಬಂಧಿಯಾಗಿರುವ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರೂ ಜೈಲಿನಲ್ಲಿ ಭಯದಿಂದಲೇ ಕಾಳ ಕಳೆಯುತ್ತಿದ್ದಾರೆ. ಒಂದೇ ಸೆಲ್ನಲ್ಲಿ ಇರುವ ಇಬ್ಬರೂ ನಟಿಯರು ಸಿಟಿ ಸಿವಿಲ್ ಕೊರ್ಟ್ ನ್ಯಾಯಾಲಯದಲ್ಲಿ ತಮ್ಮ ಬೇಲ್ ಅರ್ಜಿ ವಜಾ ಆದ ನಂತರವಂತೂ ಮತ್ತಷ್ಟು ಟೆನ್ಶನ್ನಲ್ಲಿದ್ದಾರೆ.
ಮನೆಯಲ್ಲಿ ರುಚಿಯಾದ ಊಟ ತಿಂದುಕೊಂಡು, ಮೆತ್ತನೆಯ ಹಾಸಿಗೆಯಲ್ಲಿ ಮಲಗುವ ಮೂಲಕ ಹೈಫೈ ಜೀವನ ನಡೆಸುತ್ತಿದ್ದ ಇಬ್ಬರೂ ಜೈಲು ಸೇರಿ ತಿಂಗಳಾಗುತ್ತಾ ಬಂದಿದೆ. ಜೈಲಿನಲ್ಲಿ ತಮಗೆ ಬೇಕಾದ ಯಾವುದೇ ಸೌಲಭ್ಯ ಇಲ್ಲದೆ ಚಡಪಡಿಸುತ್ತಿದ್ದಾರೆ. ಇದರ ನಡುವೆ ಇಂದು ಸಂಜನಾ ಹಾಗೂ ರಾಗಿಣಿ ಇಬ್ಬರೂ ಮತ್ತೆ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಇವರು ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಹೈಕೋರ್ಟ್ನಲ್ಲಾದರೂ ನಮಗೆ ಜಾಮೀನು ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ಈ ನಡುವೆ ಇವರ ಭವಿಷ್ಯ ಹೈಕೋರ್ಟ್ನಲ್ಲಿ ಏನಾಗಬಹುದು ಎಂಬ ಭಯ ಕುಟುಂಬದವರನ್ನು ಕಾಡುತ್ತಿದೆ. ಮತ್ತೊಂದೆಡೆ ನಟಿಯರ ಹಣದ ವ್ಯವಹಾರದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಒಂದು ವೇಳೆ ಇವರಿಗೆ ಹೈಕೋರ್ಟ್ನಲ್ಲಿ ಜಾಮೀನು ದೊರೆತರೂ ಇಡಿ ಸಂಕಷ್ಟ ತಪ್ಪಿದ್ದಲ್ಲ.