ಹೌದು, ಸ್ಯಾಂಡಲ್ವುಡ್ ಸೇರಿದಂತೆ ಇತರ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ನಟಿ ಸಮೀರಾ ರೆಡ್ಡಿ ಮತ್ತೆ ವೈರಲ್ ಆಗಿದ್ದಾರೆ. ತಾಯ್ತನದಲ್ಲಿರುವ ಸಮೀರಾ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ರು. ಇದಕ್ಕೆ ಕೆಲವು ನೆಟಿಜನ್ಗಳು ಕೆಟ್ಟದಾಗಿ ಕಮೆಂಟ್ ಮಾಡಿದ್ರೆ, ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗಲೂ ನಟಿಯ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
- " class="align-text-top noRightClick twitterSection" data="
">
ತಾಯ್ತನದ ತುಂಬು ದಿನದಲ್ಲಿರುವ ಅವರು ಈ ಬಾರಿ ಈಜುಕೊಳದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ತಮ್ಮ 'ಇನ್‌ಸ್ಟಾಗ್ರಾಂ'ನಲ್ಲಿ ಈ ಫೋಟೋಗಳು ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ.
- " class="align-text-top noRightClick twitterSection" data="
">
ಈ ಮೊದಲಿನ ಫೋಟೋಗಳಿಗೆ ಟ್ರೋಲಿಗರು ಕೆಟ್ಟದಾಗಿ ಕಮೆಂಟ್ ಮಾಡಿದ್ರು. ಈ ಟೀಕೆಗಳಿಗೆ ಜಗ್ಗದ ಸಮೀರಾ ಈಗ ಮತ್ತೊಂದು ಫೋಟೋ ಶೂಟ್ಗೆ ಪೋಸ್ ನೀಡಿದ್ದಾರೆ. ಅಲ್ಲದೆ ಈ ಫೋಟೋಗಳಿಗೆ ಕ್ಯಾಪ್ಶನ್ ಕೂಡ ಬರೆದುಕೊಂಡಿದ್ದಾರೆ. ಸಮೀರಾ 9 ತಿಂಗಳ ಗರ್ಭಿಣಿಯಂತೆ.
- " class="align-text-top noRightClick twitterSection" data="
">