ETV Bharat / sitara

ಸ್ಯಾಂಡಲ್​​​​ವುಡ್​ ಮೇಷ್ಟ್ರು ನಾಗತಿಹಳ್ಳಿ ಶಿಷ್ಯರ 'ಉದ್ಯೋಗಂ ಪುರುಷ ಲಕ್ಷಣಂ' - Sujitkumar direction new movie

ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಕಲಿತ ಪ್ರತಿಭೆಗಳೆಲ್ಲಾ ಸೇರಿ 'ಉದ್ಯೋಗಂ ಪುರುಷ ಲಕ್ಷಣಂ' ಎಂಬ ಸಿನಿಮಾ ಮಾಡಿ ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ. ಲವ್, ಕಾಮಿಡಿ ಜೊತೆಗೆ ಕೆಲಸ ಇಲ್ಲದ ನಾಲ್ವರು ಹುಡುಗರ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಚಿತ್ರವನ್ನು ರಾಕೇಶ್ ಚೆಲುವರಾಜು ನಿರ್ಮಿಸಿದ್ದು ಸುಜಿತ್​ ಕುಮಾರ್ ನಿರ್ದೇಶಿಸಿದ್ದಾರೆ.

Udyogam purusha lakshanam movie
'ಉದ್ಯೋಗಂ ಪುರುಷ ಲಕ್ಷಣಂ'
author img

By

Published : Dec 1, 2020, 6:53 AM IST

Updated : Dec 1, 2020, 7:47 AM IST

ಪುರುಷರಿಗೆ ಯಾವುದಾದರೂ ಒಂದು ಕೆಲಸ ಇರಲೇಬೇಕು. ಆಗಲೇ ಆತನ ಜೀವನಕ್ಕೊಂದು ಬೆಲೆ ಬರುತ್ತದೆ. ಈ ಕಾರಣದಿಂದಲೇ 'ಉದ್ಯೋಗಂ ಪುರುಷ ಲಕ್ಷಣಂ' ಎಂಬ ಮಾತನ್ನು ಹೇಳುವುದು. ಈಗ ಈ ನಾಣ್ಣುಡಿಯನ್ನೇ ಹೊಸಬರ ತಂಡವೊಂದು ಸಿನಿಮಾವಾಗಿ ಮಾಡಲು ಹೊರಟಿದೆ. ಈ ಚಿತ್ರಕ್ಕೆ ಸುಜಿತ್‍ಕುಮಾರ್ ಕೆ.ಎಂ. ಕುಡ್ಲೂರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ.

ರಾಕೇಶ್ ಚೆಲುವರಾಜು ನಿರ್ಮಿಸಿರುವ ಈ ಚಿತ್ರದಲ್ಲಿ ರತ್ನಮಂಜರಿ ಖ್ಯಾತಿಯ ರಾಜ್‍ಚರಣ್, ರಿಧಿರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡುವವರೆಲ್ಲಾ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯಲ್ಲಿ ಕಲಿತವರು ಎನ್ನುವುದು ವಿಶೇಷ. ಯಾವುದೇ ಕೆಲಸವಿದಲ್ಲದ ನಾಲ್ವರು ಯವಕರ ಕಥೆಯನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಾಮಿಡಿ, ಸಸ್ಪೆನ್ಸ್ ಜೊತೆಗೆ ತ್ರಿಕೋನ ಪ್ರೇಮಕಥೆಯೂ ಈ ಚಿತ್ರದಲ್ಲಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಸಿನಿಮಾ ವಿಶೇಷತೆಗಳ ಕುರಿತಂತೆ ಮಾಹಿತಿ ಹಂಚಿಕೊಂಡಿತು. ನಟ ರಾಜ್‍ಚರಣ್ ಮಾತನಾಡಿ ಕಲಾವಿದನಾಗುವ ಕನಸಿಟ್ಟುಕೊಂಡು ಟೆಂಟ್ ಶಾಲೆಗೆ ಸೇರಿದ್ದೆ. ಕಿರುಚಿತ್ರವೊಂದರಲ್ಲಿ ನಟಿಸುವಾಗಲೇ ಸುಜಿತ್ ಈ ಚಿತ್ರದ ಬಗ್ಗೆ ಹೇಳಿದರು. ಇದೇ ಸಮಯದಲ್ಲಿ ರತ್ನಮಂಜರಿಯಲ್ಲೂ ಅವಕಾಶ ಸಿಕ್ಕಿತು. ಒಬ್ಬ ಲವರ್​ ಬಾಯ್​​​​​​​​​​, ಫ್ಲರ್ಟಿ ಹುಡುಗನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರೀತಿ ಎನ್ನುವುದು ಎಲ್ಲರಿಗೂ ಒಂದೇ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಇದೊಂದು ಕಾಮಿಡಿ ಲವ್‍ಸ್ಟೋರಿ ಎಂದು ಹೇಳಿದರು. ನಾಯಕಿ ರಿಧಿರಾವ್ ಮಾತನಾಡಿ, ಚಿತ್ರದಲ್ಲಿ ನನ್ನದು ಪೃಥ್ವಿ ಎನ್ನುವ ಪಾತ್ರ. ಈ ಭೂಮಿಯ ಹಾಗೆ ನಾನು ಇಬ್ಬರೂ ನಾಯಕರ ಭಾರವನ್ನು ಹೊತ್ತುಕೊಂಡಿರುತ್ತೇನೆ. ಒಬ್ಬ ಹುಡುಗನ ಮೇಲೆ ಲವ್ ಆಗುತ್ತದೆ. ಕೊನೆಗೆ ನಾನು ಯಾರಿಗೆ ಸಿಗುತ್ತೇನೆ ಎನ್ನುವುದೇ ಸಸ್ಪೆನ್ಸ್ ಎಂದು ಹೇಳಿಕೊಂಡರು.ಚಿತ್ರದಲ್ಲಿ ಸಾವನ್ ಸಿಂಗ್ ಎಂಬ ಮತ್ತೊಬ್ಬ ಪ್ರತಿಭೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರಕ್ಕೆ ಸತ್ಯ ರಾಧಾಕೃಷ್ಣ ಹಾಗೂ ಜತಿನ್ ದರ್ಶನ್ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಲಾಗುವುದು. ಚಿತ್ರದ ಛಾಯಾಗ್ರಾಹಕರಾಗಿ ಸಂಕೇತ್ ಎಂ.ವೈ.ಎಸ್. ಹಾಗೂ ಮಧುಸೂದನ್ ಮ್ಯಾಡಿ ಕೆಲಸ ಮಾಡಿದ್ದಾರೆ. ಈಗಾಗಲೇ ಸೆನ್ಸಾರ್ ಸರ್ಟಿಫಿಕೇಟ್ ಪಡೆದಿರುವ ಸಿನಿಮಾ ಡಿಸೆಂಬರ್​​​​ನಲ್ಲಿ ಬಿಡುಗಡೆಯಾಗಲಿದೆ.

(ನಾಳೆ 'ಉದ್ಯೋಗಂ ಪುರುಷ ಲಕ್ಷಣಂ' ಹಾಡು ಬಿಡುಗಡೆ)

Last Updated : Dec 1, 2020, 7:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.