ETV Bharat / sitara

ಮುಖಕ್ಕೆ ದುಪ್ಪಟ್ಟಾ ಸುತ್ತಿ ಕಮರ್ಷಿಯಲ್ ಸ್ಟ್ರೀಟ್​​​ನಲ್ಲಿ ಶಾಪಿಂಗ್ ಮಾಡಿದ ಸ್ಯಾಂಡಲ್​​ವುಡ್​ ಖ್ಯಾತ ನಟಿ...! - Rachita ram in Commercial Street

'ವೀರಂ' ಚಿತ್ರದಲ್ಲಿ ಬ್ಯುಸಿ ಇರುವ ನಟಿ ರಚಿತಾ ರಾಮ್, ಚಿತ್ರಕ್ಕಾಗಿ ತಾವೇ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್​ ಸುತ್ತಾಡಿ ಶಾಪಿಂಗ್ ಮಾಡಿ ಬಂದಿದ್ದಾರೆ. ಚಿತ್ರತಂಡದೊಂದಿಗೆ ಮುಖಕ್ಕೆ ದುಪ್ಪಟ್ಟಾ ಸುತ್ತಿಕೊಂಡಿದ್ದ ರಚಿತಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Rachita ram
ರಚಿತಾ ರಾಮ್
author img

By

Published : Dec 25, 2020, 10:51 AM IST

ಸಿನಿಮಾ ನಟ-ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ಆಡಿಯೋ ಬಿಡುಗಡೆ ಸಮಾರಂಭ, ಚಿತ್ರೀಕರಣ, ಸಿನಿಮಾ ಮುಹೂರ್ತ, ಪ್ರೆಸ್​​​ಮೀಟ್​​​​​​​ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವುದನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವುದು ಅಪರೂಪ. ಒಂದು ವೇಳೆ ಹೊರಗೆ ಹೋಗಬೇಕಾದಂತ ಸಂದರ್ಭ ಬಂದಲ್ಲಿ ಮುಖಕ್ಕೆ ಮಾಸ್ಕ್​ ಕಟ್ಟಿ, ಸನ್​ ಗ್ಲಾಸ್ ಧರಿಸಿ ಹೊರಬರುತ್ತಾರೆ.

ಇದನ್ನೂ ಓದಿ: 'ತಲೈವಿ' ಚಿತ್ರದಲ್ಲಿ ಅರವಿಂದ್​ ಸ್ವಾಮಿ ಎಂಜಿಆರ್ ಲುಕ್ ವೈರಲ್​​​​​​​​​​​​

ಡಿಂಪಲ್ ಕ್ವೀನ್ ರಚಿತಾ ರಾಮ್​ ಕೂಡಾ ಇದೀಗ ಮುಖಕ್ಕೆ ದುಪ್ಪಟ್ಟ ಕಟ್ಟಿ, ಸನ್ ಗ್ಲಾಸ್ ಧರಿಸಿ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಸುತ್ತಾಡಿದ್ದಾರೆ. ರಚಿತಾ ಈ ರೀತಿ ಹೊರಗೆ ಬರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರು ಅನೇಕ ಬಾರಿ ತಮ್ಮ ಇಷ್ಟದ ಸ್ಥಳಗಳಿಗೆ ಹೋಗಿ, ತಮಗಿಷ್ಟವಾದ ತಿಂಡಿಗಳನ್ನು ತಿಂದು ಬಂದಿದ್ದಾರೆ. ರಚಿತಾ ರಾಮ್ ಸದ್ಯಕ್ಕೆ 'ವೀರಂ' ಚಿತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರವನ್ನು ಖದರ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಸ್ವತ: ರಚಿತಾ ರಾಮ್ ಅವರೇ ಕಮರ್ಷಿಯಲ್ ರೋಡ್​​​​ಗೆ ತೆರಳಿ ಚಿತ್ರಕ್ಕಾಗಿ ಶಾಪಿಂಗ್ ಮಾಡಿ ಬಂದಿದ್ದಾರೆ. ಬಿಳಿ ಬಣ್ಣದ ಕುರ್ತಾದೊಂದಿಗೆ ಕೆಂಪು ಬಣ್ಣದ ದುಪ್ಪಟ್ಟಾದಿಂದ ಮುಖ ಸುತ್ತಿಕೊಂಡಿರುವ ರಚಿತಾ ಸನ್​ ಗ್ಲಾಸ್ ಧರಿಸಿ ತಮಗಿಷ್ಟವಾದ ಕಾಸ್ಟ್ಯೂಮ್​​ಗಳನ್ನು ಆಯ್ಕೆ ಮಾಡಿದ್ದಾರೆ. "ಕಮರ್ಷಿಯಲ್ ಸ್ಟ್ರೀಟ್​​ಗೆ ಬಂದು ಕಾಸ್ಟ್ಯೂಮ್ ನಾವೇ ಶಾಪಿಂಗ್ ಮಾಡುತ್ತಿದ್ದೇವೆ. ಇದೊಂದು ಹೊಸ ಅನುಭವ, ನನ್ನನ್ನು ಯಾರೂ ಪತ್ತೆ ಹಚ್ಚುತ್ತಿಲ್ಲ. ತುಂಬಾ ಮಜಾ ಇದೆ, ಇಡೀ ಚಿತ್ರತಂಡವೇ ಶಾಪಿಂಗ್​ಗಾಗಿ ಬಂದಿದ್ದೇವೆ. ಎಲ್ಲರೂ ಮಾಸ್ಕ್​ ಹಾಕಿರುವುದರಿಂದ ಕಂಡುಹಿಡಿಯಲು ಸಾಧ್ಯ ಇಲ್ಲ" ಎಂದು ಹೇಳಿರುವ ರಚಿತಾ ರಾಮ್, ನಿರ್ದೇಶಕರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.