ಕೆಜಿಎಫ್, ಎರಡು ವರ್ಷಗಳ ಹಿಂದೆ ವಿಶ್ವಾದ್ಯಂತ ತೆರೆ ಕಂಡು ಸೂಪರ್ ಹಿಟ್ ಆದ ಸಿನಿಮಾ. ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿ ದಾಖಲೆ ಬರೆದ ಚಿತ್ರ ಇದು. ಅಷ್ಟೇ ಏಕೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿದ ಸಿನಿಮಾ.

ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ, ಭಾಗ ಒಂದಕ್ಕಿಂತ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ. ಚಿತ್ರದಲ್ಲಿ ತಮಿಳು, ತೆಲುಗು, ಬಾಲಿವುಡ್ ಚಿತ್ರರಂಗದ ದೊಡ್ಡ ನಟರು ನಟಿಸುತ್ತಿರುವುದು ತಿಳಿದ ವಿಚಾರ. ವಿಶೇಷ ಎಂದರೆ ಇಂದು ಬಾಲಿವುಡ್ ನಟ ಸಂಜಯ್ ದತ್ ಹುಟ್ಟುಹಬ್ಬ. ಸಂಜಯ್ ದತ್ ಕೂಡಾ ಕೆಜಿಎಫ್ ಸೀಕ್ವೆಲ್ನಲ್ಲಿ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಖಳನಾಯಕನಿಗೆ ಕೆಜಿಎಫ್ ಸೀಕ್ವೆಲ್ ಚಿತ್ರತಂಡ ಭರ್ಜರಿ ಗಿಫ್ಟ್ ನೀಡಿದೆ. ಯಶ್ ಎದುರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್ ಅವರ ಲುಕ್ ಕೆಜಿಎಫ್ ಚಾಪ್ಟರ್ 2 ನಲ್ಲಿ ಹೇಗಿರುತ್ತೆ ಅನ್ನೋದು ಕೋಟ್ಯಂತರ ಅಭಿಮಾನಿಗಳಿಗೆ ಕುತೂಹಲ ಇತ್ತು.ಈ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಸಂಜಯ್ ದತ್ ಕತ್ತಿ ಹಿಡಿದಿರುವ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್ ನೋಡಿದರೆ ಹಾಲಿವುಡ್ ಸಿನಿಮಾ ಪೋಸ್ಟರ್ನಂತೆ ಕಾಣುತ್ತಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿಜಯ್ ಕಿರಂಗದೂರು ಈ ಚಿತ್ರಕ್ಕೆ ದೊಡ್ಡ ಮೊತ್ತದ ಬಂಡವಾಳ ಹೂಡಿದ್ದಾರೆ. ಒಟ್ಟಿನಲ್ಲಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿರುವ ಅಧೀರನ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅವರ ಬರ್ತಡೇ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
-
‘ADHEERA’ - Inspired by the brutal ways of the vikings 🔥
— Hombale Films (@hombalefilms) July 29, 2020 " class="align-text-top noRightClick twitterSection" data="
Happy Birthday @duttsanjay sir.#KGFChapter2 #AdheeraFirstLook@VKiragandur @TheNameIsYash @prashanth_neel@SrinidhiShetty7 @TandonRaveena @Karthik1423 @excelmovies @ritesh_sid @AAFilmsIndia @FarOutAkhtar @VaaraahiCC pic.twitter.com/IJEHw7V3dj
">‘ADHEERA’ - Inspired by the brutal ways of the vikings 🔥
— Hombale Films (@hombalefilms) July 29, 2020
Happy Birthday @duttsanjay sir.#KGFChapter2 #AdheeraFirstLook@VKiragandur @TheNameIsYash @prashanth_neel@SrinidhiShetty7 @TandonRaveena @Karthik1423 @excelmovies @ritesh_sid @AAFilmsIndia @FarOutAkhtar @VaaraahiCC pic.twitter.com/IJEHw7V3dj‘ADHEERA’ - Inspired by the brutal ways of the vikings 🔥
— Hombale Films (@hombalefilms) July 29, 2020
Happy Birthday @duttsanjay sir.#KGFChapter2 #AdheeraFirstLook@VKiragandur @TheNameIsYash @prashanth_neel@SrinidhiShetty7 @TandonRaveena @Karthik1423 @excelmovies @ritesh_sid @AAFilmsIndia @FarOutAkhtar @VaaraahiCC pic.twitter.com/IJEHw7V3dj