ಬಾಲಿವುಡ್ನಲ್ಲಿ ಸದ್ಯಕ್ಕೆ ಬಿಕಿನಿ ಕಲ್ಚರ್ ಸಾಮಾನ್ಯ ಆಗಿ ಹೋಗಿದೆ. ಆದರೆ ಭಾರತೀಯ ಚಿತ್ರರಂಗದಲ್ಲಿ ಬಿಕಿನಿ ಕಲ್ಚರ್ ಪ್ರಯೋಗ ಮಾಡಿದ್ದು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಎಂಬ ವಿಚಾರ ಹೆಚ್ಚಿನ ಜನಕ್ಕೆ ತಿಳಿದಿಲ್ಲ.
ಇನ್ನು ಕನ್ನಡ ಚಿತ್ರರಂಗದಲ್ಲಿ 70 ರ ದಶಕದಲ್ಲೇ ಬಿಕಿನಿ ಕಲ್ಚರ್ ಆರಂಭವಾಗಿತ್ತು ಎಂದರೆ ನಿಮಗೆ ಆಶ್ಚರ್ಯ ಆಗಬಹುದು. 70ರ ದಶಕದಲ್ಲಿ ಪಡ್ಡೆಗಳ ಎದೆಯಲ್ಲಿ ಬಿರುಗಾಳಿ ಎಬ್ಬಿಸಿದ್ದ ಜಯಂತಿ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಿಕಿನಿ ತೊಟ್ಟು ನಟಿಸಿದ್ದಾರೆ. 1976ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಡಾ. ರಾಜ್ ಕುಮಾರ್ ಅಭಿನಯದ 'ಬಹದ್ದೂರ್ ಗಂಡು' ಚಿತ್ರದಲ್ಲಿ ಮೊದಲ ಬಾರಿಗೆ ಜಯಂತಿ ಸ್ವಿಮ್ ಸೂಟ್ನಲ್ಲಿ ಮಿಂಚಿ ಗಾಂಧಿನಗರದ ಮಂದಿ ಹುಬ್ಬೇರಿಸಿದ್ದರು.
ಇವರ ನಂತರ ಮತ್ತೆ ಬಿಕಿನಿ ತೊಟ್ಟು ಪಡ್ಡೆಗಳ ಮೈ ಬೆವರಿಳಿಸಿದ್ದ ನಟಿ ಅಂದ್ರೆ ಕನಸಿನ ರಾಣಿ ಮಾಲಾಶ್ರೀ. ಮಾಲಾಶ್ರೀ ಮೊದಲ ಚಿತ್ರ ರಾಘವೇಂದ್ರ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ 'ನಂಜುಂಡಿ ಕಲ್ಯಾಣ' ದಲ್ಲಿ ಬಿಕಿನಿ ತೊಟ್ಟು ಮಿಂಚಿದ್ದರು. ಅಲ್ಲದೆ ನಟ ಸುನಿಲ್ ಅಭಿನಯದ 'ಸ್ನೇಹದ ಕಡಲಲ್ಲಿ' ಚಿತ್ರದಲ್ಲೂ ಬಿಕಿನಿ ತೊಟ್ಟು ಸಮುದ್ರದಲ್ಲಿ ಈಜಿದ್ದರು.
ಇನ್ನು ಮಾಲಾಶ್ರೀ ಹಾದಿಯಲ್ಲಿ ಸಾಗಿದ ಸಂಜನಾ ಗಲ್ರಾನಿ ಕೂಡಾ ನಟಿಸಿದ ಮೊದಲ ಚಿತ್ರದಲ್ಲೇ ಸ್ವಿಮ್ ಸೂಟ್ನಲ್ಲಿ ಮಿಂಚಿ ಹದಿಹರೆಯದ ಯುವಕರ ಹೃದಯದ ಬಡಿತ ಹೆಚ್ಚಿಸಿದ್ರು. ಇದೇ ರೀತಿ ಬ್ಯೂಟಿ ಕ್ವೀನ್ ರಮ್ಯಾ ಕೂಡಾ 'ಆಕಾಶ್' ಚಿತ್ರದಲ್ಲಿ ಸ್ವಿಮ್ಮಿಂಗ್ ಡ್ರೆಸ್ ಧರಿಸಿ ಅಪ್ಪು ಜೊತೆ ಸ್ವಿಮ್ಮಿಂಗ್ ಪೂಲ್ಗೆ ಇಳಿದು ನಟಿಸಿದ್ದಾರೆ. ಇವರಲ್ಲದೆ ಸುಂಟರಗಾಳಿ ರಕ್ಷಿತ, ಹಾಗೂ ಕೊಡಗಿನ ಕುವರಿ ನಿಧಿ ಸುಬ್ಬಯ್ಯ ಬಿಕಿನಿ ಧರಿಸಿ ಬೋಲ್ಡ್ ನಟಿಯರು ಅನಿಸಿಕೊಂಡಿದ್ದರು.
ಅದೇ ರೀತಿ ಮಳೆ ಹುಡುಗಿ ಪೂಜಾಗಾಂಧಿ ಕೂಡಾ ನವರಸ ನಾಯಕ ಜಗ್ಗೇಶ್ ಅಭಿನಯದ 'ಕೋಡಗಾನ ಕೋಳಿ ನುಂಗಿತ್ತ' ಚಿತ್ರದಲ್ಲಿ ಬಿಕಿನಿ ತೊಟ್ಟು ಸೊಂಟ ಬಳುಕಿಸಿ ಮಡಿವಂತಿಕೆ ಮುರಿದಿದ್ರು. ಇದೇ ರೀತಿ ಬಿಕಿನಿ ತೊಟ್ಟ ಬೋಲ್ಡ್ ನಟಿಮಣಿಯರೆಂದರೆ ಶುಭಾ ಪೂಂಜಾ, ತುಪ್ಪದ ಹುಡುಗಿ ರಾಗಿಣಿ. ಐದ್ರಿತಾ ರೈ ಸಿನಿಮಾಗಳಲ್ಲಿ ಬಿಕಿನಿ ಧರಿಸದಿದ್ರೂ ಖಾಸಗಿ ಫೋಟೋಶೂಟ್ಗಳಲ್ಲಿ ಬಿಕಿನಿ ತೊಟ್ಟು ಬಿಂದಾಸ್ ಆಗಿ ಪೋಸ್ ಕೊಟ್ಟಿದ್ರು. ಹಾಗೂ ಇವರ ಜೊತೆಗೆ ಇಂಡಸ್ಟ್ರಿಗೆ ಬಂದಷ್ಟೇ ವೇಗದಲ್ಲಿ ಕಾಣೆಯಾದ ನಟಿ ರಿಷಿಕಾ ಸಿಂಗ್ ಕೂಡಾ 'ಕಳ್ಳ ಮಳ್ಳ ಸುಳ್ಳ' ಚಿತ್ರದಲ್ಲಿ ಬಿಕಿನಿ ತೊಟ್ಟಿದ್ರು.
ಒಟ್ಟಿನಲ್ಲಿ ಇವರೆಲ್ಲಾ ಮಡಿವಂತಿಕೆಯನ್ನು ಪಕ್ಕಕ್ಕಿಟ್ಟು ಬಿಕಿನಿ ಧರಿಸಿ ಇಡೀ ಚಿತ್ರರಂಗವೇ ತಮ್ಮತ್ತ ನೋಡುವಂತೆ ಮಾಡಿದ ಗಟ್ಟಿಗಿತ್ತಿಯರು ಎನ್ನಬಹುದು.