ಸೆಲಬ್ರಿಟಿಗಳ ಕುಟುಂಬದಿಂದ ಮಕ್ಕಳು ಮೊಮ್ಮಕ್ಕಳು ಚಿತ್ರರಂಗಕ್ಕೆ ಬರುವುದು ಸಾಮಾನ್ಯ. ಕನ್ನಡದ ಇಬ್ಬರು ಖ್ಯಾತ ನಿರ್ಮಾಪಕರ ಮೊಮ್ಮಗಳು ಈಗ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಲು ಹೊರಟಿದ್ದಾಳೆ.
- " class="align-text-top noRightClick twitterSection" data="">
ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಹಾಗೂ ಮುನಿರತ್ನ ನಾಯ್ಡು ಮೊಮ್ಮಗಳು ಸರಯೂ ಈಗ ಪುಟ್ಟ ಸಂಗೀತಗಾರ್ತಿ. ಈ ಇಬ್ಬರೂ ನಿರ್ಮಾಪಕರು ಸಂಬಂಧಿಗಳು. 2011 ರಲ್ಲಿ ರಾಕ್ಲೈನ್ ಪುತ್ರ ಯತೀಶ್ ಅವರಿಗೆ ಮುನಿರತ್ನ ತಮ್ಮ ಮಗಳು ಸಿಂಧೂರಿಯನ್ನು ಕೊಟ್ಟು ಮದುವೆ ಮಾಡಿದರು. ಈ ದಂಪತಿಗೆ ಇಬ್ಬರು ಅವಳಿ ಮಕ್ಕಳು. ಗಂಡು ಮಗುವಿಗೆ ಶಿವತೇಜ್ ಹಾಗೂ ಹೆಣ್ಣುಮಗುವಿಗೆ ಸರಯೂ ಎಂದು ನಾಮಕರಣ ಮಾಡಲಾಯಿತು.
ಇದೀಗ ಸರಯೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾಳೆ. ಕೃಷ್ಣ ಜನ್ಮಾಷ್ಠಮಿಯಂದು ಬೇಬಿ ಸರಯೂ ಹಾಡಿರುವ ಕೃಷ್ಣನ ಕುರಿತಾತ ಭಕ್ತಿಗೀತೆಯೊಂದು ಈಗ ಯೂಟ್ಯೂಬ್ನಲ್ಲಿ ಲಭ್ಯವಿದೆ.