ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಡಾ. ಎಲ್ ಮುರುಗನ್ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಅಂಗ ಸಂಸ್ಥೆ ಆಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ, ಇರುವ ಕೆಲ ಸಮಸ್ಯೆಗಳ ಬಗ್ಗೆ, ಕೇಂದ್ರ ಸಚಿವ ಡಾ ಎಲ್ ಮುರುಗನ್ ಅವ್ರಿಗೆ, ಪತ್ರದ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಫಿಲ್ಸ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ನಟ ಶಿವರಾಜ್ ಕುಮಾರ್, ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಸೇರಿದಂತೆ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಉಪಸ್ಥಿತಿ ಇದ್ರು.
ಈ ಮನವಿ ಬಳಿಕ ಮಾತನಾಡಿದ ನಟ ಶಿವರಾಜ್ಕುಮಾರ್, ನಾನು ಇಲ್ಲಿ ಇಂಡಸ್ಟ್ರಿ ಲೀಡರ್ ಆಗಿ ಬಂದಿಲ್ಲ. ಒಬ್ಬ ನಟನಾಗಿ ಬಂದಿದ್ದೀನಿ, ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಅನಿಮಲ್ ಬೋರ್ಡ್ ಸಮಸ್ಯೆ ಆಗ್ತಿದೆ.. ಇದರ ಜೊತೆಗೆ ಹಿಂದಿ ಸೆನ್ಸಾರ್ ಬೋರ್ಡ್ ಸಮಸ್ಯೆಯೂ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ ಅಂತಾ ಶಿವರಾಜ್ಕುಮಾರ್ ಹೇಳಿದರು.
ಕಳೆದ ನಾಲ್ಕೈದು ದಿನಗಳಿಂದ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ವಿವಾದದ ಬಗ್ಗೆ ಪ್ರಶ್ನೆ ಮಾಡಲಾಯಿತು. ಆದರೆ, ಶಿವರಾಜ್ಕುಮಾರ್ ಈ ಸಮಯದಲ್ಲಿ ಬೇರೆಯವರ ಸಿನಿಮಾ ಬಗ್ಗೆ ಮಾತನಾಡೋದು ಸರಿಯಲ್ಲ ಅಂದರು. ಇದೇ ತಿಂಗಳು 24ಕ್ಕೆ ಇಂಡಿಯಾ ಹಾಗೂ ಪಾಕಿಸ್ತಾನ ಮ್ಯಾಚ್ ಇದೆ.
ಈ ಬಗ್ಗೆ ಮಾತನಾಡಿದ ಶಿವಣ್ಣ, ಯಾವತ್ತು ಇಂಡಿಯಾ-ಪಾಕಿಸ್ತಾನ ಮ್ಯಾಚ್ ಅಂದರೆ ಇಡೀ ವಿಶ್ವವೇ ಕಾಯುತ್ತೆ. ನಾನು ಕೂಡ ಆ ಮ್ಯಾಚ್ ನೋಡಲು ಕಾಯುತ್ತೀದ್ದೇನೆ ಅಂತಾ ಸೆಂಚುರಿ ಸ್ಟಾರ್ ಶಿವಣ್ಣ ಹೇಳಿದರು.