ದುನಿಯಾ ವಿಜಯ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ 'ಸಲಗ' ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಸಿನಿಮಾ ಟೈಟಲ್ ಹೆಸರಿನಲ್ಲಿ ಕೋಲಾರ ಅಭಿಮಾನಿಗಳು ಏರ್ಪಡಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ 'ಸಲಗ' ತಂಡ ವಿಜಯ ಸಾಧಿಸಿದ್ದು ಈ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ಸುದೀಪ್ ಜೊತೆ ನಟಿಸುತ್ತಿರುವುದು ಬಹಳ ಖುಷಿ ನೀಡಿದೆ...ಸಿದ್ದು ಮೂಲಿಮನಿ
ಚಿತ್ರದಲ್ಲಿ ದುನಿಯಾ ವಿಜಯ್ಗೆ ನಟಿ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಸಂಜನಾ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಂಜನಾ ಐ ಲವ್ ಯು... ಎಂಬ ಹಾಡಿಗೆ ಈ ಚೆಲುವೆ 'ಸಲಗ' ತಂಡದೊಂದಿಗೆ ಬೊಂಬಾಟ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಲಾಕ್ಡೌನ್ ಮುಗಿದು ಚಿತ್ರರಂಗ ತೆರೆಯುತ್ತಿದ್ದಂತೆ 'ಸಲಗ' ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಆ ಸಮಯದಲ್ಲಿ ಚಿತ್ರಮಂದಿರದಲ್ಲಿ ಶೇ. 50 ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ಇದ್ದಿದ್ದರಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಏಪ್ರಿಲ್ಗೆ ಮುಂದೂಡಲಾಯ್ತು. ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ಸಂಜನಾ ಆನಂದ್ ಜೊತೆಗೆ ಡಾಲಿ ಧನಂಜಯ್, ಕಾಕ್ರೋಜ್ ಸುಧೀರ್ ಸೇರಿದಂತೆ ಇನ್ನಿತರ ಕಲಾವಿದರು ನಟಿಸಿದ್ದಾರೆ. 'ಟಗರು' ಸಿನಿಮಾ ನಿರ್ಮಾಪಕ ಕೆ.ಪಿ. ಶ್ರೀಕಾಂತ್ 'ಸಲಗ' ಚಿತ್ರವನ್ನು ನಿರ್ಮಿಸಿದ್ದಾರೆ.