ETV Bharat / sitara

ಸರಳವಾಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಸ್ಯಾಂಡಲ್​ವುಡ್ ತಾರೆಯರು - Varamahalakshmi festival in Nikhil home

ಸ್ಯಾಂಡಲ್​ವುಡ್​ ತಾರೆಗಳಾದ ಪ್ರಿಯಾಂಕ ಉಪೇಂದ್ರ, ನಿಖಿಲ್ ಕುಮಾರ ಸ್ವಾಮಿ, ಯಶ್​​ ಹಾಗೂ ರಾಧಿಕಾ ಪಂಡಿತ್ ಈ ಬಾರಿ ಬಹಳ ಸರಳವಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದು ರಾಜ್ಯದ ಜನತೆಗೆ ಹಬ್ಬದ ಶುಭ ಕೋರಿದ್ದಾರೆ.

Varamahalakshmi festival
ಪ್ರಿಯಾಂಕ
author img

By

Published : Jul 31, 2020, 4:02 PM IST

ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ವರಮಹಾಲಕ್ಷ್ಮಿ ವ್ರತ. ಹಿಂದೂ ಸಂಪ್ರದಾಯದಲ್ಲಿ ಇಂದು ಪ್ರತಿಯೊಬ್ಬರೂ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಕೊರೊನಾ ಭೀತಿ ಇರುವುದರಿಂದ ಈ ಬಾರಿ ಬಹಳಷ್ಟು ಕಡೆ ಹಬ್ಬವನ್ನು ಬಹಳ ಸರಳವಾಗಿ ಆಚರಿಸಲಾಗಿದೆ.

Varamahalakshmi festival
ಪ್ರಿಯಾಂಕ ಉಪೇಂದ್ರ

ಸ್ಯಾಂಡಲ್​​​​ವುಡ್​​​ ನಟ-ನಟಿಯರು ಕೂಡಾ ಎಂದಿನಂತೆ ಈ ಬಾರಿ ಹಬ್ಬ ಆಚರಿಸಿದ್ದಾರೆ. ಪ್ರತಿ ವರ್ಷ ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಬಹಳ ಅದ್ಧೂರಿಯಾಗಿ ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಈ ಕೊರೊನಾದಿಂದಾಗಿ ಉಪೇಂದ್ರ ಮನೆಯಲ್ಲಿ ಲಕ್ಷ್ಮಿಪೂಜೆಯನ್ನು ಬಹಳ ಸರಳವಾಗಿ ಆಚರಿಸಲಾಗಿದೆ.

Varamahalakshmi festival
ಉಪೇಂದ್ರ ಮನೆಯ ವರಮಹಾಲಕ್ಷ್ಮಿ

ಈ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಉಪೇಂದ್ರ, ನಮ್ಮ ಏರಿಯಾದಲ್ಲಿ ಒಬ್ಬರಿಗೆ ಪಾಸಿಟಿವ್ ಬಂದ ಹಿನ್ನೆಲೆ ನಾವು ಇರುವ ರಸ್ತೆಯನ್ನು ಸೀಲ್​​ಡೌನ್​​​ ಮಾಡಲಾಗಿದೆ. ಪ್ರತಿ ವರ್ಷ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವ ಸಂಪ್ರದಾಯ ಇತ್ತು. ಆದರೆ ಈ ವರ್ಷ ನಮ್ಮ ಮನೆಯವರಷ್ಟೇ ಸೇರಿ ವರಮಹಾಲಕ್ಷ್ಮಿ ಪೂಜೆಯನ್ನು ಮಾಡಲಾಗಿದೆ. ಆದಷ್ಟು ಬೇಗ ಈ ಪ್ರಪಂಚ ಕೊರೊನಾ ಮುಕ್ತವಾಗಲಿ ಎಂದು ಪ್ರಿಯಾಂಕ, ದೇವರಲ್ಲಿ ಪ್ರಾರ್ಥಿಸಿದ್ದಾರೆ.

Varamahalakshmi festival
ಸರಳವಾಗಿ ಹಬ್ಬ ಆಚರಿಸಿದ ಪ್ರಿಯಾಂಕ

ಇನ್ನು ಸ್ಯಾಂಡಲ್​ವುಡ್ ಜಾಗ್ವಾರ್​​​​ಗೆ ಮದುವೆಯಾದ ನಂತರ ಇದು ಮೊದಲ ವರಮಹಾಲಕ್ಷ್ಮಿ ಹಬ್ಬ. ನಿಖಿಲ್ ಹಾಗೂ ರೇವತಿ ಸೇರಿ ಈ ಬಾರಿ ಹಬ್ಬವನ್ನು ಆಚರಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಕೂಡಾ ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಈ ಸಂಭ್ರಮವನ್ನು ನಿಖಿಲ್ ಕುಮಾರಸ್ವಾಮಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Varamahalakshmi festival
ನಿಖಿಲ್ ಮನೆಯಲ್ಲಿ ಹಬ್ಬದ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮನೆಯಲ್ಲಿ ಕೂಡಾ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗಿದೆ. ಈ ವರ್ಷ ಕೂಡಾ ರಾಕಿಂಗ್ ದಂಪತಿಗೆ ವಿಶೇಷ. ಕಳೆದ ಬಾರಿ ಮಗಳು ವರಮಹಾಲಕ್ಷ್ಮಿ ಹಬ್ಬಕ್ಕೆ ಜೊತೆಯಾಗಿದ್ದಳು. ಈ ಬಾರಿ ಮಗ ಜೊತೆಯಾಗಿದ್ದಾನೆ. ಈ ಬಾರಿ ಇಬ್ಬರೂ ಮಕ್ಕಳೊಂದಿಗೆ ಈ ದಂಪತಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿದ್ದಾರೆ.

Varamahalakshmi festival
ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಯಶ್, ರಾಧಿಕಾ

ಒಟ್ಟಿನಲ್ಲಿ ಈ ಬಾರಿ ಸ್ಯಾಂಡಲ್​​ವುಡ್ ತಾರೆಯರ ಮನೆಯಲ್ಲಿ ಹಬ್ಬ ಸರಳವಾದರೂ ಸಂಭ್ರಮ ಮಾತ್ರ ಹಾಗೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.