ಎಲ್ಲರೂ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದ್ದಾರೆ. ಈಗಾಗಲೇ ಯೋಗರಾಜ ಭಟ್ ಸೇರಿದಂತೆ ಸ್ಯಾಂಡಲ್ವುಡ್ನಲ್ಲಿ ಕೆಲವು ನಟರು, ಸಂಗೀತ ನಿರ್ದೇಶಕರು, ಗಾಯಕರು ಸೇರಿದಂತೆ ಬಹಳಷ್ಟು ಜನರು ಕೊರೊನಾ ವೈರಸ್ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಇದೀಗ ಇತರ ಗಾಯಕರು ಒಟ್ಟಿಗೆ ಸೇರಿ ಕೊರೊನಾ ಜಾಗೃತಿ ಬಗ್ಗೆ ಹೊಸ ಹಾಡೊಂದನ್ನು ರೆಡಿ ಮಾಡುತ್ತಿದ್ದಾರೆ.
- " class="align-text-top noRightClick twitterSection" data="">
ರಾಜ್ಯ ಪ್ರಶಸ್ತಿ ವಿಜೇತ ಗಾಯಕಿ ಚೈತ್ರಾ, ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್, ನಟ ಹಾಗೂ ಗಾಯಕ ಸುನಿಲ್ ರಾವ್, ಸುಪ್ರಿಯಾ ಲೋಹಿತ್, ಸಂಚಿತ್ ಹೆಗ್ಡೆ, ಮಗಳು ಜಾನಕಿ ಶೀರ್ಷಿಕೆ ಗೀತೆ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಈ ಹಾಡಿಗೆ ಜೊತೆಯಾಗಿದ್ದಾರೆ. ಸೂಜಿತ್ ವೆಂಕಟರಾಮಯ್ಯ ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಮಾಯಾ ಚಂದ್ರ ಹಾಗೂ ಧೀರೇಂದ್ರ ದಾಸ್ ಮೋಡ್ ಎಂಬುವವರು ಈ ಗಾಯಕರನ್ನು ಸಂಪರ್ಕಿಸಿ ಅವರಿರುವ ಸ್ಥಳಗಳಲ್ಲೇ ಹಾಡಿಸಿ ಎಡಿಟ್ ಮಾಡಿ ಈ ಹಾಡಿಗೆ ಒಂದು ಸುಂದರ ರೂಪ ನೀಡಿದ್ದಾರೆ. ವೈದ್ಯರಿಗೆ, ಪೊಲೀಸ್ ಅಧಿಕಾರಿಗಳಿಗೆ, ಬಿಬಿಎಂಪಿ ತಂಡಕ್ಕೆ ಈ ಹಾಡನ್ನು ಅರ್ಪಿಸಲಾಗಿದೆ.
'ಕಣ್ಣಿಗೆ ಕಾಣುವ ದೇವರು ನಿಮಗೊಂದು ಸಲಾಂ' ಎಂಬ ಈ ಹಾಡನ್ನು ಆಯಾ ಗಾಯಕರು ತಮ್ಮ ಫೇಸ್ಬುಕ್ನಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಯೂಟ್ಯೂಬ್ನಲ್ಲಿ ಕೂಡಾ ಹಂಚಿಕೊಂಡಿದ್ದಾರೆ. ಈ ಹಾಡಿಗೆ ಸಂಗೀತ ಪ್ರೇಮಿಗಳಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಈ ಹಾಡನ್ನು ಮಾಡಲು ಸಹಕರಿಸಿದ ಹಿರಿಯ ಪೊಲೀಸ್ ಅಧಿಕಾರಿ ಡಾ ಬಿ.ಆರ್. ರವಿಕಾಂತೇ ಗೌಡ , ಬೆಂಗಳೂರು ಟ್ರಾಫಿಕ್ ಪೊಲೀಸರು, ಫೋರ್ಟಿಸ್ ಆಸ್ಪತ್ರೆ ಹಾಗೂ ರೆಡ್ ಕ್ರಾಸ್ ಕರ್ನಾಟಕ ತಂಡಕ್ಕೆ ವಂದನೆ ಸಲ್ಲಿಸಿದ್ದಾರೆ.