ETV Bharat / sitara

'ಈ ಸಲ ಕಪ್​ ನಮ್ದೆ' ಎನ್ನುತ್ತಿದ್ದಾರೆ ಸ್ಯಾಂಡಲ್​ವುಡ್ ಕಲಾವಿದರು - Indian premier league 2020

ಸೆಪ್ಟೆಂಬರ್ 19 ರಿಂದ ಐಪಿಎಲ್​ ಪಂದ್ಯಾವಳಿಗಳು ಆರಂಭವಾಗಿವೆ. ಆರ್​ಸಿಬಿ ತಂಡಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಯುವ ಪ್ರತಿಭೆಗಳು ಸೇರಿ ಒಂದು ವಿಡಿಯೋ ಆಲ್ಬಂ ತಯಾರಿಸಿದ್ದು ಇದರಲ್ಲಿ ಸ್ಯಾಂಡಲ್​​ವುಡ್ ಕಲಾವಿದರು ಕಾಣಿಸಿಕೊಂಡಿದ್ದಾರೆ.

Sandalwood RCB new 1
'ಈ ಸಲ ಕಪ್​ ನಮ್ದೆ'
author img

By

Published : Sep 19, 2020, 4:25 PM IST

Updated : Sep 19, 2020, 4:55 PM IST

'ಈ ಸಲ ಕಪ್​ ನಮ್ದೆ' ಎಂಬ ಪದ ಎಷ್ಟು ಫೇಮಸ್ ಎಂದರೆ ತೆಲುಗು ಕಾರ್ಯಕ್ರಮಗಳಲ್ಲೂ ಈ ಪದವನ್ನು ಬಳಸಲಾಗಿತ್ತು. ಕಳೆದ ಬಾರಿ ಐಪಿಎಲ್ ವೇಳೆ ಬಳಕೆಯಲ್ಲಿದ್ದ ಈ ಪದ ಇದೀಗ ಮತ್ತೆ ಚಾಲ್ತಿಯಲ್ಲಿದೆ. ಈ ಬಾರಿ ಸ್ಯಾಂಡಲ್​ವುಡ್ ಕಲಾವಿದರು 'ಈ ಸಲ ಕಪ್ ನಮ್ದೆ' ಎನ್ನುತ್ತಿದ್ದಾರೆ.

  • " class="align-text-top noRightClick twitterSection" data="">

ಇಂದಿನಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಿದೆ. ಯುವ ಪ್ರತಿಭೆಗಳು ಸೇರಿಕೊಂಡು ಆರ್​ಸಿಬಿ ತಂಡಕ್ಕೆ ವಿಡಿಯೋ ಹಾಡಿನ ಮೂಲಕ ಶುಭ ಕೋರಿದ್ದಾರೆ. 'ಅಣು ಅಣುವಲಿ ಆರ್​ಸಿಬಿ..ಕಣ ಕಣದಲ್ಲಿ ಆರ್​ಸಿಬಿ.. ಮನ ಮನದಲೂ ಆರ್​ಸಿಬಿ.. ಎಂಬ ಸಾಲುಗಳಿಂದ ಆರಂಭವಾಗುವ ವಿಡಿಯೋ ಹಾಡಿನಲ್ಲಿ ವಿಜಯ ರಾಘವೇಂದ್ರ, ಎಂ.ಜಿ. ಶ್ರೀನಿವಾಸ್, ಪ್ರಣಿತಾ ಸುಭಾಷ್, ಅದಿತಿ ಪ್ರಭುದೇವ, ಅಮೃತ ಅಯ್ಯಂಗಾರ್, ಸಂಜನಾ ಆನಂದ್, ಕೆಂಡಸಂಪಿಗೆ ಖ್ಯಾತಿಯ ವಿಕ್ಕಿ ಹಾಗೂ ಇನ್ನಿತರರು ನಟಿಸಿದ್ದಾರೆ.

Sandalwood RCB new 1
ಪ್ರಣಿತಾ ಸುಭಾಷ್

ಈ ವಿಡಿಯೋ ಹಾಡಿಗೆ ನಿರ್ದೇಶನ-ನೃತ್ಯ ಮಾಧುರಿ ಪರಶುರಾಮ್, ಸಂಗೀತ-ಸಾಹಿತ್ಯ-ಗಾಯನ ಅನಿರುದ್ಧ್ ಶಾಸ್ತ್ರಿ, ಛಾಯಾಗ್ರಹಣ ಉದಯ್‌ ಲೀಲಾ, ಸಂಕಲನ ಸಾಗರ್‌ ಮಹಾದೇವ್ ಕೆಲಸ ಮಾಡಿದ್ದಾರೆ. ಮೈತ್ರಿ ಅಯ್ಯರ್, ಮಾದೇಶ್‌ ಭಾರದ್ವಾಜ್ ಕೂಡಾ ಈ ಹಾಡಿಗೆ ಧ್ವನಿಯಾಗಿದ್ದಾರೆ.

Sandalwood RCB new 1
'ಕೆಂಡಸಂಪಿಗೆ' ಖ್ಯಾತಿಯ ವಿಕ್ಕಿ

ವಿಧಾನಸೌಧ ಸೇರಿದಂತೆ ಬೆಂಗಳೂರು ಸುತ್ತಮುತ್ತ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹೈದಾ ಸ್ಟುಡಿಯೋ ಮೂಲಕ ನಿರ್ಮಾಣಗೊಂಡಿರುವ ಈ ಹಾಡಿಗೆ 'ಪ್ರಾರಂಭ', 'ತ್ರಿಕೋನ', 'ಸಲಗ', 'ಫ್ಯಾಮಿಲಿಪ್ಯಾಕ್' ಚಿತ್ರಗಳು ಸೇರಿದಂತೆ ಇತರ ಚಿತ್ರತಂಡಗಳು ಪ್ರಾಯೋಜಕತ್ವದ ಜವಾಬ್ದಾರಿ ವಹಿಸಿಕೊಂಡಿದೆ.

Last Updated : Sep 19, 2020, 4:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.