ಚಿಕ್ಕಮಗಳೂರು: ಸ್ಯಾಂಡಲ್ ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ಶೃಂಗೇರಿಗೆ ಭೇಟಿ ನೀಡಿ ಶಾರದಾಂಭೆ ದರ್ಶನ ಪಡೆದಿದ್ದಾರೆ.
ಆದರೇ ಅವರು ಇಂದೇ ಶೃಂಗೇರಿಗೆ ಭೇಟಿ ನೀಡಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಕಳೆದ ಐದು ದಿನಗಳಿಂದ ಶಾರದಾಂಭೆ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಚಂಡಿ ಯಾಗ ಮಾಡಿಸುತ್ತಿದ್ದಾರೆ. ಇವತ್ತು ಯಾಗದ ಪೂರ್ಣಾಹುತಿ ಕಾರ್ಯ ನಡೆಯುತ್ತಿದ್ದು, ದೇವೇಗೌಡರ ಇಡೀ ಕುಟುಂಬವೇ ಶೃಂಗೇರಿಯಲ್ಲಿದೆ. ನಟಿ ರಚಿತಾ ಇವತ್ತೇ ಶೃಂಗೇರಿಗೆ ಬಂದಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ದೇವೇಗೌಡರ ಕುಟುಂಬದ ಪೂಜೆಗೆ ರಚಿತಾ ರಾಮ್ ಬಂದಿದ್ದಾರ ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡುತ್ತಿದೆ. ಆದರೆ ರಚಿತಾ ರಾಮ್ ಗೌಡರ ಪೂಜೆಯಲ್ಲಿ ಭಾಗಿಯಾಗಿಲ್ಲ. ದೇವಸ್ಥಾನಕ್ಕೆ ಬಂದು ಶಾರದಾಂಭೆ ಹಾಗೂ ತೋರಣ ಗಣಪತಿ ದರ್ಶನ ಪಡೆದು ಹೊರನಾಡಿಗೆ ಹೋಗಬೇಕು ಎಂದು ಹಿಂದಿರುಗಿದ್ದಾರೆ ಇದೆ ಸಂದರ್ಭದಲ್ಲಿ ರಚಿತಾಳನ್ನ ಕಂಡು ಅಲ್ಲಿದ್ದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದಿದ್ದು ವಿಶೇಷವಾಗಿತ್ತು.