ನವದೆಹಲಿ: ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿರುವ ಸಮಂತಾ ರುತ್ ಪ್ರಭು ಸದ್ಯಕ್ಕೆ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಇಂಟರ್ನ್ಯಾಷನಲ್ ಪ್ರಾಜೆಕ್ಟ್ವೊಂದು ಸಮಂತಾ ಕೈ ಸೇರಿದ್ದು, ಬ್ರಿಟಿಷ್ ನಿರ್ದೇಶಕ ಫಿಲಿಪ್ ಜಾನ್ ಜೊತೆ ಅವರು ಕೆಲಸ ಮಾಡಲಿದ್ದಾರೆ.
Arrangements of Love: BAFTA- ವಿಜೇತ ಫಿಲಿಪ್ ಜಾನ್ ನಿರ್ದೇಶನ ಮಾಡಲಿರುವ ‘ಅರೇಂಜ್‌ಮೆಂಟ್ಸ್ ಆಫ್ ಲವ್’ ಸಿನಿಮಾದಲ್ಲಿ ಸಮಂತಾ ಮುಖ್ಯ ಪಾತ್ರ ನಿಭಾಯಿಸಲಿದ್ದಾರೆ. ನಿರ್ದೇಶಕನನ್ನು ತಬ್ಬಿಕೊಂಡಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಟಿ ಈ ಸಿಹಿ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ.
![ಬ್ರಿಟಿಷ್ ನಿರ್ದೇಶಕ ಫಿಲಿಪ್ ಜಾನ್ ಜೊತೆ ಸಮಂತಾ](https://etvbharatimages.akamaized.net/etvbharat/prod-images/260593762_2952328248366072_6698633372227043180_n_2611newsroom_1637902565_1070.jpg)
'ಅರೇಂಜ್‌ಮೆಂಟ್ಸ್ ಆಫ್ ಲವ್’ ಸಿನಿಮಾದಲ್ಲಿ ಸಮಂತಾ, ಸ್ವಂತ ಪತ್ತೇದಾರಿ ಏಜೆನ್ಸಿಯೊಂದನ್ನು ನಡೆಸುತ್ತಿರುವ ತಮಿಳು ಉಭಯಲಿಂಗಿ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈ ಸಿನಿಮಾವನ್ನು ಗುರು ಫಿಲ್ಮ್ಸ್ ಬ್ಯಾನರ್ ಆಡಿ ನಿರ್ಮಿಸಲಾಗುತ್ತಿದೆ.
ಹೊಸ ಪ್ರಾಜೆಕ್ಟ್ ಕುರಿತು ಮಾಹಿತಿ ಹಂಚಿಕೊಂಡ ಸಮಂತಾ, 'ಅರೇಂಜ್‌ಮೆಂಟ್ಸ್ ಆಫ್ ಲವ್' ಪ್ರಯಾಣವನ್ನು ಪ್ರಾರಂಭಿಸಿದಾಗ ನನಗೆ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ಫಿಲಿಪ್ ಜಾನ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಈ ಸಿನಿಮಾವು ಪ್ರೀತಿ ಮತ್ತು ಒಬ್ಬ ಮಹಿಳೆಯ ವೈಯಕ್ತಿಕ ಕಥೆಯನ್ನು ಒಳಗೊಂಡಿದೆ. ನನ್ನ ಪಾತ್ರ ಬಹಳ ವಿಭಿನ್ನವಾಗಿದ್ದು, ಸವಾಲಿನಿಂದ ಕೂಡಿದೆ. ಶೂಟಿಂಗ್ ಸೆಟ್ಗೆ ಹೋಗಲು ಕಾಯುತ್ತಿದ್ದೇನೆ ಎಂದಿದ್ದಾರೆ.