ತೆಲುಗು ನಟಿ ಸಮಂತಾ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟಿ. ತಮ್ಮ ಜೀವನ ಪಯಣದ ಪ್ರಮುಖ ಮಜಲುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತ ಅಭಿಮಾನಿಗಳ ಜತೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಸಮಂತಾಗೆ ತಮ್ಮ ಇನ್ಸ್ಟಾ ಫ್ಯಾಮಿಲಿಯಿಂದ ಬಿಗ್ ಗಿಫ್ಟ್ ಸಿಕ್ಕಿದೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 15 ಮಿಲಿಯನ್ ಹಿಂಬಾಲಕರನ್ನು ಸಂಪಾದನೆ ಮಾಡಿದ್ದಾರೆ. ತಮ್ಮನ್ನು ಫಾಲೋ ಮಾಡುವ ಈ ಅಭಿಮಾನಿಗಳಿಗೆಲ್ಲ ಸಮಂತಾ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ನನ್ನ ಪೋಸ್ಟ್ಗೆ ಲೈಕ್, ಕಮೆಂಟ್ ಮಾಡಿ ಪ್ರೋತ್ಸಾಹ ನೀಡುವ ನಿಮಗೆಲ್ಲರಿಗೂ ಧನ್ಯವಾದಗಳು.
ನಿಮ್ಮಿಂದ ನಿಮ್ಮ ಲೈಕ್ ಮತ್ತು ಕಮೆಂಟ್ಗಳಿಂದ ಸಹಾಯವಾಗಿದೆ. ಅಲ್ಲದೆ ನನಗೆ ನಿಮ್ಮ ಸೂಚನೆಗಳು ಸ್ಪೂರ್ತಿಯಾಗಿವೆ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಸಮಂತಾ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತ್ಯರನ್ನು ಮದುವೆಯಾಗಿದ್ದಾರೆ. ಈ ದಂಪತಿಯು ತಮ್ಮ ಲೈಫ್ ಬಗ್ಗೆ ಆಗಾಗ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡ್ತಾನೆ ಇರ್ತಾರೆ. ಅದ್ರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ಸಮಂತಾ ಸಾಕಷ್ಟು ಪೋಸ್ಟ್ಗಳನ್ನು ಮಾಡಿದ್ದು, ಆ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದರು.
ಸದ್ಯ ನಟಿಯು ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ನಲ್ಲಿ ಬ್ಯುಸಿ ಇದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಮುಂಬರುವ ಬೇಸಿಗೆಗೆ ಈ ವೆಬ್ ಸಿರೀಸ್ ತೆರೆ ಕಾಣುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಫ್ಯಾಮಿಲಿ ಮ್ಯಾನ್ ಮೊದಲ ಭಾಗ ಸಖತ್ ಹಿಟ್ ಆಗಿದೆ.